ETV Bharat / sports

ಚಿನ್ನ ಗೆದ್ದು ಇತಿಹಾಸ ಬರೆದ ದ್ಯುತಿ ಚಾಂದ್ ಜತೆ ಈಟಿವಿ ಭಾರತ ಎಕ್ಸ್​ಕ್ಲೂಸಿವ್ ಸಂದರ್ಶನ - ರಾಜ್ಯ

100 ಮೀಟರ್ ರನ್ನಿಂಗ್​ ರೇಸ್​ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಾಣ ಮಾಡಿರುವ ಭಾರತದ ಅಥ್ಲೀಟ್​​​ ದ್ಯುತಿ ಚಾಂದ್​ ಜತೆ ಈಟಿವಿ ಭಾರತ​ ವಿಶೇಷ ಸಂದರ್ಶನ ನಡೆಸಿದೆ.

ಚಿನ್ನ ಗೆದ್ದು ಇತಿಹಾಸ ಬರೆದ ದ್ಯುತಿ ಚಾಂದ್
author img

By

Published : Jul 15, 2019, 9:43 PM IST

ನವದೆಹಲಿ: ಕಳೆದ ಜು. 10ರಂದು ನಾಪೋಲಿಯಲ್ಲಿ ನಡೆದ ವರ್ಲ್ಡ್ ಯೂನಿವರ್ಸಿಟಿ ಕೂಟದಲ್ಲಿ 100 ಮೀಟರ್​ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದ ದ್ಯುತಿ ಚಾಂದ್​ ಜತೆ ಈಟಿವಿ ಭಾರತ ವಿಶೇಷ ಸಂದರ್ಶನ ನಡೆಸಿದೆ.

23 ವರ್ಷದ ದ್ಯುತಿ ಚಾಂದ್ ಕೇವಲ 11.32 ಸೆಕೆಂಡ್​​​ಗಳಲ್ಲಿ ಗುರಿ ಮುಟ್ಟುವ ಮೂಲಕ ಚಿನ್ನದ ಪದಕಕ್ಕೆ ಕೊರಳು ಒಡಿದ್ದರು. ಜತೆಗೆ ಈ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಅಥ್ಲೀಟ್​ ಎಂಬ ದಾಖಲೆ ತಮ್ಮದಾಗಿಸಿಕೊಂಡಿದ್ದರು.

ಈಟಿವಿ ಭಾರತನೊಂದಿಗೆ ಮಾತನಾಡಿರುವ ದ್ಯುತಿ ಚಾಂದ್​, ಇಂತಹ ಕ್ರೀಡೆಗಳಲ್ಲಿ ಚಿನ್ನದ ಪದಕ ಗೆಲ್ಲುವುದು ಅಷ್ಟೊಂದು ಸುಲಭವಲ್ಲ. ಫೈನಲ್​ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ನಾನು ಒತ್ತಡಕ್ಕೊಳಗಾಗಿದ್ದೆ. ಆದರೆ ನನ್ನ ಕೈಯಿಂದ ಆದಷ್ಟು ಉತ್ತಮ ಪ್ರದರ್ಶನ ನೀಡಬೇಕು ಎಂಬ ಗುರಿಯೊಂದಿಗೆ ರನ್ನಿಂಗ್​ ರೇಸ್​ಗೆ ಇಳಿದು ಚಿನ್ನ ಗೆದ್ದಿರುವೆ ಎಂದಿದ್ದಾರೆ.

ಚಿನ್ನ ಗೆದ್ದು ಇತಿಹಾಸ ಬರೆದ ದ್ಯುತಿ ಚಾಂದ್

ತಮ್ಮ ಚಿನ್ನದ ಪದಕ ಒಡಿಶಾ ಸರ್ಕಾರಕ್ಕೆ ಅರ್ಪಣೆ ಮಾಡುವುದಾಗಿ ಹೇಳಿರುವ ಚಾಂದ್​, ನನ್ನ ಪ್ರಾಯೋಜಕರು, ವಿಶ್​ ಮಾಡಿದವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ. ನಾನು ನನ್ನ ವೃತ್ತಿ ಜೀವನ ಆರಂಭ ಮಾಡಿದ ವೇಳೆ ನನ್ನ ಸಹೋದರಿ ಮಾತ್ರ ಸಪೋರ್ಟ್​ ಮಾಡಿದ್ದರು. ಆದರೆ ಇದೀಗ ರಾಜ್ಯ, ಕೇಂದ್ರ ಸರ್ಕಾರ ನನಗೆ ಸಪೋರ್ಟ್​ ಮಾಡುತ್ತಿವೆ. 2020ರ ಟೋಕಿಯೋ ಒಲಂಪಿಕ್ಸ್​​ನಲ್ಲಿ ಭಾಗಿಯಾಗಿ ಪದಕ ಗೆಲ್ಲಬೇಕು ಎಂಬುದು ನನ್ನ ಆಸೆಯಾಗಿದೆ ಎಂದು ಚಾಂದ್ ಇದೇ ವೇಳೆ ಹೇಳಿದ್ದಾರೆ.

Dutee Chand
ಚಿನ್ನ ಗೆದ್ದು ಇತಿಹಾಸ ಬರೆದ ದ್ಯುತಿ ಚಾಂದ್

ಕಳೆದ ಕೆಲ ತಿಂಗಳ ಹಿಂದೆ ದ್ಯುತಿ ಚಾಂದ್​, ತಾವು ಸಲಿಂಗಿ ಎಂದು ಘೋಷಿಸಿಕೊಂಡಿದ್ದರು. ಈ ವಿಷಯ ಬಹಿರಂಗಪಡಿಸುತ್ತಿದ್ದಂತೆ ದ್ಯುತಿಗೆ ಕುಟುಂಬ ಸದಸ್ಯರಿಂದಲೇ ವಿರೋಧ ವ್ಯಕ್ತವಾಗಿತ್ತು.

Intro:Body:

ಚಿನ್ನ ಗೆದ್ದು ಇತಿಹಾಸ ಬರೆದ ದ್ಯುತಿ ಚಾಂದ್ ಜತೆ ಈಟಿವಿ ಭಾರತ್​ ಎಕ್ಸ್​ಕ್ಲೂಸಿವ್ ಸಂದರ್ಶನ

ನವದೆಹಲಿ: ಕಳೆದ ಜು.10ರಂದು ನಾಪೋಲಿಯಲ್ಲಿ ನಡೆದ ವರ್ಲ್ಡ್ ಯೂನಿವರ್ಸೈಡ್ ಕೂಟದಲ್ಲಿ 100ಮೀಟ5ರ್​ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದ ದ್ಯುತಿ ಚಾಂದ್​ ಜತೆ ಈಟಿವಿ ಭಾರತ್​ ವಿಶೇಷ ಸಂದರ್ಶನ ನಡೆಸಿದೆ. 

23 ವರ್ಷದ ದ್ಯುತಿ ಚಾಂದ್ ಕೇವಲ 11.32 ಸೆಕೆಂಡ್​​​ಗಳಲ್ಲಿ ಗುರಿ ಮುಟ್ಟುವ ಮೂಲಕ ಚಿನ್ನದ ಪದಕ ಕೊರಳು ಒಡಿದ್ದರು. ಜತೆಗೆ ಈ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಅಥ್ಲೀಟ್​ ಎಂಬ ದಾಖಲೆ ತಮ್ಮದಾಗಿಸಿಕೊಂಡಿದ್ದರು. 

ಈಟಿವಿ ಭಾರತ್​​ನೊಂದಿಗೆ ಮಾತನಾಡಿರುವ ದ್ಯುತಿ ಚಾಂದ್​, ಇಂತಹ ಕ್ರೀಡೆಗಳಲ್ಲಿ ಚಿನ್ನದ ಪದಕ ಗೆಲುವುದು ಅಷ್ಟೊಂದು ಸುಲಭವಲ್ಲ. ಫೈನಲ್​ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ನಾನು ಒತ್ತಡಕ್ಕೊಳಗಾಗಿದ್ದೆ. ಆದರೆ ನನ್ನ ಕೈಯಿಂದ ಆದಷ್ಟು ಉತ್ತಮ ಪ್ರದರ್ಶನ ನೀಡಬೇಕು ಎಂಬ ಗುರಿಯೊಂದಿಗೆ ರನ್ನಿಂಗ್​ ರೇಸ್​ಗೆ ಇಳಿದು ಚಿನ್ನ ಗೆದ್ದಿರುವೆ ಎಂದಿದ್ದಾರೆ. 

ತಮ್ಮ ಚಿನ್ನದ ಪದ ಒಡಿಶಾ ಸರ್ಕಾರಕ್ಕೆ ಅರ್ಪಣೆ ಮಾಡುವುದಾಗಿ ಹೇಳಿರುವ ಚಾಂದ್​, ನನ್ನ ಪ್ರಾಯೋಜಕರು, ವಿಶ್​ ಮಾಡಿದವರಿಗೆ ಧನ್ಯವಾದಗಳು ಎಂದು  ದ್ಯುತಿ ಹೇಳಿದ್ದಾರೆ. ನಾನು ನನ್ನ ವೃತ್ತಿ ಜೀವನ ಆರಂಭ ಮಾಡಿದ ವೇಳೆ ನನ್ನ ಸಹೋದರಿ ಮಾತ್ರ ಸಪೋರ್ಟ್​ ಮಾಡಿದ್ದರು. ಆದರೆ ಇದೀಗ ರಾಜ್ಯ, ಕೇಂದ್ರ ಸರ್ಕಾರ ನನಗೆ ಸಪೋರ್ಟ್​ ಮಾಡುತ್ತಿವೆ. 2020ರ ಟೋಕಿಯೋ ಒಲಂಪಿಕ್ಸ್​​ನಲ್ಲಿ ಭಾಗಿಯಾಗಿ ಪದಕ ಗೆಲ್ಲಬೇಕು ಎಂಬುದು ನನ್ನ ಆಸೆಯಾಗಿದೆ ಎಂದು ಚಾಂದ್ ಇದೆ ವೇಳೆ ಹೇಳಿದ್ದಾರೆ. 

ಕಳೆದ ಕೆಲ ತಿಂಗಳ ಹಿಂದೆ ದ್ಯುತಿ ಚಾಂದ್​, ತಾವು ಸಲಿಂಗಿ ಎಂದು ಘೋಷಿಸಿಕೊಂಡಿದ್ದರು. ಈ ವಿಷಯ ಬಹಿರಂಗಪಡಿಸುತ್ತಿದ್ದಂತೆ ದ್ಯುತಿಗೆ ಕುಟುಂಬ ಸದಸ್ಯರಿಂದಲೇ ವಿರೋಧ ವ್ಯಕ್ತವಾಗಿತ್ತು. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.