ETV Bharat / sports

ಸ್ಟೇಡಿಯಂನಲ್ಲಿ ಕುಸ್ತಿಪಟು ಕೊಲೆ.. ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್​ ಹುಡುಕಾಟದಲ್ಲಿ ಪೊಲೀಸ್​

author img

By

Published : May 6, 2021, 4:42 PM IST

ನಾವು ಸುಶೀಲ್​ ಕುಮಾರ್​ ಅವರನ್ನು ವಿಚಾರಣೆ ನಡೆಸುವ ಸಲುವಾಗಿ ಅವರ ಮನೆಗೆ ತೆರಳಿದಾಗ ಅವರು ಇರಲಿಲ್ಲ. ಆದ್ದರಿಂದ ಕೆಲವು ತಂಡಗಳನ್ನು ರಚಿಸಿ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ದೆಹಲಿಯ ಹೆಚ್ಚುವರಿ ಪೊಲೀಸ್​ ಆಯುಕ್ತ ಗುರುಕ್ಬಾಲ್ ಸಿಂಗ್ ಸಿಧು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಸುಶೀಲ್ ಕುಮಾರ್
ಸುಶೀಲ್ ಕುಮಾರ್

ನವದೆಹಲಿ: ದೆಹಲಿಯ ಛತ್ರಸಾಲ್​ ಸ್ಟೇಡಿಯಂನಲ್ಲಿ ನಡೆದ ಯುವ ಕುಸ್ತಿಪಟುವಿನ ಕೊಲೆ ಪ್ರಕರಣದಲ್ಲಿ 2 ಬಾರಿಯ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯೊಂದರಲ್ಲಿ ಹರಿಯಾಣದ ಸೋನಿಪತ್​ಗೆ ಸೇರಿದ 23 ವರ್ಷದ ಕುಸ್ತಿಪಟು ಸಾಗರ್​ ಎಂಬಾತ ಕೊಲೆಯಾಗಿದ್ದಾನೆ. ಆತನ ಸ್ನೇಹಿತ ಸೋನು ಮಹಲ್​ ತೀವ್ರ ಗಾಯಗೊಂಡಿದ್ದಾನೆ. ಈತ ಒಬ್ಬ ಕುಖ್ಯಾತ ಕ್ರಿಮಿನಲ್​ ಎಂದು ತಿಳಿದುಬಂದಿದ್ದು, ಈ ಹಿಂದೆ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಎನ್ನಲಾಗ್ತಿದೆ.

ನಾವು ಸುಶೀಲ್​ ಕುಮಾರ್​ ಅವರನ್ನು ವಿಚಾರಣೆ ನಡೆಸುವ ಸಲುವಾಗಿ ಅವರ ಮನೆಗೆ ತೆರಳಿದ್ದೆವು, ಅಲ್ಲಿ ಅವರು ಇರಲಿಲ್ಲ. ಆದ್ದರಿಂದ ಕೆಲವು ತಂಡಗಳನ್ನು ರಚಿಸಿ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ದೆಹಲಿಯ ಹೆಚ್ಚುವರಿ ಪೊಲೀಸ್​ ಆಯುಕ್ತ ಗುರುಕ್ಬಾಲ್ ಸಿಂಗ್ ಸಿಧು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿದ್ದ 5 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಂದು ವಾಹನದಲ್ಲಿ ಲೋಡ್ ಆಗಿರುವ ಡಬಲ್ ಬ್ಯಾರಲ್ ಗನ್ ಮತ್ತು 5 ಜೀವಂತ ಗುಂಡುಗಳು, 2 ದೊಣ್ಣೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮೃತಪಟ್ಟಿರುವ ಯುವಕ ಸಾವಿಗೂ ಮುನ್ನ ಸುಶೀಲ್ ಕುಮಾರ್ ಮನೆಯಲ್ಲಿ ಬಾಡಿಗೆಗಿದ್ದ. ಮನೆ ಖಾಲಿ ಮಾಡುವ ವಿಚಾರದಲ್ಲಿ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ದಲಾಲ್ (24) ಎಂಬ ಯುವಕನನ್ನು ಬಂಧಿಸಲಾಗಿದೆ. ಈ ಘಟನೆಯಲ್ಲಿ ಸುಶೀಲ್ ಕುಮಾರ್ ಕೈವಾಡ ಇರುವುದು ತಿಳಿಯುತ್ತಿದ್ದಂತೆಯೇ ಆತನ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಬುಧವಾರ ಮಾಧ್ಯಮದೊಂದಿಗೆ ಮಾತನಾಡಿದ್ದ ಸುಶೀಲ್ ಕುಮಾರ್​, ಈ ಘಟನೆ ಮಂಗಳವಾರ ನಡೆದಿದೆ. ಕೆಲವು ಅಪರಿಚಿತ ವ್ಯಕ್ತಿಗಳು ಸ್ಟೇಡಿಯಂಗೆ ಜಂಪ್​ ಮಾಡಿ ಬಂದು ಹೊಡೆದಾಡಿಕೊಂಡರಿದ್ದರೆಂದು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಈ ಘಟನೆಗೂ ಕ್ರೀಡಾಂಗಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದರು.

ಇದನ್ನು ಓದಿ: "ಮೊದಲು ಎಲ್ಲರನ್ನೂ ಜೋಪಾನವಾಗಿ ಮನೆಗೆ ಕಳುಹಿಸಿ, ಕೊನೆಯಲ್ಲಿ ನಾನು ಹೋಗ್ತೇನೆ'

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.