ಹೈದರಾಬಾದ್ : ವಿಶ್ವ ತಂಡಗಳ ಹಣಾಹಣಿ ಎಂದೇ ಬಿಂಬಿತವಾದ ಥಾಮಸ್ ಕಪ್ ಅನ್ನು ಭಾರತ ಮುಡಿಗೇರಿಸಿಕೊಂಡು ಬ್ಯಾಡ್ಮಿಂಟನ್ನಲ್ಲಿ ಇತಿಹಾಸ ಬರೆದಿದೆ. ಇದು 1983ರಲ್ಲಿ ಕ್ರಿಕೆಟ್ನಲ್ಲಿ ಭಾರತ ವಿಶ್ವಕಪ್ ವಿಜಯೋತ್ಸವಕ್ಕೆ ಹೋಲಿಸಲಾಗಿದೆ. ಇದರ ಹಿಂದೆ ಆಟಗಾರರ ಛಲ, ಕೋಚ್, ಸಿಬ್ಬಂದಿಯ ಅವಿರತ ಶ್ರಮ, ಮಾರ್ಗದರ್ಶನವಿದೆ.
ದೇಶದಲ್ಲಿ ಐಪಿಎಲ್ ಕ್ರಿಕೆಟ್ ಫೀವರ್ ಮಧ್ಯೆಯೇ ಥಾಮಸ್ ಕಪ್ ವಿಜಯೋತ್ಸವ ಸುದ್ದಿ ಇಡೀ ದೇಶವನ್ನೇ ಆವರಿಸಿದೆ. ಭಾರತ ಬ್ಯಾಡ್ಮಿಂಟನ್ ತಂಡದ ಈ ಮಹಾನ್ ಸಾಧನೆಗೆ ದೇಶವೇ ಶಹಬ್ಬಾಸ್ ಹೇಳಿದೆ.
ಭಾರತ ತಂಡದ ಸಾಧನೆಗೆ ಬ್ಯಾಡ್ಮಿಂಟನ್ ರಾಷ್ಟ್ರೀಯ ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್ ಅಪಾರ ಹರ್ಷ ವ್ಯಕ್ತಪಡಿಸಿದ್ದಾರೆ. ಈ ವಿಜಯ ಭಾರತೀಯ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಸಂಗತಿಯಾಗಿದೆ. ಬ್ಯಾಡ್ಮಿಂಟನ್ ಜಗತ್ತಿನಲ್ಲಿ 'ಥಾಮಸ್ ಕಪ್' ಗೆಲ್ಲುವುದು ನಿಜವಾಗಿಯೂ ದೊಡ್ಡ ಸಾಧನೆಯೇ ಸರಿ. ಇದನ್ನು ನಮ್ಮ ಆಟಗಾರರು ಸಾಧಿಸಿದ್ದಾರೆ. ಪ್ರತಿಯೊಬ್ಬ ಆಟಗಾರನೂ ಅದ್ಭುತ ಪ್ರದರ್ಶನ ತೋರಿದರು ಎಂದು ಹೆಮ್ಮೆ ವ್ಯಕ್ತಪಡಿಸಿದರು.
-
Inspirational @srikidambi was the hero for Team 🇮🇳 with plays like this 👇#TotalEnergiesBadminton #ThomasUberCups #Bangkok2022 pic.twitter.com/joC1TVXJeS
— BWF (@bwfmedia) May 15, 2022 " class="align-text-top noRightClick twitterSection" data="
">Inspirational @srikidambi was the hero for Team 🇮🇳 with plays like this 👇#TotalEnergiesBadminton #ThomasUberCups #Bangkok2022 pic.twitter.com/joC1TVXJeS
— BWF (@bwfmedia) May 15, 2022Inspirational @srikidambi was the hero for Team 🇮🇳 with plays like this 👇#TotalEnergiesBadminton #ThomasUberCups #Bangkok2022 pic.twitter.com/joC1TVXJeS
— BWF (@bwfmedia) May 15, 2022
ಬ್ಯಾಡ್ಮಿಂಟನ್ನಲ್ಲಿ ಮಿಂಚು ಹರಿಸುತ್ತಿರುವ ಲಕ್ಷ್ಯ ಸೇನ್, ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ಕಿಡಂಬಿ ಶ್ರೀಕಾಂತ್ ಮತ್ತು ಡಬಲ್ಸ್ ಆಟಗಾರರಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಅವರ ಅದ್ಭುತ ಪ್ರದರ್ಶನದಿಂದಾಗಿ ಭಾರತವು 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು ಸೋಲಿಸಿತು. ಡೆನ್ಮಾರ್ಕ್ ವಿರುದ್ಧ ಸೆಮಿಫೈನಲ್ನಲ್ಲಿ ಗಾಯಗೊಂಡರೂ ಪ್ರಣೋಯ್ ಛಲಬಿಡದೇ ಹೋರಾಡಿ ಗೆಲ್ಲುವ ಮೂಲಕ ತಂಡ 3-2 ರಲ್ಲಿ ಫೈನಲ್ ತಲುಪಿತು. ಇದು ಆಟಗಾರರ ಕೆಚ್ಚೆದೆಯನ್ನು ತೋರಿಸುತ್ತದೆ ಎಂದು ಹೊಗಳಿದ್ದಾರೆ.
ಇದು ತಂಡದ ಸಾಧನೆ : ಇನ್ನು ಗೆಲುವಿನ ಬಗ್ಗೆ ಮಾತನಾಡಿದ ಮಾಜಿ ವಿಶ್ವ ನಂ.1 ಆಟಗಾರ ಕಿಡಂಬಿ ಶ್ರೀಕಾಂತ್, ಇದು ಭಾರತ ತಂಡದ ಗೆಲುವು. ಇಲ್ಲಿ ಒಬ್ಬ ಆಟಗಾರನಿಂದ ಈ ಸಾಧನೆ ಮಾಡಲು ಸಾಧ್ಯವಿಲ್ಲ. ತಂಡದ 10 ಸದಸ್ಯರ ಅದ್ಭುತ ಆಟದಿಂದಾಗಿ ಈ ಗೆಲುವು ಒಲಿದಿದೆ ಎಂದರು. ಇನ್ನು ಭಾರತ ಬ್ಯಾಡ್ಮಿಂಟನ್ ತಂಡ ಥಾಮಸ್ ಕಪ್ ಜಯಿಸಿದ್ದಕ್ಕೆ ಕ್ರೀಡಾ ವಲಯವೇ ಹಾಡಿ ಹೊಗಳಿದೆ. ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹವಾಗ್, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಎಲ್ಲ ಗಣ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಪ್ರಧಾನಿ ಮೋದಿ ಶ್ಲಾಘನೆ, ನಿವಾಸಕ್ಕೆ ಆಹ್ವಾನ : ಭಾರತ ಬ್ಯಾಡ್ಮಿಂಟನ್ ತಂಡದ ಈ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಡಿ ಹೊಗಳಿದ್ದಾರೆ. ಇಡೀ ದೇಶವೇ ಹೆಮ್ಮೆ ಪಡುವಂತಹ ಸಾಧನೆಯನ್ನು ತಂಡ ಮಾಡಿದೆ. ಬ್ಯಾಡ್ಮಿಂಟನ್ನಲ್ಲಿ ಇದೊಂದು ಸುವರ್ಣ ದಿನ ಎಂದು ಬಣ್ಣಿಸಿದ್ದಾರೆ. ಅಲ್ಲದೇ, ಗೆಲುವಿನ ಸಿಹಿಯನ್ನು ಹಂಚಿಕೊಳ್ಳಲು ತಂಡವನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದಾರೆ.
ಓದಿ: ಥಾಮಸ್ ಕಪ್ ಚಾಂಪಿಯನ್ಸ್ಗೆ ಪ್ರಧಾನಿ ಫೋನ್ ಕಾಲ್.. ಕ್ರೀಡಾ ಸಚಿವಾಲಯದಿಂದ ₹ 1 ಕೋಟಿ ಬಹುಮಾನ ಘೋಷಣೆ