ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ನ ಸಿಂಗಲ್ಸ್ನ ಫೈನಲ್ 22ನೇ ಗ್ರಾನ್ಸ್ಲಾಂನ್ನು ಜೋಕೊವಿಚ್ ತಮ್ಮದಾಗಿಸಿಕೊಂಡಿದ್ದಾರೆ. 4ನೇ ಶ್ರೇಯಾಂಕದ ನೊವಾಕ್ ಜೋಕೊವಿಚ್ ಮತ್ತು ಮೂರನೇ ಶ್ರೇಯಾಂಕದ ಸ್ಟೆಫಾನೊಸ್ ಸಿಟ್ಸಿಪಾಸ್ ನಡುವೆ ನಡೆದ ಫೈನಲ್ ಹಣಾಹಣಿಯಲ್ಲಿ 6-3, 7-6, 7-6ರ ನೇರ ಸೆಟ್‌ಗಳಿಂದ 10ನೇ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದರು. ಈ ಮೂಲಕ ಶ್ರೇಯಾಂಕದಲ್ಲಿ ಮೊದಲ ಪಟ್ಟಕ್ಕೇರಿದರು.
-
🏆 🏆 🏆 🏆 🏆 CHAMPION 🏆 🏆 🏆 🏆 🏆@DjokerNole has mastered Melbourne for a TENTH time!@wwos • @espn • @eurosport • @wowowtennis • #AusOpen • #AO2023 pic.twitter.com/ZThnTrIXdt
— #AusOpen (@AustralianOpen) January 29, 2023 " class="align-text-top noRightClick twitterSection" data="
">🏆 🏆 🏆 🏆 🏆 CHAMPION 🏆 🏆 🏆 🏆 🏆@DjokerNole has mastered Melbourne for a TENTH time!@wwos • @espn • @eurosport • @wowowtennis • #AusOpen • #AO2023 pic.twitter.com/ZThnTrIXdt
— #AusOpen (@AustralianOpen) January 29, 2023🏆 🏆 🏆 🏆 🏆 CHAMPION 🏆 🏆 🏆 🏆 🏆@DjokerNole has mastered Melbourne for a TENTH time!@wwos • @espn • @eurosport • @wowowtennis • #AusOpen • #AO2023 pic.twitter.com/ZThnTrIXdt
— #AusOpen (@AustralianOpen) January 29, 2023
ಈ ಗ್ರಾನ್ಸ್ಲಾಂ ಗೆಲ್ಲುವ ಮೂಲಕ ರಾಫೆಲ್ ನಡಾಲ್ ದಾಖಲೆ ಸರಿಗಟ್ಟಿದ್ದಾರೆ. ಈವರೆಗೆ 21 ಗ್ರಾನ್ಸ್ಲಾಂಗಳ ಒಡೆಯ ಜೋಕೊವಿಚ್ ಇಂದು 10ನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡು ಒಟ್ಟು 22 ಪ್ರಶಸ್ತಿ ಗೆದ್ದು ರಾಫೆಲ್ ನಡಾಲ್ ರಷ್ಟೇ ಪ್ರಶಸ್ತಿ ಗೆಲ್ಲುವ ಮೂಲಕ ದಾಖಲೆಯನ್ನು ಸರಿಗಟ್ಟಿದ್ದಾರೆ.
-
2️⃣2️⃣ and counting ✍️ pic.twitter.com/zSAjtzAeo6
— #AusOpen (@AustralianOpen) January 29, 2023 " class="align-text-top noRightClick twitterSection" data="
">2️⃣2️⃣ and counting ✍️ pic.twitter.com/zSAjtzAeo6
— #AusOpen (@AustralianOpen) January 29, 20232️⃣2️⃣ and counting ✍️ pic.twitter.com/zSAjtzAeo6
— #AusOpen (@AustralianOpen) January 29, 2023
ಸಿಟ್ಸಿಪಾಸ್ ಮೊದಲ ಸೆಟ್‌ನಲ್ಲಿ 1-1 ರಿಂದ 15/40 ರಿಂದ ಎರಡು ಬ್ರೇಕ್ ಪಾಯಿಂಟ್‌ಗಳನ್ನು ಉಳಿಸಿದರು, ಜೊಕೊವಿಕ್ ಅವರ ಸಾಂಪ್ರದಾಯಿಕವಾಗಿ ವಿಶ್ವಾಸಾರ್ಹ ಮತ್ತು ನಿಖರವಾದ ಗ್ರೌಂಡ್‌ಸ್ಟ್ರೋಕ್‌ಗಳ ಮೂಲಕ ಆರಂಭದಲ್ಲಿ ಪ್ರಾಬಲ್ಯ ಸಾಧಿಸಿದರು. ಮೊದಲ ಸೆಟ್‌ನಲ್ಲಿ ಸ್ಟೆಫಾನೊಸ್ ಸಿಟ್ಸಿಪಾಸ್ ಅವರನ್ನು 6-3 ರಿಂದ ಮಣಿಸಿದರು. ನಂತರದ ಸೆಟ್‌ನಲ್ಲಿ ಮೂರನೇ ಶ್ರೇಯಾಂಕದ ಎದುರಾಳಿ ಸ್ಟೆಫಾನೊಸ್ ಸಿಟ್ಸಿಪಾಸ್ ಉತ್ತಮ ಕಮ್ ಬ್ಯಾಕ್ ಮಾಡಿದರು. ಸಮಾನ ಹೋರಾಟ ತೋರಿದ ಅವರು ಒಂದು ಅಂಕದ (7-6) ಅಂತರದಲ್ಲಿ ಸೋಲನುಭವಿಸಿದರು. ಮೂರನೇ ಸೆಟ್ನಲ್ಲೂ 7-6 ರಿಂದಲೇ ಜೋಕೊವಿಚ್ ಗೆಲುವು ಪಡೆದರು.
-
Fantastic fortnight for these two 👏
— #AusOpen (@AustralianOpen) January 29, 2023 " class="align-text-top noRightClick twitterSection" data="
#AusOpen • #AO2023 pic.twitter.com/r6KGiIHgnQ
">Fantastic fortnight for these two 👏
— #AusOpen (@AustralianOpen) January 29, 2023
#AusOpen • #AO2023 pic.twitter.com/r6KGiIHgnQFantastic fortnight for these two 👏
— #AusOpen (@AustralianOpen) January 29, 2023
#AusOpen • #AO2023 pic.twitter.com/r6KGiIHgnQ
"ಇದು ನನ್ನ ಜೀವನದಲ್ಲಿ ನಾನು ಆಡಿದ ಅತ್ಯಂತ ಸವಾಲಿನ ಪಂದ್ಯವಾಗಿದೆ. ಕಳೆದ ವರ್ಷ ಆಡಲಿಲ್ಲ, ಈ ವರ್ಷ ಅವಕಾಶ ದೊರೆತಿದ್ದು ನನ್ನ ಭಾಗ್ಯ. ಇದು ಬಹುಶಃ ನನ್ನ ಜೀವನದಲ್ಲಿ ಸಂದರ್ಭಗಳನ್ನು ಪರಿಗಣಿಸಿ ದೊಡ್ಡ ಗೆಲುವು ಎಂದು ನಾನು ಹೇಳಲೇಬೇಕು" ಎಂದು ಜೊಕೊವಿಕ್ ಹೇಳಿದರು.
ಪುರುಷರ ಡಬಲ್ಸ್: ಆಸ್ಟ್ರೇಲಿಯನ್ ವೈಲ್ಡ್ ಕಾರ್ಡ್ ಜೋಡಿ ರಿಂಕಿ ಹಿಜಿಕಾಟಾ ಮತ್ತು ಜೇಸನ್ ಕುಬ್ಲರ್ ಅವರು ಪುರುಷರ ಡಬಲ್ಸ್ನಲ್ಲಿ ಹ್ಯೂಗೋ ನೈಸ್ ಮತ್ತು ಜಾನ್ ಝಿಲಿನ್ಸ್ಕಿ ಅವರನ್ನು ಸೋಲಿಸಿ ತಮ್ಮ ಮೊದಲ ಗ್ರಾನ್ಸ್ಲಾಂ ಪ್ರಶಸ್ತಿಯನ್ನು ಗೆದ್ದುಕೊಂಡರು. ಆಸೀಸ್ ಮೊನಾಕೊ-ಪೋಲಿಷ್ ಜೋಡಿಯನ್ನು 6-4, 7-6 (4) ಸೆಟ್‌ಗಳಿಂದ ಸೋಲಿಸಿ ಬೆಳ್ಳಿಯನ್ನು ವಶಪಡಿಸಿಕೊಂಡರು.
-
The one and only @DjokerNole ☝️ pic.twitter.com/3Opq9GgYLi
— #AusOpen (@AustralianOpen) January 29, 2023 " class="align-text-top noRightClick twitterSection" data="
">The one and only @DjokerNole ☝️ pic.twitter.com/3Opq9GgYLi
— #AusOpen (@AustralianOpen) January 29, 2023The one and only @DjokerNole ☝️ pic.twitter.com/3Opq9GgYLi
— #AusOpen (@AustralianOpen) January 29, 2023
ಮಹಿಳಾ ಡಬಲ್ಸ್: ಹಾಲಿ ಚಾಂಪಿಯನ್ ಬಾರ್ಬೊರಾ ಕ್ರೆಜ್‌ಸಿಕೋವಾ ಮತ್ತು ಕಟೆರಿನಾ ಸಿನಿಯಾಕೋವಾ ಅವರು ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಜಪಾನ್‌ನ 10 ನೇ ಶ್ರೇಯಾಂಕದ ಶುಕೊ ಅಯೋಮಾ ಮತ್ತು ಎನಾ ಶಿಬಾಹರಾ ಅವರನ್ನು ಸೋಲಿಸುವ ಮೂಲಕ ತಮ್ಮದಾಗಿಸಿಕೊಂಡರು. ಈ ಮೂಲಕ ಗ್ರಾನ್ಸ್ಲಾಂ ಗೆಲುವಿನ ಸರಣಿಯನ್ನು ಮುಂದುವರೆಸಿದ್ದಾರೆ. ಜೆಕ್ ಗಣರಾಜ್ಯದ ನಂ.1 ಶ್ರೇಯಾಂಕ ಹೊಂದಿರುವ ಕ್ರೆಜ್ಸಿಕೋವಾ ಮತ್ತು ಸಿನಿಯಾಕೋವಾ ಅವರು ಮೆಲ್ಬೋರ್ನ್‌ನಲ್ಲಿ ಅಯೋಮಾ ಮತ್ತು ಶಿಬಹರಾ ಅವರನ್ನು 6-4, 6-3 ಸೆಟ್‌ಗಳಿಂದ ಸೋಲಿಸಿ ತಮ್ಮ ಎರಡನೇ ಪ್ರಶಸ್ತಿಯನ್ನು ಗೆದ್ದರು.
-
Soaking it up 😍 @BKrejcikova and @K_Siniakova know EXACTLY how to pose with a trophy 🏆
— #AusOpen (@AustralianOpen) January 29, 2023 " class="align-text-top noRightClick twitterSection" data="
#AusOpen • #AO2023 pic.twitter.com/UZmdxIEDTI
">Soaking it up 😍 @BKrejcikova and @K_Siniakova know EXACTLY how to pose with a trophy 🏆
— #AusOpen (@AustralianOpen) January 29, 2023
#AusOpen • #AO2023 pic.twitter.com/UZmdxIEDTISoaking it up 😍 @BKrejcikova and @K_Siniakova know EXACTLY how to pose with a trophy 🏆
— #AusOpen (@AustralianOpen) January 29, 2023
#AusOpen • #AO2023 pic.twitter.com/UZmdxIEDTI
2013 ಮತ್ತು 2014 ರಲ್ಲಿ ಇಟಲಿಯ ಸಾರಾ ಎರ್ರಾನಿ ಮತ್ತು ರಾಬರ್ಟಾ ವಿನ್ಸಿ ಅವರು ಬ್ಯಾಕ್ ಟು ಬ್ಯಾಕ್ ಆಸ್ಟ್ರೇಲಿಯನ್ ಓಪನ್ ಮಹಿಳಾ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದರು. ಇದಾದ ಬಳಿಕ ಎರಡು ಬಾರಿ ಜೆಕ್ ಗಣರಾಜ್ಯದ ಆಸ್ಟ್ರೇಲಿಯನ್ ಓಪನ್ ಜಯಿಸಿದೆ.
ಇದನ್ನೂ ಓದಿ: ಆಸ್ಟ್ರೇಲಿಯಾ ಓಪನ್ ಟೆನಿಸ್ಗೆ ಹೊಸ ಒಡತಿ: ಬೆಲಾರಸ್‌ನ ಅರಿನಾ ಸಬಲೆಂಕಾ ಚಾಂಪಿಯನ್