ದೋಹಾ: ಅಮೆರಿಕಾದ ಓಟಗಾರ್ತಿ ಆಲಿಸನ್ ಫೆಲಿಕ್ಸ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 12 ಚಿನ್ನದ ಪದಕ ಪಡೆಯುವ ಮೂಲಕ ಜಮೈಕನ್ ಓಟಗಾರ ಉಸೇನ್ ಬೋಲ್ಟ್ ದಾಖಲೆ ಮುರಿದಿದ್ದಾರೆ.
ಖತಾರ್ನ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅಮೆರಿಕದ ಆಲಿಸನ್ ಫೆಲಿಕ್ಸ್ ಅವರು 4X400 ಮೀಟರ್ ರಿಲೆಯಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ವೃತ್ತಿ ಜೀವನದ 12ನೇ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಈ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 11 ಚಿನ್ನದ ಪದಕ ಗೆದ್ದಿದ್ದ 100 ಮೀಟರ್ ಓಟದ ವಿಶ್ವದಾಖಲೆಯ ವೀರ ಉಸೇನ್ ಬೋಲ್ಟ್ ಅವರನ್ನು ಹಿಂದಿಕ್ಕಿದರು.
33 ವರ್ಷದ ಅಲಿಸನ್ ಫೆಲಿಕ್ಸ್ 2005 ರಿಂದ 200, 400,100X4 ರಿಲೆ ಹಾಗೂ 4X400 ರಿಲೆಯಲ್ಲಿ ಭಾಗವಹಿಸಿ ಒಟ್ಟಾರೆ 12 ಚಿನ್ನದ ಪದ ಗೆದ್ದಿದ್ದಾರೆ. ಫೆಲಿಕ್ಸ್ ಅವರು ತಾಯಿಯಾದ ಮೇಲೆ ಗೆಲ್ಲುತ್ತಿರುವ ಮೊದಲ ಚಾಂಪಿಯನ್ಶಿಪ್ ಇದಾಗಿದೆ.
ಫೆಲಿಕ್ಸ್ ಚಿನ್ನ ಗೆದ್ದ ಇವೆಂಟ್ಗಳು
200 ಮೀಟರ್-3
100 ಮೀಟರ್-1
100x4 ಮೀಟರ್-3
4x400 ಮೀಟರ್-4
ಮಿಕ್ಸ್ರಿಲೆ 4x400 ಮೀಟರ್-1
ಬೋಲ್ಟ್ ಗೆದ್ದಿರುವ ಪದಕಗಳು
100 ಮೀಟರ್ - 3
200 ಮೀಟರ್- 4
4X100 ಮೀಟರ್- 4