ETV Bharat / sports

ಬೀಚ್​ನಲ್ಲಿ ಮುಳುಗುತ್ತಿದ್ದ ಮಗನನ್ನು ಕಾಪಾಡಲು ಹೋಗಿ ದುರಂತ ಸಾವು ಕಂಡ WWE ಸೂಪರ್​ ಸ್ಟಾರ್​

author img

By

Published : May 21, 2020, 12:09 PM IST

Updated : May 21, 2020, 2:06 PM IST

39 ವಯಸ್ಸಿನ ಗ್ಯಾಸ್​ಪಾರ್ಡ್ ಕ್ಯಾಲಿಫೋರ್ನಿಯಾದ ವೆನಿಸ್ ಬೀಚ್‌ಗೆ ತಮ್ಮ ಮಗನೊಂದಿಗೆ ಈಜಲು ತೆರಳಿದ್ದ ಸಂದರ್ಭದಲ್ಲಿ ಕಾಣೆಯಾಗಿದ್ದರು. ಇದೀಗ ಮೂರು ದಿನಗಳ ನಂತರ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಗ್ಯಾಸ್​ಪಾರ್ಡ್ ದುರಂತ ಸಾವು
ಗ್ಯಾಸ್​ಪಾರ್ಡ್ ದುರಂತ ಸಾವು

ಕ್ಯಾಲಿಫೋರ್ನಿಯಾ: ಬೀಚ್​ಗೆ ಈಜಲು ತೆರಳಿದ್ದ ವೇಳೆ ಅಪಾಯದಲ್ಲಿ ಸಿಲುಕಿದ್ದ ಮಗನನ್ನು ಕಾಪಾಡಲು ಹೋದ WWE ಸೂಪರ್​ ಸ್ಟಾರ್​ ಶಾಡ್​ ಗ್ಯಾಸ್​ಪಾರ್ಡ್​ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

39 ವರ್ಷದ ವಯಸ್ಸಿನ ಗ್ಯಾಸ್​ಪಾರ್ಡ್ ಕ್ಯಾಲಿಫೋರ್ನಿಯಾದ ವೆನಿಸ್ ಬೀಚ್‌ಗೆ ತಮ್ಮ ಮಗನೊಂದಿಗೆ ಈಜಲು ತೆರಳಿದ್ದ ಸಂದರ್ಭದಲ್ಲಿ ಕಾಣೆಯಾಗಿದ್ದರು. ಇದೀಗ ಮೂರು ದಿನಗಳ ನಂತರ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಲೈಫ್​ಗಾರ್ಡ್ಸ್​ ಗ್ಯಾಸ್​ಪರ್ಡ್​ ಅವರ ಮಗನನ್ನು ಕಾಪಾಡುವಲ್ಲಿ ಯಶಸ್ವಿಯಾದರೂ, ಗ್ಯಾಸ್​ಪರ್ಡ್​ ಅವರನ್ನು ಹುಡುಕುವಲ್ಲಿ ವಿಫಲರಾಗಿದ್ದರು. ಇದೀಗ ಅವರ ನಿಧನದ ಸುದ್ದಿ ಖಚಿತವಾಗಿದ್ದು, ಅವರ ಸಾವಿಗೆ ರೆಸ್ಲಿಂಗ್​ ಕುಟುಂಬ ಸಂತಾಪ ಸೂಚಿಸಿದೆ.

ಗ್ಯಾಸ್‌ಪಾರ್ಡ್, ಡಬ್ಲ್ಯೂಡಬ್ಲ್ಯೂಇನಲ್ಲಿ ಜೆಟಿಜಿ ಜೊತೆ ಜನಪ್ರಿಯರಾಗಿದ್ದರು. ಇಬ್ಬರ ಜೋಡಿ 2009ರಲ್ಲಿ ಡಬ್ಲ್ಯೂಡಬ್ಲ್ಯೂಇ ಟ್ಯಾಗ್‌ ಟೀಮ್ ಪ್ರಶಸ್ತಿ ಸಮ್ಮರ್ ಸ್ಲ್ಯಾಮ್‌ನಲ್ಲೂ ಪಾಲ್ಗೊಂಡಿತ್ತು.

ಡಬ್ಲ್ಯೂಡಬ್ಲ್ಯೂಇ ಲೆಜೆಂಡ್​ಗಳಾದ ಗೋಲ್ಡ್​ಬೆರ್ಗ್​ , ತ್ರಿಪಲ್​ ಹೆಚ್​, ಕ್ರಿಸ್​ ಜರಿಕೊ, ದಿ ರಾಕ್​ ಸೇರಿದಂತೆ ಹಲವು ಸೂಪರ್​ ಸ್ಟಾರ್​ಗಳು ಸಂತಾಪ ಸೂಚಿಸಿದ್ದಾರೆ.

Last Updated : May 21, 2020, 2:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.