ಸಿಡ್ನಿ (ಆಸ್ಟ್ರೇಲಿಯಾ) : ಭಾನುವಾರ ಇಲ್ಲಿ ನಡೆದ ಫಿಫಾ ಮಹಿಳಾ ವರ್ಲ್ಡ್ ಕಪ್ನಲ್ಲಿ ನಾರ್ವೇ 6 ಗೋಲುಗಳನ್ನು ಗಳಿಸುವ ಮೂಲಕ ಫಿಲಿಪ್ಪೀನ್ಸ್ ತಂಡದ ವಿರುದ್ಧ ಭರ್ಜರಿ ಗೆಲುವು ಗಳಿಸಿದೆ. ಈ ಮೂಲಕ ನಾರ್ವೇ ಮುಂದಿನ ಹಂತದ ರೌಂಡ್ 16 ಸುತ್ತು ಪ್ರವೇಶಿಸಿದೆ. ನ್ಯೂಜಿಲೆಂಡ್ ಮತ್ತು ಸ್ವಿಟ್ಜರ್ಲೆಂಡ್ ನಡುವೆ ನಡೆದ ಪಂದ್ಯ ಡ್ರಾ ಆಗಿದ್ದರಿಂದ ನ್ಯೂಜಿಲೆಂಡ್ ಗುಂಪು ಹಂತದ ಪಂದ್ಯದಲ್ಲೇ ಹೊರಬಿತ್ತು.
ಜರ್ಮನಿಗೆ ಶಾಕ್: ಕೊಲಂಬಿಯಾ ಮತ್ತು ಜರ್ಮನಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಜರ್ಮನಿ ಸೋಲು ಅನುಭವಿಸಿತು. ಈ ಮೂಲಕ ಎರಡು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಜರ್ಮನಿಗೆ ಕೊಲಂಬಿಯಾ ಆಘಾತ ನೀಡಿತು. ತಲಾ ಒಂದೊಂದು ಗೋಲು ಗಳಿಸಿದ್ದ ಜರ್ಮನಿ ಮತ್ತು ಕೊಲಂಬಿಯಾ ಕೊನೆಯ ಹಂತದಲ್ಲಿ ಅಲೆಕ್ಸಾಂಡ್ರ ಪೋಪ್ ಅವರ ಪೆನಾಲ್ಟಿ ಶೂಟೌಟ್ನೊಂದಿಗೆ ಕೊಲಂಬಿಯಾ ಗೆಲುವಿನ ನಗೆ ಬೀರಿತು. ಈ ಮೂಲಕ 20 ವರ್ಷಗಳ ನಂತರ ಗುಂಪು ಪಂದ್ಯದಲ್ಲಿ ಜರ್ಮನಿ ಸೋಲುಂಡಿತು. ಇದಕ್ಕೂ ಮೊದಲು ವೆನೇಗಾಸ್ ಅವರು ಕೊಲಂಬಿಯಾ ಪರ ಗೋಲ್ ಗಳಿಸಿದ್ದರು. ಕೊಲಂಬಿಯಾ ರೌಂಡ್ 16 ಸುತ್ತಿನ ಪಂದ್ಯಗಳಿಗೆ ಅರ್ಹತೆ ಪಡೆಯಿತು. ಪಂದ್ಯ ಸೋತರೂ ಜರ್ಮನಿ ರೌಂಡ್ 16ಗೆ ಅರ್ಹತೆ ಪಡೆದಿದೆ.
ಕೊಲಂಬಿಯಾ ಆರು ಅಂಕಗಳೊಂದಿಗೆ ಹೆಚ್ ಗುಂಪಿನ ತಂಡಗಳಲ್ಲಿ ಅಗ್ರಸ್ಥಾನದಲ್ಲಿದೆ. ರೌಂಡ್ 16 ಪಂದ್ಯಕ್ಕೆ ಅರ್ಹತೆ ಸಿಕ್ಕರೂ ನಾಕೌಟ್ ಪಂದ್ಯಕ್ಕೆ ಅರ್ಹತೆ ಪಡೆದಿಲ್ಲ. ಜರ್ಮನಿ ಮತ್ತು ಮೊರಾಕ್ಕೋ ತಲಾ 3 ಅಂಕಗಳೊಂದಿಗೆ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ. ಇದಕ್ಕೂ ಮೊದಲು ಮೊರಾಕ್ಕೋ ಸೌತ್ ಕೊರಿಯಾವನ್ನು 1-0 ಅಂಕಗಳಿಂದ ಮಣಿಸಿತ್ತು. ಈ ಮೂಲಕ ಮೊರಾಕ್ಕೋ ಮೊದಲ ಬಾರಿಗೆ ವಿಶ್ವಕಪ್ ಪಂದ್ಯಾಟದಲ್ಲಿ ಗೆಲುವು ಸಾಧಿಸಿದೆ. ಎರಡು ಸತತ ಸೋಲಿನ ನಂತರವೂ ಸೌತ್ ಕೊರಿಯಾ ಪಂದ್ಯಾಟದಿಂದ ಹೊರಬಿದ್ದಿಲ್ಲ.
ಗ್ರೂಪ್ 16 ಸುತ್ತಿನ ಪಂದ್ಯಾಟಕ್ಕೆ ಅರ್ಹತೆ ಪಡೆದ ತಂಡಗಳು..: ಎ ಗುಂಪಿನಲ್ಲಿ, ಸ್ವಿಟ್ಜರ್ಲೆಂಡ್ ಮೂರು ಪಂದ್ಯಗಳಲ್ಲಿ 5 ಅಂಕ ಗಳಿಸಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ನಾರ್ವೆ 4 ಅಂಕಗಳೊಂದಿಗೆ ಎರಡನೇ ಸ್ಥಾನ ಗಳಿಸಿದೆ. ನ್ಯೂಜಿಲೆಂಡ್ 4 ಮತ್ತು ಪಿಲಿಪ್ಪೀನ್ಸ್ 3 ಅಂಕಗಳೊಂದಿಗೆ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದೆ. ಈ ಮೂಲಕ ಸ್ವಿಟ್ಜರ್ಲೆಂಡ್ ಮತ್ತು ನಾರ್ವೆ ಗ್ರೂಪ್ 16 ಪಂದ್ಯ ಸುತ್ತು ಪ್ರವೇಶಿಸಿವೆ.
ಬಿ ಗುಂಪಿನಲ್ಲಿ, ನೈಜೀರಿಯಾ ಮತ್ತು ಕೆನಡಾ ತಂಡಗಳು ತಲಾ ನಾಲ್ಕು ಅಂಕಗಳನ್ನು ಗಳಿಸಿ ಅಗ್ರಸ್ಥಾನದಲ್ಲಿವೆ. ಆಸ್ಟ್ರೇಲಿಯಾ 3 ಮತ್ತು ಐರ್ಲೆಂಡ್ ಯಾವುದೇ ಅಂಕಗಳನ್ನು ಪಡೆದಿಲ್ಲ. ಸಿ ಗುಂಪಿನಲ್ಲಿ, ಸ್ಪೇನ್ ಮತ್ತು ಜಪಾನ್ ತಲಾ ಎರಡು ಪಂದ್ಯಗಳನ್ನು ಗೆದ್ದಿದ್ದು, 6 ಅಂಕಗಳಿಂದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿವೆ. ಕೋಸ್ಟರಿಕಾ ಮತ್ತು ಜಾಂಬಿಯಾ ಎರಡು ಪಂದ್ಯಗಳಲ್ಲೂ ಸೋಲು ಅನುಭವಿಸಿ ಖಾತೆ ತೆರೆದಿಲ್ಲ. ಡಿ ಗುಂಪಿನಲ್ಲಿ, ಇಂಗ್ಲೆಂಡ್ ಮತ್ತು ಡೆನ್ಮಾರ್ಕ್, ಇ ಗುಂಪಿನಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ನೆದರ್ಲ್ಯಾಂಡ್ಸ್, ಎಫ್ ಗುಂಪಿನಲ್ಲಿ ಫ್ರಾನ್ಸ್ ಮತ್ತು ಜಮೈಕಾ, ಜಿ ಗುಂಪಿನಲ್ಲಿ ಸ್ವೀಡನ್ ಮತ್ತು ಇಟಲಿ, ಹೆಚ್ ಗುಂಪಿನಲ್ಲಿ ಕೊಲಂಬಿಯಾ ಮತ್ತು ಜರ್ಮನಿ ಅಗ್ರಸ್ಥಾನ ಪಡೆಯುವ ಮೂಲಕ ಮುಂದಿನ ಸುತ್ತಿನ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿಕೊಂಡಿವೆ.
ಇದನ್ನೂ ಓದಿ : ಸ್ಪ್ಯಾನಿಷ್ ಹಾಕಿ ಫೆಡರೇಶನ್ ಇಂಟರ್ನ್ಯಾಷನಲ್ ಟೂರ್ನಮೆಂಟ್‌ನ ಪ್ರಶಸ್ತಿ ಗೆದ್ದ ಭಾರತೀಯ ವನಿತೆಯರ ಪಡೆ