ನವದೆಹಲಿ : ಟೋಕಿಯೋ ಒಲಿಂಪಿಕ್ಸ್ ಬೌಂಡ್ ಡಿಸ್ಕಸ್ ಎಸೆತಗಾರ್ತಿ ಕಮಲ್ಪ್ರೀತ್ ಕೌರ್ ಇಂಡಿಯನ್ ಗ್ರ್ಯಾಂಡ್ ಫ್ರಿಕ್ಸ್ 4ನಲ್ಲಿ ತಮ್ಮ ಹೆಸರಿನಲ್ಲೇ ಇದ್ದ ರಾಷ್ಟ್ರೀಯ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. 22 ವರ್ಷದ ಕೌರ್ ಪಟಿಯಾಲದಲ್ಲಿ ನಡೆಯುತ್ತಿರುವ ಗ್ರ್ಯಾಂಡ್ ಪ್ರಿಕ್ಸ್ನಲ್ಲಿ 66.59 ಮೀಟರ್ ಎಸೆದಿದ್ದಾರೆ. ಅವರ ಹಿಂದೆ 2021ರ ಫೆಡ್ಕಪ್ನಲ್ಲಿ 65.06 ಮೀಟರ್ ಎಸೆದು ದಾಖಲೆ ಬರೆದಿದ್ದರು.
ಕ್ರೀಡಾ ಕ್ಷೇತ್ರದಲ್ಲಿ ಶಾಟ್ಪುಟ್ ಎಸೆತಗಾರ್ತಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ಕಮಲ್ಪ್ರೀತ್ ಡಿಸ್ಕಸ್ ಥ್ರೋನಲ್ಲಿ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಅವರು ತಮ್ಮ ಮೊದಲ ಅಧಿಕೃತ ಎಸೆತದಲ್ಲಿ ಒಲಿಂಪಿಕ್ಸ್ ಅರ್ಹತೆಗೆ ನಿಗದಿ ಮಾಡಲಾಗಿದ್ದ 63.05 ಮೀಟರ್ ದೂರವನ್ನು ಎಸೆಯುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ 9 ವರ್ಷಗಳ ಹಿಂದೆ ಕಷ್ಣಾ ಪೂನಿಯಾ ಅವರ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಬ್ರೇಕ್ ಮಾಡಿದ್ದರು.
-
Record Alert- Kamalpreet Kaur improves her own national record with a throw of 66.59m in Women Discus Throw in #IGP 4 at Patiala. Her previous best was 65.06m which she achieved at Federation Cup in March 2021 #Tokyo2020 @SonySportsIndia pic.twitter.com/tJtbCcjTOA
— Athletics Federation of India (@afiindia) June 21, 2021 " class="align-text-top noRightClick twitterSection" data="
">Record Alert- Kamalpreet Kaur improves her own national record with a throw of 66.59m in Women Discus Throw in #IGP 4 at Patiala. Her previous best was 65.06m which she achieved at Federation Cup in March 2021 #Tokyo2020 @SonySportsIndia pic.twitter.com/tJtbCcjTOA
— Athletics Federation of India (@afiindia) June 21, 2021Record Alert- Kamalpreet Kaur improves her own national record with a throw of 66.59m in Women Discus Throw in #IGP 4 at Patiala. Her previous best was 65.06m which she achieved at Federation Cup in March 2021 #Tokyo2020 @SonySportsIndia pic.twitter.com/tJtbCcjTOA
— Athletics Federation of India (@afiindia) June 21, 2021
2018ರ ಏಷ್ಯನ್ ಗೇಮ್ಸ್ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದಾಗ ಕ್ರೀಡೆಯನ್ನು ತ್ಯಜಿಸಬೇಕೆಂದು ನಿರ್ಧರಿಸಿದ್ದ ಕೌರ್ ಇದೀಗ ಭಾರತಕ್ಕೆ ಒಲಿಂಪಿಕ್ಸ್ನಲ್ಲಿ ಪದಕ ತಂದು ಕೊಡುವ ಭರವಸೆ ವ್ಯಕ್ತಪಡಿಸಿದ್ದಾರೆ. ರಿಯೋ ಒಲಿಂಪಿಕ್ಸ್ನಲ್ಲಿ ಕಳೆದ ಬಾರಿ ಕಂಚು ಗೆದ್ದಿದ್ದ ಸ್ಪರ್ಧಿ 65.34 ಮೀಟರ್ ಎಸೆದಿದ್ದರು ಎನ್ನುವುದನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಬಹುದು.
ಇದನ್ನು ಓದಿ:10,000 ಪ್ರೇಕ್ಷಕರಿಗೆ ಕ್ರೀಡಾಕೂಟ ವೀಕ್ಷಿಸಲು ಟೋಕಿಯೋ ಒಲಿಂಪಿಕ್ಸ್ ಸಮಿತಿ ಒಪ್ಪಿಗೆ