ಕಾಸರಗೋಡು (ಕೇರಳ): ಇಡೀ ವಿಶ್ವವೇ ಫಿಫಾ ವಿಶ್ವಕಪ್ ಜಪ ಮಾಡುತ್ತಿದ್ದರೆ, ಇಲ್ಲೊಂದು ಕೇರಳದ ಕುಟುಂಬ ಕತಾರ್ನಲ್ಲಿ ನಡೆಯುತ್ತಿರುವ ವಿಶ್ವಕಪ್ ಫುಟ್ಬಾಲ್ ಮೇಲಿನ ತಮ್ಮ ಪ್ರೀತಿಯನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.
ಕೇರಳದ ಸಜಿಲಾಲ್ ಕುಟುಂಬಕ್ಕೆ ಅರ್ಜೆಂಟೀನಾ ಫುಟ್ಬಾಲ್ ತಂಡದ ಮೇಲೆ ಅತೀವ ಅಭಿಮಾನ. ಫುಟ್ಬಾಲ್ ವಿಶ್ವಕಪ್ನಲ್ಲಿ ಅರ್ಜೆಂಟೀನಾ ತಂಡಕ್ಕೆ ತಮ್ಮ ಬೆಂಬಲ ಸೂಚಿಸಲು ಸುಜಿಲಾಲ್ ಅವರ ಪತ್ನಿ ಮತ್ತು ಇಬ್ಬರು ಪುತ್ರರು ನೀಲಿ ಪಟ್ಟಿಯ ಬಿಳಿ ಟಿ - ಶರ್ಟ್‌ಗಳನ್ನು ಧರಿಸಿದ್ದು ಮಾತ್ರವಲ್ಲದೇ, ಅರ್ಜೆಂಟೀನಾ ಮೇಲಿನ ಕ್ರೇಜ್ನಿಂದ ತಮ್ಮ ಕಾರಿಗೂ ನೀಲಿ ಮತ್ತು ಬಿಳಿ ಬಣ್ಣವನ್ನು ಬಳಿದಿದ್ದಾರೆ.
ಇದಷ್ಟೇ ಅಲ್ಲದೆ ತಮ್ಮ ಮನೆಯ ಆವರಣದ ಸುತ್ತಲೂ ಅರ್ಜೆಂಟೀನಾದ ಧ್ವಜಗಳನ್ನು ಹಾರಿಸಿದ್ದಾರೆ. ಸಜಿಲಾಲ್ ಅವರಿಗೆ ಅರ್ಜೆಂಟೀನಾ ಎಂಬುದು ಒಂದು ದೇಶದ ಹೆಸರು ಮಾತ್ರವಲ್ಲ, ಅವರ ಮಗನಿಗೂ ಅರ್ಜೆಂಟೀನಾ ಎಂದು ಹೆಸರಿಟ್ಟಿದ್ದಾರೆ. ಅರ್ಜೆಂಟೀನಾ ಫುಟ್ಬಾಲ್ ತಂಡದ ಮಹಾಭಿಮಾನಿಯಾಗಿರುವ ಸುಜಿಲಾಲ್ ತಮ್ಮ ಮೊದಲ ಮಗನಿಗೆ ಮಾರ್ಟಿನ್ ಅರ್ಜೆಂಟೀನಾ ಪಾಲ್ ಎಂದು ಹೆಸರಿಟ್ಟಿದ್ದಾರೆ. ಫಿಫಾ ವಿಶ್ವಕಪ್ ಆರಂಭ ಆಗುತ್ತಿದ್ದಂತೆ ತಮ್ಮ ಮನೆಗೂ ಬಿಳಿ ಹಾಗೂ ನೀಲಿ ಬಣ್ಣವನ್ನು ಬಳಿಯುವ ಮೂಲಕ ತಮ್ಮ ಅಭಿಮಾನ ಮೆರೆದಿದ್ದಾರೆ.
ಇದನ್ನೂ ಓದಿ: ಅನುಚಿತ ವರ್ತನೆ: ಕ್ರಿಸ್ಟಿಯಾನೊ ರೊನಾಲ್ಡೊಗೆ 50 ಲಕ್ಷ ದಂಡ, 2 ಪಂದ್ಯ ನಿಷೇಧ