ಅಲ್ ಖೋರ್(ಕತಾರ್): ನಿರೀಕ್ಷಿತ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್ ಫ್ರಾನ್ಸ್, 2ನೇ ಸೆಮಿಫೈನಲ್ನಲ್ಲಿ ಮೊರಾಕ್ಕೊವನ್ನು 2-0 ಗೋಲುಗಳ ಅಂತರದಿಂದ ಸೋಲಿಸುವ ಮೂಲಕ ಫೈನಲ್ಗೆ ಲಗ್ಗೆ ಇಟ್ಟಿದೆ. ಈಗಾಗಲೇ ಫೈನಲ್ಗೇರಿರುವ ಎರಡು ಬಾರಿಯ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ ಪ್ರಶಸ್ತಿಗಾಗಿ ಫ್ರಾನ್ಸ್ ಅಂತಿಮ ಹಣಾಹಣಿ ನಡೆಸಲಿದೆ.
ಇಲ್ಲಿನ ಅಲ್ ಬೇತ್ ಸ್ಟೇಡಿಯಂನಲ್ಲಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ನ ಥಿಯೋ ಹೆರ್ನಾಂಡೆಜ್ ಮತ್ತು ರಾಂಡಾಲ್ ಕೊಲೊ ಮೌನಿ ಗಳಿಸಿದ ತಲಾ ಒಂದು ಗೋಲುಗಳು, ಮೊದಲ ಬಾರಿಗೆ ಫೈನಲ್ಗೇರಿ ಇತಿಹಾಸ ಸೃಷ್ಟಿಸುವ ತವಕದಲ್ಲಿದ್ದ ಮೊರಾಕ್ಕೊ ಕನಸಿಗೆ ನೀರೆರಚಿದವು. ಹಾಲಿ ಚಾಂಪಿಯನ್ ಸತತ ಎರಡನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.
-
France are through to the final! 👊@adidasfootball | #FIFAWorldCup
— FIFA World Cup (@FIFAWorldCup) December 14, 2022 " class="align-text-top noRightClick twitterSection" data="
">France are through to the final! 👊@adidasfootball | #FIFAWorldCup
— FIFA World Cup (@FIFAWorldCup) December 14, 2022France are through to the final! 👊@adidasfootball | #FIFAWorldCup
— FIFA World Cup (@FIFAWorldCup) December 14, 2022
ಐದೇ ನಿಮಿಷದಲ್ಲಿ ಮೊದಲ ಗೋಲು: ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಫ್ರಾನ್ಸ್, ಮೊರಾಕ್ಕೊ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸಿತು. ಐದನೇ ನಿಮಿಷದಲ್ಲಿ ಆಂಟೊಯಿನ್ ಗ್ರೀಜ್‌ಮನ್ ನೀಡಿದ ಪಾಸ್ ಅನ್ನು ಕೈಲಿಯನ್ ಎಂಬಪ್ಪೆ ಗೋಲು ಮಾಡುವಲ್ಲಿ ಅಲ್ಪದರಲ್ಲೇ ತಪ್ಪಿಸಿಕೊಂಡರು. ಮರುಕ್ಷಣದಲ್ಲೇ ಥಿಯೋ ಹೆರ್ನಾಂಡೆಜ್ ಗೋಲಿನ ಎಡಭಾಗದಿಂದ ಬಾರಿಸಿದ ಚೆಂಡು ಆಟಗಾರರನ್ನು ಬೇಧಿಸಿ ಕಂಬಕ್ಕೆ ಬಡಿದು ಬಲೆ ಸೇರಿತು. 5 ನಿಮಿಷದಲ್ಲಿ ಗೋಲು ಗಳಿಸಿದ ಫ್ರಾನ್ಸ್ 1-0 ಮುನ್ನಡೆ ಪಡೆದುಕೊಂಡಿತು.
ಇದರ ನಂತರ ತುಂಬಾ ಚುರುಕಾದ ಮೊರಾಕ್ಕೊ ಗೋಲು ಗಳಿಸಲು ಶತಪ್ರಯತ್ನ ನಡೆಸಿತು. ಆದರೆ, ಅಂತಿಮ ಕ್ಷಣಗಳಲ್ಲಿ ಮಾಡಿದ ತಪ್ಪಿನಿಂದಾಗಿ ನಿರಾಸೆ ಅನುಭವಿಸಿತು. ಗೋಲು ಗಳಿಸುವ ಭರದಲ್ಲಿ ಸೋಫಿಯಾನೆ ಬೌಫಲ್ ಫೌಲ್ ಮಾಡಿದ್ದರಿಂದ ರೆಫ್ರಿ ಹಳದಿ ಕಾರ್ಡ್ ತೋರಿಸಿದರು. ಪ್ರಥಮಾರ್ಧದಲ್ಲಿ ಫ್ರಾನ್ಸ್ ಪೂರ್ಣ ಪಾರಮ್ಯ ಮೆರೆಯಿತು.
ರಾಂಡಲ್ ಕೊಲೊ ಮೌನಿ ಮ್ಯಾಜಿಕ್: ಬಿಗಿಪಟ್ಟಿನಿಂದ ಸಾಗಿದ್ದ ಪಂದ್ಯದಲ್ಲಿ 79ನೇ ನಿಮಿಷ ಫ್ರಾನ್ಸ್ನ ರಾಂಡಲ್ ಕೊಲೊ ಮೌನಿಯ ಕಾಲ್ಚಳಕದಿಂದ ಗೋಲು ದಾಖಲಾಯಿತು. 2-0 ಮುನ್ನಡೆಯೊಂದಿಗೆ ಸಾಗಿದ ಫ್ರಾನ್ಸ್, ಮೊರಕ್ಕೊಗೆ ಯಾವುದೇ ಹಂತದಲ್ಲಿ ಗೋಲು ಬಿಟ್ಟುಕೊಡಲಿಲ್ಲ.
ಪಂದ್ಯ ಉಭಯ ತಂಡಗಳ ಬಲಾಬಲಕ್ಕೆ ಸಾಕ್ಷಿಯಾಯಿತು. ಫ್ರಾನ್ಸ್ 14 ಬಾರಿ ಗೋಲು ಬಾರಿಸಲು ಯತ್ನಿಸಿದರೆ, 13 ಬಾರಿಯ ಪ್ರಯತ್ನದಲ್ಲಿ ಮೊರಾಕ್ಕೊ ವಿಫಲವಾಯಿತು. 11 ಬಾರಿ ಮಾಡಿದ ತಪ್ಪುಗಳು ದುಬಾರಿಯಾಯಿತು. ಸೋಲಿನ ಮಧ್ಯೆಯೂ ತಂಡದ ಸಂಯೋಜನೆ ಅತ್ಯದ್ಭುತವಾಗಿತ್ತು. ಕೊನೆಯಲ್ಲಿ ಅದೃಷ್ಟ ಫ್ರಾನ್ಸ್ ಬೆನ್ನೆಗೇರಿ ಫೈನಲ್ ತಲುಪಿತು.
ಡಿಸೆಂಬರ್ 17 ರಂದು ಸೆಮಿಫೈನಲ್ನಲ್ಲಿ ಸೋತ ತಂಡಗಳಾದ ಮೊರಾಕ್ಕೊ ಮತ್ತು ಕ್ರೊವೇಷಿಯಾ ಮೂರನೇ ಸ್ಥಾನಕ್ಕಾಗಿ ಸೆಣಸಾಡಲಿವೆ. ಮರುದಿನ ಅಂದರೆ 18 ರಂದು ನಡೆಯುವ ಹೈವೋಲ್ಟೇಜ್ ಫೈನಲ್ ಕದನದಲ್ಲಿ ಎರಡು ಬಾರಿಯ ಚಾಂಪಿಯನ್ ಅರ್ಜೆಂಟೀನಾ, ಎರಡನೇ ವಿಶ್ವಕಪ್ ಮೇಲೆ ಗುರಿ ನೆಟ್ಟಿರುವ ಹಾಲಿ ಚಾಂಪಿಯನ್ ಫ್ರಾನ್ಸ್ ಸೆಣಸಾಡಲಿವೆ.