ETV Bharat / sports

ಇಟಲಿ ವಿಶ್ವ ಯೂನಿವರ್ಸಿಟಿ ಗೇಮ್​​ನಲ್ಲಿ ದ್ಯುತಿ ಚಾಂದ್​ಗೆ ಚಿನ್ನ... ಮೋದಿ ಅಭಿನಂದನೆ - ​ಪ್ರಧಾನಿ

ಬುಧವಾರ ನಡೆದ ಫೈನಲ್​ನಲ್ಲಿ ಚಾಂದ್​ 11.32 ಸೆಕೆಂಡ್​ಗಳಲ್ಲಿ 100 ಮೀಟರ್​ ಪೂರ್ಣಗೊಳಿಸುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

Dutee Chand
author img

By

Published : Jul 10, 2019, 11:04 PM IST

ನೇಪಲ್ಸ್​(ಇಟಲಿ): ಇಟಲಿಯ ನೇಪಲ್ಸ್​ನಲ್ಲಿ ನಡೆದ 30ನೇ ವಿಶ್ವ ಯೂನಿವರ್ಸಿಟಿ ಗೇಮ್ಸ್​ನಲ್ಲಿ ಭಾರತದ ವೇಗದ ಓಟಗಾರ್ತಿಯಾಗಿರುವ ದ್ಯುತಿ ಚಾಂದ್​ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ಬುಧವಾರ ನಡೆದ ಫೈನಲ್​ನಲ್ಲಿ ಚಾಂದ್​ 11.32 ಸೆಕೆಂಡ್​ಗಳಲ್ಲಿ 100 ಮೀಟರ್​ ಪೂರ್ಣಗೊಳಿಸುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಓಟಗಾರ್ತಿ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. 23 ಹರೆಯದ ಚಾಂದ್​ ಸೆಮಿಫೈನಲ್​ನಲ್ಲಿ 11.41 ಸೆಕೆಂಡ್​ಗಳಲ್ಲಿ ಗುರಿ ತಲುಪಿದ್ದರು.

Dutee Chand
ದ್ಯುತಿ ಚಾಂದ್​ ಹಾಗೂ ಬೆಳ್ಳಿ ಹಾಗೂ ಕಂಚು ಗೆದ್ದವರು

ದ್ಯುತಿ ಚಾಂದ್​ ಚಿನ್ನಗೆದ್ದಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ "ಅಸಾಧಾರಣ ಕ್ರೀಡಾಪಟುವಿನ ಅಸಾಧಾರಣ ಸಾಧನೆ! ನೀವು ದೇಶಕ್ಕೆ ಕೀರ್ತಿ ತಂದಿದ್ದೀರಾ, ನೀವು 100 ಮೀಟರ್​ ಫೈನಲ್​ನಲ್ಲಿ ಚಿನ್ನ ಗೆಲ್ಲಲು ಅರ್ಹರಾಗಿದ್ದೀರ" ಎಂದು ಟ್ವೀಟ್​ ಮಾಡಿ ಶುಭ ಕೋರಿದ್ದಾರೆ.

ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್​ ಕೂಡ ಶುಭಕೋರಿದ್ದು, "ಭಾರತೀಯ ಮಹಿಳಾ ಓಟಗಾರ್ತಿಯರಲ್ಲಿ ಈ ಸಾಧನೆ ಮಾಡಿದ ಮೊದಲಿಗರು ನೀವು. ನೀವು ದೇಶ ಹೆಮ್ಮೆ ಪಟುವಂತೆ ಮಾಡಿದ್ದೀರಾ. ನಿಮ್ಮ ಪ್ರಯತ್ನ ಒಲಿಂಪಿಕ್​ನಲ್ಲೂ ಹೀಗೆ ಮುಂದುವರಿಯಲಿ" ಎಂದು ಅಭಿನಂದನೆ ಸಲ್ಲಿಸಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.