ಭುವನೇಶ್ವರ್: ಇಲ್ಲಿನ ಕ್ರೀಡಾ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯೊಬ್ಬಳು ಸೀನಿಯರ್ಸ್ಗಳ ರ‍್ಯಾಗಿಂಗ್‌ಗೆ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಆತಂಕಕ್ಕೀಡು ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಒಲಿಂಪಿಯನ್ ಓಟಗಾರ್ತಿ ದ್ಯುತಿ ಚಾಂದ್, "ನಾನು ಕೂಡ ಹಾಸ್ಟೆಲ್ನಲ್ಲಿ ಕಿರುಕುಳಕ್ಕೆ ಒಳಗಾಗಿದ್ದೆ. ಹಿರಿಯರು ನನಗೆ ಬಾಡಿ ಮಸಾಜ್ ಮಾಡಲು ಒತ್ತಾಯಿಸುತ್ತಿದ್ದರು" ಎಂದು ಆಪಾದಿಸಿದ್ದಾರೆ.
"2006-08ರಲ್ಲಿ ಭುವನೇಶ್ವರ್‌ನ ಸ್ಪೋರ್ಟ್ಸ್ ಹಾಸ್ಟೆಲ್‌ನಲ್ಲಿದ್ದಾಗ ಹಿರಿಯರ ರ‍್ಯಾಗಿಂಗ್‌ಗೆ ಒಳಗಾಗಿದ್ದೆ. ಸೀನಿಯರ್ಸ್ ನನಗೆ ಅವರ ಬಟ್ಟೆಗಳನ್ನು ತೊಳೆಯಲು ಮತ್ತು ಬಾಡಿ ಮಸಾಜ್ ಮಾಡಲು ಆದೇಶಿಸುತ್ತಿದ್ದರು. ಇದನ್ನು ಮಾಡದಿದ್ದರೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು" ಎಂದು ತಿಳಿಸಿದ್ದಾರೆ.
"ನನ್ನ ಬಡತನದ ಬಗ್ಗೆಯೂ ಹೀಯಾಳಿಸುತ್ತಿದ್ದ ಅವರ ವಿರುದ್ಧ ವಸತಿನಿಲಯದ ಅಧಿಕಾರಿಗಳಿಗೆ ದೂರು ನೀಡಿದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿರಲಿಲ್ಲ. ಅಲ್ಲದೇ, ನನ್ನನ್ನೇ ಈ ಕುರಿತು ನಿಂದಿಸಲಾಗುತ್ತಿತ್ತು. ಇದು ನನ್ನನ್ನು ಮಾನಸಿಕವಾಗಿ ಘಾಸಿಗೊಳಿಸಿತ್ತು. ಆ ಸಮಯದಲ್ಲಿ ನಾನು ಅಸಹಾಯಕಳಾಗಿದ್ದೆ" ಎಂದು ಒಲಿಂಪಿಯನ್ ರನ್ನರ್ ಬೇಸರದಿಂದ ನುಡಿದರು.
ಭುವನೇಶ್ವರದ ಮಹಿಳಾ ಕ್ರೀಡಾ ವಸತಿನಿಲಯದಲ್ಲಿ(ಬಿಜೆಬಿ) 19 ವರ್ಷದ ಯುವತಿಯೊಬ್ಬಳು ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಪೊಲೀಸರಿಗೆ ಆತ್ಮಹತ್ಯೆ ಪತ್ರ ದೊರೆತಿದ್ದು, ಕಾಲೇಜಿನ ಮೂವರು ಸೀನಿಯರ್ಸ್ ತನಗೆ ರ‍್ಯಾಗಿಂಗ್ ಮಾಡಿ ಮಾನಸಿಕವಾಗಿ ಹಿಂಸಿಸುತ್ತಿದ್ದರು ಎಂದು ಬರೆದುಕೊಂಡಿದ್ದಾಳೆ.
ಇದನ್ನೂ ಓದಿ: 'ಅಗ್ನಿಪಥ' ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಪಿಐಎಲ್: ಮುಂದಿನ ವಾರ ವಿಚಾರಣೆ