ETV Bharat / sports

ಎಕ್ಸ್​ಕ್ಲೂಸಿವ್​: ಚಿನ್ನ ಗೆದ್ದು ಬಿಂದ್ರಾ ಸಾಧನೆ ಪುನಾರಾವರ್ತಿಸುವೆ : ಬಜರಂಗ್​  ವಿಶ್ವಾಸ - ಬೀಜಿಂಗ್ ಒಲಿಂಪಿಕ್ಸ್​ 2008

ಕೊರೊನಾ ವೈರಸ್​ ಭೀತಿಯಿಂದ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿರುವ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಐತಿಹಾಸಿಕ ಎರಡನೇ ಚಿನ್ನದ ಪದಕ ಗೆದ್ದು ಕೊಡುವೆ ಎಂದು ಕುಸ್ತಿಪಟು ಬಜರಂಗ್​ ಪೂನಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Bajrang Punia
ಭಜರಂಗ್​ ಪೂನಿಯಾ
author img

By

Published : Jun 15, 2020, 1:55 PM IST

ಹೈದರಾಬಾದ್​: ಭಾರತದ ಟಾಪ್ ಫ್ರೀಸ್ಟೈಲ್​ ಕುಸ್ತಿಪಟು ಬಜರಂಗ್​ ಪೂನಿಯಾ 2020(21)ರಲ್ಲಿ ನಡೆಯುವ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದು 2008ರಲ್ಲಿ ಅಭಿನವ್ ಬಿಂದ್ರಾ ಮಾಡಿದ ಸಾಧನೆಯನ್ನು ಪುನಾರಾವರ್ತಿಸುವೆ ಎಂದು ಈ ಟಿವಿ ಭಾರತ ನಡೆಸಿದ ಎಕ್ಸ್​ಕ್ಲೂಸಿವ್​ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಕೊರೊನಾ ವೈರಸ್​ ಭೀತಿಯಿಂದ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿರುವ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಐತಿಹಾಸಿಕ ಎರಡನೇ ಚಿನ್ನದ ಪದಕ ಗೆದ್ದು ಕೊಡುವ ಬಹುದೊಡ್ಡ ಭರವಸೆ ಮೂಡಿಸಿದ್ದಾರೆ.

ಕೋಟ್ಯಂತರ ಜನ ಸಂಖ್ಯೆ ಇರುವ ಭಾರತ ದೇಶ ಒಲಿಂಪಿಕ್ಸ್​ ಇತಿಹಾಸದಲ್ಲಿ ಗೆದ್ದಿರುವುದು ಕೇವಲ ಒಂದೇ ಒಂದು ಚಿನ್ನದ ಪದಕ ಎನ್ನುವುದು ನಿಜಕ್ಕೂ ವಿಷಾದವೇ ಸರಿ. ಅದು 2008ರ ಬೀಜಿಂಗ್​ ಒಲಿಂಪಿಕ್ಸ್​ನಲ್ಲಿ ಅಭಿನವ್​ ಬಿಂದ್ರಾ ಶೂಟಿಂಗ್​ನಲ್ಲಿ ಗೆದ್ದಿದ್ದರು. ಇದು ವೈಯಕ್ತಿಕ ವಿಭಾಗದಲ್ಲಿ ಬಂದಿದ್ದ ಮೊದಲ ಚಿನ್ನದ ಪದಕವಾಗಿದೆ. ವಿಶ್ವದ ಎರಡನೇ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾದ ಭಾರತ ತಂಡ ಮುಂದಿನ ವರ್ಷ ನಡೆಯುವ ಒಲಿಂಪಿಕ್ಸ್​ನಲ್ಲಿ ಎರಡನೇ ಚಿನ್ನಕ್ಕಾಗಿ ಕಾತುರದಿಂದ ಕಾಯುತ್ತಿದೆ.

ಬಜರಂಗ್​ ಪೂನಿಯಾ

ಇಡಿ ದೇಶದ ಜನರ ನಿರೀಕ್ಷೆಯನ್ನು ಈಡೇರಿಸುವುದು ಅನೇಕ ಜನರಿಗೆ ಹೊರೆಯಾಗಿರಬಹುದು,. ಆದರೆ ಬಜರಂಗ್​ ಪೂನಿಯಾಗೆ ಇದೊಂದು ಹೆಮ್ಮೆಯ ವಿಷಯವಾಗಿದೆ.

"ದೇಶವಾಸಿಗಳು ಒಲಿಂಪಿಕ್​ ವೈಭವಕ್ಕಾಗಿ ನನ್ನ ಮೇಲೆ ಇಟ್ಟಿರುವ ನಿರೀಕ್ಷೆಗೆ ನಾನು ಕೃತಜ್ಞ ಹಾಗೂ ತೃಪ್ತಿ ಹೊಂದಿದ್ದೇನೆ. ಅವರು ನನ್ನನು ನಂಬುವುದರಿಂದಲೇ ನನ್ನ ಮೇಲೆ ಪದಕದ ನಿರೀಕ್ಷೆಗೆ ಕಾರಣವಾಗಿದೆ. 2008ರಲ್ಲಿ ಬೇಸಿಗೆ ಕೂಟದಲ್ಲಿ ಅಭಿನವ್​ ಬಿಂದ್ರಾ ಮಾಡಿರುವ ಸಾಧನೆಯನ್ನು ನಾನು ಪುನಾರಾವರ್ತಿಸುತ್ತೇನೆ ಎಂದು ಪೂನಿಯಾ ಹೇಳಿದ್ದಾರೆ.

Bajrang Punia
ಬಜರಂಗ್​ ಪೂನಿಯಾ

65ಕೆಜಿ ವಿಭಾಗದಲ್ಲಿ ಎರಡನೇ ಶ್ರೇಯಾಂಕದಲ್ಲಿರುವ ಪೂನಿಯಾ ಕೊರೊನಾ ವೈರಸ್​ ಲಾಕ್​ಡೌನ್​ ಕುರಿತು ಮಾತನಾಡಿದ್ದು, ತಾವು ಸರ್ಕಾರ ಮತ್ತು ವೈದ್ಯರು ನೀಡಿರುವ ಎಲ್ಲ ಸೂಚನೆ ಮತ್ತು ನಿರ್ದೇಶನಗಳನ್ನು ಪಾಲಿಸುತ್ತಿರುವುದಾಗಿ ಹೇಳಿದ್ದಾರೆ.

"ಲಾಕ್​ಡೌನ್​ ಜಾರಿಗೊಳಿಸಿದಾಗಿನಿಂದ ನಾನು ಮನೆಯ ಹೊರಗೆ ಹೋಗಿಲ್ಲ, ನಾನು ಮನೆಯಲ್ಲೇ ತರಬೇತಿ ಪಡೆಯುತ್ತಿದ್ದೇನೆ ಹಾಗೂ ಎಲ್ಲ ಕುಸ್ತಿ ಟೂರ್ನಿಗಳನ್ನು ರದ್ದುಗೊಳಿಸಿರುವುದರಿಂದ ನಾನು ಹೊರ ಹೋಗುತ್ತಿಲ್ಲ" ಎಂದು ಪೂನಿಯಾ ಹೇಳಿದ್ದಾರೆ

ಏಷ್ಯನ್​ ಮತ್ತು ಕಾಮನ್​​​​​​ವೆಲ್ತ್​ ಗೇಮ್ಸ್​ನಲ್ಲಿ ಚಿನ್ನದ ಪದಕ ವಿಜೇತರಾಗಿರುವ ಪೂನಿಯಾ ತಮ್ಮ ತರಬೇತಿ ಉತ್ತಮ ರೀತಿಯಲ್ಲಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ . ಇನ್ನು ತರಬೇತಿಗೆ ಅಗತ್ಯ ಪಾರ್ಟ್ನರ್​ ಅನುಪಸ್ಥಿತಿಯನ್ನು ನಿರಾಕರಿಸಿದ್ದಾರೆ.

Bajrang Punia
ಭಜರಂಗ್​ ಪೂನಿಯಾ

ನನ್ನ ತರಬೇತಿ ಅತ್ಯುತ್ತಮವಾಗಿ ನಡೆಯುತ್ತಿದೆ. ನನ್ನ ದೌರ್ಬಲ್ಯಗಳ ಬಗ್ಗೆ ಕೆಲಸ ಮಾಡುತ್ತಿದ್ದೇನೆ. ತರಬೇತಿ ವೇಳೆ ಪಾರ್ಟ್ನರ್​ನ ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ಏಕೆಂದರೆ ನಾನು ಮನೆಯಲ್ಲಿ ತರಬೇತಿ ಪಡೆಯುತ್ತಿದ್ದೇನೆ ಹೊರೆತು ಶಿಬಿರಗಳಲ್ಲಿ ಅಲ್ಲ. ಆದ್ದರಿಂದ ನನಗೆ ಪಾರ್ಟ್ನರ್​ ಲಭ್ಯರಿಲ್ಲ. ಅದೊಂದನ್ನು ಹೊರತುಪಡಿಸಿದರೆ ಎಲ್ಲವೂ ಉತ್ತಮವಾಗಿ ನಡೆಯುತ್ತಿದೆ. ನನ್ನ ತರಬೇತಿಯನ್ನ ಸುಧಾರಿಸಲು ನಾನು ಕೆಲವು ವಿಷಯಗಳನ್ನು ಅರ್ಥಮಾಡಿಕೊಂಡಿದ್ದೇನೆ.

ಇನ್ನು ತಮ್ಮ ವೃತ್ತಿಜೀವನದ ಅತ್ಯುತ್ತಮ ಕ್ಷಣ ಯಾವುದು ಎಂದಿದ್ದಕ್ಕೆ, ತಾವೂ 18 ಅಥವಾ 19 ವರ್ಷವಿದ್ದಾಗ 2013ರಲ್ಲಿ ವಿಶ್ವಚಾಂಪಿಯನ್​ಶಿಪ್​ನಲ್ಲಿ ಪದಕ ಗೆದ್ದಿರುವುದು ಎಂದು ಖೇಲ್​ರತ್ನ ಪ್ರಶಸ್ತಿ ವಿಜೇತ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.