ಹೈದರಾಬಾದ್: ಪ್ರಧಾನಿ ಮೋದಿಗೆ ಪಂಜಾಬ್ನಲ್ಲಿ ಭದ್ರತಾ ಲೋಪ ಉಂಟಾಗಿದ್ದನ್ನು ಕುರಿತು ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಮಾಡಿದ್ದ ಅಸಮಾಧಾನದ ಟ್ವೀಟ್ ಅನ್ನು ಕಟು ಶಬ್ದಗಳಲ್ಲಿ ಟೀಕಿಸುವ ಭರದಲ್ಲಿ ತಮಿಳು ನಟ ಸಿದ್ಧಾರ್ಥ್ ಅವಹೇಳನಕಾರಿ ಪದ ಬಳಸಿದ್ದರು.
ಈ ಬಗ್ಗೆ ಈಟಿವಿ ಭಾರತ್‌ಗೆ ಪ್ರತಿಕ್ರಿಯಿಸಿರುವ ಸೈನಾ ನೆಹ್ವಾಲ್, 'ಅವರು ಇನ್ನೂ ಉತ್ತಮ ಪದಗಳಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದಿತ್ತು, ಪ್ರಸ್ತುತ ಬಳಸಿದ ಪದ ಸರಿಯಲ್ಲ' ಎಂದು ಹೇಳಿದ್ದಾರೆ.
ಸೈನಾ ಟ್ವೀಟ್ ಹೀಗಿತ್ತು..
ಪಂಜಾಬ್ನಲ್ಲಿ ಪ್ರಧಾನಿ ಮೋದಿ ಅವರಿಗೆ ಆದ ಭದ್ರತಾ ಲೋಪಕ್ಕೆ ಆಕ್ರೋಶ ವ್ಯಕ್ತಪಡಿಸಿ ಜನವರಿ 5ರಂದು ಟ್ವೀಟ್ ಮಾಡಿದ್ದ ಬ್ಯಾಡ್ಮಿಂಟನ್ ತಾರೆ, 'ತನ್ನ ಸ್ವಂತ ಪ್ರಧಾನಿಯ ಭದ್ರತೆಗೆ ಧಕ್ಕೆ ಉಂಟಾದರೆ ಯಾವುದೇ ರಾಷ್ಟ್ರವು ತಾನು ಸುರಕ್ಷಿತ ಎಂದು ಹೇಳಿಕೊಳ್ಳುವುದಿಲ್ಲ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಇದು ಪ್ರಧಾನಿ ಮೋದಿಯವರ ಮೇಲೆ ಅರಾಜಕತಾವಾದಿಗಳ ಹೇಡಿತನದ ದಾಳಿ' ಎಂದು ಬೇಸರ ವ್ಯಕ್ತಪಡಿಸಿದ್ದರು.
ಇದಕ್ಕೆ ನಟ ಸಿದ್ಧಾರ್ಥ್ ಈ ಕೆಳಗಿನಂತೆ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದರು.
-
Subtle cock champion of the world... Thank God we have protectors of India. 🙏🏽
— Siddharth (@Actor_Siddharth) January 6, 2022 " class="align-text-top noRightClick twitterSection" data="
Shame on you #Rihanna https://t.co/FpIJjl1Gxz
">Subtle cock champion of the world... Thank God we have protectors of India. 🙏🏽
— Siddharth (@Actor_Siddharth) January 6, 2022
Shame on you #Rihanna https://t.co/FpIJjl1GxzSubtle cock champion of the world... Thank God we have protectors of India. 🙏🏽
— Siddharth (@Actor_Siddharth) January 6, 2022
Shame on you #Rihanna https://t.co/FpIJjl1Gxz
ಸೈನಾ ಅವರನ್ನು ಟೀಕಿಸುವ ಆವೇಗದಲ್ಲಿ ನಟ ಸಿದ್ಧಾರ್ಥ್ ಮಹಿಳೆಯರನ್ನು ಅಗೌರವಿಸುವ (ಸೆಕ್ಸಿಸ್ಟ್) ಮತ್ತು ಅವಹೇಳನಕಾರಿ ಪದ ಬಳಸಿದ್ದರು. "ಜಗತ್ತಿನ ಸಟ್ಲ್ ಕಾಕ್ ಚಾಂಪಿಯನ್... ದೇಶವನ್ನು ರಕ್ಷಿಸುವ ಜನರು ನಮ್ಮಲ್ಲಿದ್ದಾರೆ" ಎಂದು ಅಶ್ಲೀಲ, ವ್ಯಂಗ್ಯಾತ್ಮಕ ಟ್ವೀಟ್ ಮಾಡಿದ್ದರು. ಈ ಹಿಂದೆ ರೈತರ ಹೋರಾಟದ ಸಂದರ್ಭದಲ್ಲಿ ಭಾರತವನ್ನು ಟೀಕಿಸಿದ್ದ ಕೆರಿಬಿಯನ್ ಸಿಂಗರ್ ರಿಹಾನ್ನರ ಹೆಸರು ಪ್ರಸ್ತಾಪಿಸಿ, "ನಿಮಗೆ ನಾಚಿಕೆಯಾಗಬೇಕು ರಿಹಾನ್ನ" ಎಂದೂ ಬರೆದುಕೊಂಡಿದ್ದರು.
'ಸಟ್ಲ್ ಕಾಕ್' ಎಂಬ ಪದ ಬಳಕೆ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ನಟ ಸಿದ್ಧಾರ್ಥ್ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದರು. ಸಿದ್ಧಾರ್ಥ್ ಪರೋಕ್ಷವಾಗಿ ದೇಹದ ಖಾಸಗಿ ಅಂಗವನ್ನು ಆಂಗ್ಲಭಾಷೆಯಲ್ಲಿ ಕರೆಯಲ್ಪಡುವ ಪದ ಪ್ರಯೋಗಿಸಿ ಸೈನಾರನ್ನು ಟೀಕಿಸಿದ್ದರು. ಇದೀಗ ಈ ಟ್ವೀಟ್ಗೆ ಸಾಕಷ್ಟು ಮಂದಿ ಮಹಿಳೆಯರನ್ನು ಅವಹೇಳನ ಮಾಡಿದ್ದಾರೆ, ಇಂಥವರಿಗೆ ಟ್ವಿಟರ್‌ನಲ್ಲಿ ಬ್ಲೂಟಿಕ್ ಬೇರೆ ನೀಡಲಾಗಿದೆ ಎಂದು ಸಾಕಷ್ಟು ಮಂದಿ ಟ್ರೋಲ್ ಮಾಡಿದ್ದರು.
ನಟನ ಟ್ವೀಟ್ ಕುರಿತು ಈಟಿವಿ ಭಾರತ್ ಜೊತೆ ಫೋನ್ ಸಂಭಾಷಣೆಯಲ್ಲಿ ಮಾತನಾಡಿದ ಸೈನಾ,"ಅವರೇನು ಹೇಳಿದ್ದಾರೆ ಎನ್ನುವುದರ ಬಗ್ಗೆ ನನಗೆ ಖಚಿತತೆ ಇಲ್ಲ. ಆದರೆ ಅವರು ತಮ್ಮ ಅಭಿಪ್ರಾಯಗಳನ್ನು ಉತ್ತಮ ಪದಗಳಲ್ಲೇ ವ್ಯಕ್ತಪಡಿಸಬಹುದಿತ್ತು" ಎಂದಿದ್ದಾರೆ.
"ಆದರೆ, ಇದು ಟ್ವಿಟರ್. ಅಂತಹ ಪದಗಳು ಮತ್ತು ಕಮೆಂಟ್‌ಗಳನ್ನು ನೀವೆಲ್ಲಾ ಗಮನಹರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ಭಾರತದ ಪ್ರಧಾನಿಯ ಭದ್ರತೆಯೇ ಒಂದು ಸಮಸ್ಯೆಯಾಗಿದ್ದರೆ, ದೇಶದಲ್ಲಿ ಬೇರೆ ಯಾವುದು ಸುರಕ್ಷಿತವಾಗಿದೆ? ಎಂಬುದರ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ" ಎಂದು ತಾವು ಮಾಡಿದ್ದ ಟ್ವೀಟ್ ಅನ್ನು ಮತ್ತೊಮ್ಮೆ ನೆನಪಿಸಿದರು.
ಇದನ್ನೂ ಓದಿ: ಜೊಕೊವಿಕ್ ಗಡಿಪಾರು, ವೀಸಾ ರದ್ದು ತೀರ್ಪು: ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ಗೆದ್ದ ವಿಶ್ವ ನಂಬರ್ 1 ಟೆನಿಸ್ ಆಟಗಾರ