ETV Bharat / sports

ಈ ಟಿವಿ ಭಾರತ್​ ಎಕ್ಸ್​ಕ್ಲೂಸಿವ್​ :ಎರಡೂ ಕೈಗಳಿಲ್ಲದಿದ್ದರೂ ಈಜಿನಲ್ಲಿ ಚಿನ್ನ ಗೆದ್ದ ಸುಯಾಶ್ ಜಾಧವ್​ ಯಶೋಗಾಥೆ​ - 2018ರ ಏಷ್ಯನ್​ ಪ್ಯಾರಾ ಗೇಮ್ಸ್

ವಿಶೇಷ ಚೇತನ ಸ್ವಿಮ್ಮರ್​ ಸುಯಾಶ್​ ಜಾಧವ್ 2018ರ ಪ್ಯಾರಾ ಗೇಮ್ಸ್​ನಲ್ಲಿ ಚಿನ್ನದ ಪದಕ ಹಾಗೂ 2 ಕಂಚಿನ ಪದಕ ಹಾಗೂ 2016 ಜರ್ಮನ್​ ಈಜು ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

ಸುಯಾಶ್ ಜಾಧವ್
ಸುಯಾಶ್ ಜಾಧವ್
author img

By

Published : Aug 12, 2020, 8:38 PM IST

ಹೈದರಾಬಾದ್​: 2018ರ ಏಷ್ಯನ್​ ಪ್ಯಾರಾ ಗೇಮ್ಸ್​ನಲ್ಲಿ ಚಿನ್ನದ ಪದಕ ಹಾಗೂ 2 ಕಂಚಿನ ಪದಕ ಹಾಗೂ 2016ರ ಜರ್ಮನ್​ ಈಜು ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಪ್ಯಾರಾ ಸ್ವಿಮ್ಮರ್​ ಸುಯಾಶ್​ ಜಾಧವ್ ಈ ಟಿವಿ ಭಾರತ ನಡೆಸಿದ ವಿಶೇಷ ಸಂದರ್ಶನದಲ್ಲಿ ತಮ್ಮ ದುರಂತ ಅಪಘಾತದ ನಂತರ ಸ್ವಿಮ್ಮಿಂಗ್​ನಲ್ಲಿ ಸಾಧನೆಯ ಶಿಖರವೇರದ ಸುದೀರ್ಘ ಪಯಣವನ್ನು ಹಂಚಿಕೊಂಡಿದ್ದಾರೆ.

ಸುಯಾಶ್ ಜಾಧವ್

ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊಟ್ಟಮೊದಲ ಚಿನ್ನ ಗೆದ್ದಿರುವುದಕ್ಕೆ ನಿಮ್ಮ ಭಾವನೆ ಹೇಗೆ ವ್ಯಕ್ತಪಡಿಸುತ್ತೀರಾ?

ಇದು ನನ್ನ ಮೊದಲ ಅಂತರರಾಷ್ಟ್ರೀಯ ಚಿನ್ನದ ಪದಕ ಮತ್ತು ಏಷ್ಯನ್ ಪ್ಯಾರಾ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತಕ್ಕೆ ಸಿಕ್ಕಿರುವ ಮೊದಲ ಚಿನ್ನದ ಪದಕ. ಇದು ನನಗೆ ಮಾತ್ರವಲ್ಲದೆ ದೇಶಕ್ಕೂ ಸಿಕ್ಕಿರುವ ದೊಡ್ಡ ಹಿರಿಮೆ ಎಂದು ಭಾವಿಸುತ್ತೇನೆ. ಇದು ನಿಜವಾಗಿಯೂ ಅದ್ಭುತ ಅನುಭವ .ಭಾರತೀಯನಾಗಿ ಆ ಸಾಧನೆ ನನಗೆ ಬಹಳ ಹೆಮ್ಮೆಯನ್ನಿಸುತ್ತಿದೆ.

ನಿಮ್ಮ ಎರಡು ಕೈಗಳು ಹಾನಿಗೊಳಗಾದ ಅಪಘಾತದ ಬಗ್ಗೆ ತಿಳಿಸಿ?

2004ರಲ್ಲಿ ನಾನು 6ನೇ ತರಗತಿ ಓದುತ್ತಿದ್ದೆ. ನನ್ನ ಸೋದರ ಸಂಬಂಧಿಯ ವಿವಾಹ ಸಮಾರಂಭದಲ್ಲಿದ್ದೆವು. ನಾನು ಕಲ್ಯಾಣ ಮಂಟಪದ ಮಹಡಿಯ ಮೇಲೆ ಆಡುತ್ತಿದ್ದ ಸಂದರ್ಭದಲ್ಲಿ ವಿಧ್ಯುತ್​ ತಂತಿಯನ್ನು ಸ್ಪರ್ಶಿಸಿದ್ದೆ. ಈ ವೇಳೆ ನನ್ನ ಎರಡು ಕೈಗಳು ಪಾರ್ಶ್ವವಾಯುವಿಗೆ ಒಳಗಾದವು. ಕೊನೆಗೆ ವೈದ್ಯರು ಮೊಣಕೈವರೆಗೆ ನನ್ನ ಕೈಗಳನ್ನು ಕತ್ತರಿಸಲು ನಿರ್ಧರಿಸಿದರು.

ಅಪಘಾತ ಸಂಭವಿಸಿದಾಗ ನಾನು ತುಂಬಾ ಚಿಕ್ಕವನಾಗಿದ್ದೆ. ನನಗೆ ಏನಾಗಿದೆ ಎಂಬುದು ನನಗೆ ತಿಳಿದಿರಲಿಲ್ಲ. ನಾನು ಖಿನ್ನತೆಗೆ ಒಳಗಾಗಲಿಲ್ಲ. ಆದರೆ ನನ್ನ ಕುಟುಂಬ ತುಂಬಾ ತೊಂದರೆ ಅನುಭವಿಸಿತು. ಸಹಜವಅಗಿಯೇ ನನ್ನ ಎರಡು ಕೈಗಳನ್ನು ಕಳೆದುಕೊಂಡಿರುವುದು ನನಗೂ ಬೇಸರವಾಗಿತ್ತು. ಅಪಘಾತದಿಂದ ಹೊರಬರಲು ನಾನು ಯಾವುದೇ ವಿಶೇಷ ಸಹಾಯವನ್ನು ತೆಗೆದುಕೊಳ್ಳಲಿಲ್ಲ. ನಾನು ನಿಧಾನವಾಗಿ ಸ್ವತಂತ್ರವಾಗಿ, ನನ್ನ ದೈನಂದಿನ ಕೆಲಸಗಳನ್ನು ನಿರ್ವಹಿಸಿಲು ಶುರುಮಾಡಿದೆ. ಇದೀಗ ಸಂಪೂರ್ಣವಾಗಿ ಸ್ವತಂತ್ರನಾಗಿದ್ದೇನೆ.

ರಾಷ್ಟ್ರೀಯ ಸ್ವಿಮ್ಮರ್​ ಆಗಿರುವ ನಿಮ್ಮ ತಂದೆ, ನಿಮ್ಮ ಜರ್ನಿಯಲ್ಲಿ ಹೇಗೆ ಪಾತ್ರವಹಿಸಿದರು ತಿಳಿಸಿ?

ನನ್ನ ತಂದೆಯೇ ನನಗೆ ಮೊದಲ ಈಜು ಗುರುವಾಗಿದ್ದರು. ಅವರು ಈಜಿನ ಎಲ್ಲಾ ಮೂಲಭೂತ ವಿಷಯಗಳನ್ನು ಕಲಿಸಿಕೊಟ್ಟರು. 1978ರಲ್ಲಿ ಅವರು ರಾಷ್ಟ್ರೀಯ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದರು. ಆದರೆ ಕೆಲವು ಸಮಸ್ಯೆಗಳಿಂದ ಸ್ಪರ್ಧೆ ರದ್ದಾಯಿತು. ಹಾಗೆಯೇ ಅವರ ಕನಸುಗಳು ಕೂಡ ರದ್ದಾದವು. ಆದರೆ ಅವರ ಕನಸುಗಳನ್ನು ನಾನು ಇಡೇರಿಸಬೇಕೆಂದು ಬಯಸಿದ್ದರು. ನಾನು ಇಡೇರಿಸಿರುವುದಕ್ಕೆ ಸಂತೋಷವಾಗಿದೆ.

ನಿಮ್ಮ ದೈನಂದಿನ ಫಿಟ್​ನೆಸ್ ಬಗ್ಗೆ ಹೇಳಿ? ಅದು ಸಾಮಾನ್ಯ ಸ್ವಿಮ್ಮರ್​ಗಳಿಗಿಂತ​ ಹೇಗೆ ಭಿನ್ನ?

ನಾನು ರನ್ನಿಂಗ್​ ಮಾಡುತ್ತೇನೆ. ಬಾಕ್ಸಿಂಗ್​ ಗ್ಲೌಸ್​ಗಳನ್ನು ತೊಟ್ಟು ಪುಷ್​ಅಪ್​ ಮಾಡುತ್ತೇನೆ. ಜಿಮ್​ನಲ್ಲಿನ ಸಾಮಾನ್ಯ ವರ್ಕ್​ಔಟ್​ಗಳನ್ನು ಮಾಡುತ್ತೇನೆ. ಮೇಲ್ಭಾಗದ ದೇಹಕ್ಕೆ ಸಂಬಂಧಿಸಿದ ವ್ಯಾಯಾಮಗಳನ್ನು ಕಡಿಮೆ ಮಾಡುತ್ತೇನೆ. ಆದರೆ ದೇಹದ ಕೆಳಭಾಗದ ಕಡೆಗೆ ಹೆಚ್ಚಿನ ಗಮನ ನೀಡುತ್ತೇನೆ.

ಈಜುವುದಕ್ಕೂ ಮುನ್ನ ಕೆಲವು ಫಿಟ್​ನೆಸ್​ಗೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡುತ್ತೇನೆ. ಬುಧವಾರ ಮತ್ತು ಶನಿವಾರಗಳನ್ನ ಫಿಟ್​ನೆಸ್​ಗಾಗಿಯೇ ನಿಯೋಜಿಸಿಕೊಂಡಿದ್ಧೇನೆ.​

ನಾನು ನಿಜವಾಗಿ ಓಟಗಾರನಾಗಿದ್ದೇನೆ. ಹಾಗಾಗಿ ಸ್ಪ್ರಿಂಟರ್​ಗಳು ಸೇವಿಸುವ ನಿರ್ಧಿಷ್ಟ ಪ್ರೋಟಿನ್ ಮತ್ತು ಕ್ಯಾಲರಿಗಳು ಸಮತೋಲನವಿರುವ ಆಹಾರಗಳನ್ನು ಸೇವಿಸುತ್ತೇನೆ. ಮುಖ್ಯವಾಗಿ ಮೀನು, ಕೋಳಿ, ಹಾಗೂ ವಾರಕ್ಕೆ ಒಂದು ದಿನ ಮಾತ್ರ ಡಯಟ್​ನಿಂದ ಬಿಡುವು ಪಡೆಯುತ್ತೇನೆ.

ಲಾಕ್​ಡೌನ್​ ವೇಳೇ ಫಿಟ್​ ಆಗಿರಲು ಎಲ್ಲಾ ಕ್ರೀಡಾಪಟುಗಳು ತೊಂದರೆ ಅನುಭವಿಸಿದ್ದರು, ನಿಮ್ಮ ಕಥೆ ಏನು?

ಲಾಕ್​ಡೌನ್​ ವೇಳೆ ಎಲ್ಲಾ ಸ್ಮಿಮ್ಮಿಂಗ್​ಪೂಲ್​ಗಳು ಮುಚ್ಚಲ್ಪಟ್ಟಿದ್ದವು. ಇದು ನನ್ನನ್ನು ಸೇರಿದಂತೆ ಎಲ್ಲಾ ಈಜುಪಟುಗಳ ಮೇಲೆ ಪರಿಣಾಮ ಬೀರಿತು. ಆದರೆ ನಾನು ಮನೆಯಲ್ಲಿಯೇ ಕೆಲವು ವರ್ಕೌಟ್​ ಮಾಡುತ್ತಿದ್ದೆ. ನಾನು ಸ್ವಿಮ್ಮಿಂಗ್​ಗೆ ಅನುಕೂಲಕರವಾಗಿರುವ ರನ್ನಿಂಗ್​ ಅನ್ನು ಕಂಡುಕೊಂಡಿರುವೆ. ಅದು ಸ್ವಿಮ್ಮಿಂಗ್​ಗೆ ನೆರವಾಗುತ್ತದೆ. ಈ ರೀತಿ ಲಾಕ್​ಡೌನ್​ನಲ್ಲಿ ಅಭ್ಯಾಸ ಮಾಡಿದೆ.

ಭಾರತ ಕ್ರಿಕೆಟ್ ಪ್ರೀತಿಸುವ ರಾಷ್ಟ್ರ. ಕ್ರಿಕೆಟ್ ಇತರ ಕ್ರೀಡೆಗಳ ಮೇಲೆ ಕರಿನೆರಳಾಗಿದೆ ಎಂದು ಭಾವಿಸುತ್ತೀರಾ? ಮತ್ತು ಇತರ ಕ್ರೀಡೆಗಳಿಗೆ ದೊಡ್ಡ ಮಟ್ಟದಲ್ಲಿ ಬೆಳೆಯಲು ಯಾವ ಬದಲಾವಣೆಗಳು ಬೇಕಾಗುತ್ತವೆ?

ಈ ಕುರಿತು ನನ್ನ ಅಭಿಪ್ರಾಯಗಳನ್ನು ಅನೇಕ ಜನರು ಇಷ್ಟಪಡುವುದಿಲ್ಲ. ಆದರೆ ನಮಗೆ ದೊರೆಯುವ ನಗದು ಬಹುಮಾನ ಮತ್ತು ಕ್ರಿಕೆಟಿಗರು ಪಡೆಯುವ ನಗದು ಬಹುಮಾನದ ನಡುವೆ ದೊಡ್ಡ ವ್ಯತ್ಯಾಸವಿದೆ. ಈ ವ್ಯತ್ಯಾಸವು ದೊಡ್ಡ ಸಮಸ್ಯೆಯಾಗಿದೆ.

ಮತ್ತೊಂದು ವಿಚಾರವೆಂದರೆ, ಅವರಿಗೆ ಅತ್ಯುತ್ತಮ ಹಂತದ ತರಬೇತಿ ಸಿಗುತ್ತದೆ. ಆದರೆ ಈಜಿನಲ್ಲಿ ಅಂತಹದ್ದೇನೂ ಇಲ್ಲ. ವಿಶ್ವಮಟ್ಟದ ಸ್ಪರ್ಧೆಗಳಲ್ಲಿ ಆಡುವಾಗ ನಾವು ಬೇರೆ ಕ್ರೀಡೆಗಳ ಹೆಚ್ಚು ಆಟಗಾರರನ್ನು ಬೆಂಬಲಿಸಬೇಕಾಗಿದೆ.

ವಿಶೇಷವಾಗಿ ಈಜು ಬಗ್ಗೆ ಮಾತನಾಡುವುದಾದರೆ, ವಿಶೇಷ ಚೇತನ ಈಜುಗಾರರಿಗೆ ಹಲವು ಬದಲಾವಣೆಗಳು ಬೇಕಾಗುತ್ತವೆ. ಪ್ರತಿಕೊಳದಲ್ಲೂ ಇಳಿಜಾರು ಇರಬೇಕು. ಯಾವುದೆ ಕುರುಡು ಈಜುಗಾರ ಇದ್ದರೆ ನಾವು ಅವನೊಂದಿಗೆ ಬೆಂಗಾವಲು ಕಳುಹಿಸಬೇಕು. ಈ ವಿಷಯಗಳನ್ನು ಬದಲಾಯಿಸಿದರೆ ನಾವು ಶೀಘ್ರದಲ್ಲೇ ಕ್ರಿಕೆಟ್​ ಹೊಂದಿರುವ ಯಶಸ್ಸನ್ನು ತಲುಪುತ್ತೇವೆ.

ಮಾಧ್ಯಮಗಳು ಕೂಡ ಕ್ರೀಡೆಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆದರೆ ನಮ್ಮ ಕ್ರೀಡೆಗೆ ಮಾಧ್ಯಮಗಳು ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ಇದು ಕೂಡ ಬದಲಾಗಬೇಕಿದೆ.

ನೀವು ಹೆಚ್ಚು ಅನುಸರಿಸುವ ಕ್ರೀಡಾಪಟುಗಳು ಯಾರು?

ಈಜಿನಲ್ಲಿ ಮೈಕೆಲ್ ಫೆಲ್ಪ್ಸ್​, ಒಟ್ಟಾರೆ ಕ್ರೀಡಾಪಟುಗಳಲ್ಲಿ ಉಸೇನ್​ ಬೋಲ್ಟ್​ ಹಾಗೂ ಕ್ರಿಕೆಟ್​ನಲ್ಲಿ ವಿರಾಟ್​ ಕೊಹ್ಲಿ ಹಾಗೂ ಶಿಸ್ತು ಮತ್ತು ಸ್ಥಿರತೆಯಲ್ಲಿ ಸಚಿನ್ ತೆಂಡೂಲ್ಕರ್​ರನ್ನು ಹೆಚ್ಚು ಫಾಲೋ ಮಾಡುತ್ತೇನೆ.

ಟೋಕಿಯೊ ಒಲಿಂಪಿಕ್ಸ್ ಒಂದು ವರ್ಷಕ್ಕೆ ಮುಂದೂಡಲ್ಪಟ್ಟಿದೆ, ಅದು ನಿಮ್ಮ ತರಬೇತಿಯ ಮೇಲೆ ಹೇಗೆ ಪರಿಣಾಮ ಬೀರಿದೆ?

ಇದು ಮೆಗಾ ಇವೆಂಟ್‌ಗೆ ತಯಾರಿ ನಡೆಸುತ್ತಿರುವ ನನ್ನ ಮೇಲೆ ಮಾತ್ರವಲ್ಲದೆ ಕನಿಷ್ಠ ಎಲ್ಲಾ ಕ್ರೀಡಾಪಟುಗಳ ಮೇಲೂ ಪರಿಣಾಮ ಬೀರಿದೆ ಎಂಬುದು ಸ್ಪಷ್ಟ. ಆದರೆ ನಾನು ಅದನ್ನು ಸಕಾರಾತ್ಮಕ ರೀತಿಯಲ್ಲಿ ತೆಗೆದುಕೊಂಡಿದ್ದೇನೆ. ನನ್ನ ಫಿಟ್‌ನೆಸ್​ಅನ್ನು ಸುಧಾರಿಸಿಕೊಳ್ಳುತ್ತಿದ್ದೇನೆ. ಚಿನ್ನ ಗೆಲ್ಲಲು ನನ್ನ ಕೈಲಾದಷ್ಟು ಅತ್ಯುತ್ತಮವಾಗಿ ಪ್ರಯತ್ನಿಸುತ್ತೇನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.