ನವದೆಹಲಿ: ಬಾಕ್ಸಿಂಗ್ ಟೂರ್ನಮೆಂಟ್ಗಾಗಿ ಒಂದು ತಿಂಗಳ ಕಾಲ ಇಸ್ತಾಂಬೂಲ್ ಪ್ರವಾಸ ಕೈಗೊಂಡಿದ್ದ ಮೂವರು ಬಾಕ್ಸರ್ಗಳು ಸೇರಿದಂತೆ ಭಾರತ ಬಾಕ್ಸಿಂಗ್ ತಂಡದ ಐವರು ಸದಸ್ಯರಿಗೆ ಕೋವಿಡ್ 19 ದೃಢಪಟ್ಟಿದೆ.
ಬಾಸ್ಫರಸ್ ಬಾಕ್ಸಿಂಗ್ ಟೂರ್ನಮೆಂಟ್ಗೆ ಭಾರತ ತಂಡದ ತಿಂಗಳ ಹಿಂದೆ ಪ್ರವಾಸ ಕೈಗೊಂಡಿತ್ತು. ಇದೀಗ ಟೂರ್ನಿ ಮುಗಿದಿದ್ದು, ತವರಿಗೆ ಮರಳಲು ಮುನ್ನ ನಡೆಸಿದ ಕೋವಿಡ್ 19 ಪರೀಕ್ಷೆಯಲ್ಲಿ ಐವರಿಗೆ ಪಾಸಿಟಿವ್ ಬಂದಿದೆ.
ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಗೌರವ್ ಸೋಲಂಕಿ(57ಕೆಜಿ), ಬ್ರಿಜೇಶ್ ಯಾದವ್(81ಕೆಜಿ) ಮತ್ತು ದುರ್ಯೋಧನ ನೇಗಿ (69ಕೆಜಿ) ಕೋವಿಡ್ 19 ಪಾಸಿಟಿವ್ ದೃಢಪಟ್ಟಿರುವ ಬಾಕ್ಸರ್ಗಳಾಗಿದ್ದಾರೆ. ಟೀಮ್ ಕೋಚ್ ಧರ್ಮೇಂದರ್ ಯಾದವ್ ಮತ್ತು ವಿಡಿಯೋ ವಿಶ್ಲೇಷಕ ಮತ್ತು ಫಿಸಿಯೋಥೆರೆಫಿಸ್ಟ್ಗೂ ಕೂಡ ಕೋವಿಡ್ 19 ಪಾಸಿಟಿವ್ ವರದಿ ಪಡೆದಿದ್ದಾರೆ.
ಇದನ್ನು ಓದಿ:ಮಹಿಳಾ ಟಿ20 ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಭಾರತದ ಶೆಫಾಲಿ ವರ್ಮಾ
ಕೊರೊನಾ ವೈರಸ್ ಪರೀಕ್ಷೆಯಲ್ಲಿ ನಮೆಗೆ ಪಾಸಿಟಿವ್ ದೃಢವಾಗಿ ಒಂದು ವಾರವಾಗಿದೆ. ಸ್ಥಳೀಯ ಆಯೋಜನಾ ಸಮಿತಿಯು ಪರೀಕ್ಷೆಯನ್ನು ನಡೆಸಿತ್ತು. ಇದೀಗ ಮಂಗಳವಾರ ಎರಡನೇ ಪರೀಕ್ಷೆಯನ್ನು ನಡೆಸಲಾಗುವುದು. ಈ ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ, ನಾವು ಇಸ್ತಾಂಬುಲ್‌ನಿಂದ ಹೊರಹೋಗಬಹುದು, ಇಲ್ಲದಿದ್ದರೆ ಇನ್ನೊಂದು ವಾರ ಇಲ್ಲೇ ಉಳಿಯಬೇಕಾಗುತ್ತದೆ ಎಂದು ಅಲ್ಲಿ ಸಿಲುಕಿಕೊಂಡಿರುವ ಬಾಕ್ಸರ್ ಒಬ್ಬರು ತಿಳಿಸಿದ್ದಾರೆ.
ಮಾರ್ಚ್ 15ರಿಂದ ಆರಂಭವಾಗಿದ್ದ ಈ ಟೂರ್ನಿಯಲ್ಲಿ ಭಾರತ ತಂಡ 2 ಕಂಚಿನ ಪದಕ ಗೆದ್ದಿತ್ತು ನಿಖಾತ್ ಝರೀನ್ ಮತ್ತು ಗೌರವ್ ಸೋಲಂಕಿಗೆ ಈ ಪದಕ ಸಂದಿದ್ದವು.