ETV Bharat / sports

2028ರ ಒಲಿಂಪಿಕ್ಸ್​ಗೆ ಕ್ರಿಕೆಟ್ ಸೇರ್ಪಡೆ ನಿರ್ಧಾರ ವಿಳಂಬ - ಈಟಿವಿ ಭಾರತ ಕನ್ನಡ

ಲಾಸ್ ಏಂಜಲೀಸ್‌ನ 2028ರ ಒಲಂಪಿಕ್ಸ್‌ಗೆ ಕ್ರಿಕೆಟ್​ ಸೇರಿಸುವ ನಿರ್ಧಾರ ಮತ್ತೆ ವಿಳಂಬವಾಗಿದೆ.

ಒಲಂಪಿಕ್ಸ್​ಗೆ ಕ್ರಿಕೆಟ್ ಸೇರ್ಪಡೆ ನಿರ್ಧಾರ ವಿಳಂಬ

author img

By ETV Bharat Karnataka Team

Published : Sep 7, 2023, 7:47 PM IST

ಮುಂಬೈ: ಭಾರತದಲ್ಲಿ ಸದ್ಯ ಹೆಚ್ಚು ಮಹತ್ವ ಪಡೆದಿರುವ ಕ್ರೀಡೆಯೆಂದರೆ ಅದು ಕ್ರಿಕೆಟ್​. ಅದಕ್ಕಾಗಿ​ ಈ ಕ್ರೀಡೆಯನ್ನು ಒಲಿಂಪಿಕ್ಸ್‌ಗೆ ಸೇರಿಸುವ ಕೂಗು ಹಲವಾರು ವರ್ಷಗಳಿಂದ ಕೇಳಿ ಬಂದಿದೆ. 2028ರ ಲಾಸ್​ ಎಂಜಲ್ಸ್​​ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಸೇರಿಸಲು ಪರಿಗಣಿಸಲಾಗುತ್ತಿರುವ ಒಂಬತ್ತು ಕ್ರೀಡೆಗಳ ಪೈಕಿ ಕ್ರಿಕೆಟ್ ಮುಂಚೂಣಿಯಲ್ಲಿದೆ. ಭಾರತದಲ್ಲಿ ಕ್ರಿಕೆಟ್‌ ಅಪಾರ ಅಭಿಮಾನಿಗಳನ್ನು ಆಕರ್ಷಿಸುವ ಸಾಮರ್ಥ್ಯ ಹೊಂದಿರುವ ಕ್ರೀಡೆ ಆಗಿದೆ. ಹಾಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲು ಐಸಿಸಿ ಮತ್ತು ಬಿಸಿಸಿಐ ಒಲಿಂಪಿಕ್ ಸಮಿತಿಗೆ ಹಿಂದಿನಿಂದಲು ಮನವಿಯನ್ನು ಸಲ್ಲಿಸುತ್ತಲೆ ಬಂದಿವೆ.

  • INFORMATION FOR THE MEDIA:

    As announced, the IOC Executive Board will hold a remote meeting on Friday, 8 September. It will serve to prepare the agenda for the 141st IOC Session in October in Mumbai, India.

    Please find a revised media advisory here: https://t.co/fexUBQWpBc pic.twitter.com/AK6q0hzvKk

    — IOC MEDIA (@iocmedia) September 6, 2023 " class="align-text-top noRightClick twitterSection" data=" ">

ಇದೀಗಾ 2028ರ ಒಲಿಂಪಿಕ್ಸ್​ಗೆ ಕ್ರಿಕೆಟ್ ಸೇರಿಸುವ ನಿರ್ಧಾರದ ಸಭೆಯನ್ನು ಅಂತಾರಾಷ್ಟ್ರೀಯ ಒಲಂಪಿಕ್ ಸಮಿತಿ (IOC) ಮುಂದೂಡಿದೆ. ಐಒಸಿಯ ಕಾರ್ಯಕಾರಿ ಮಂಡಳಿ ಯೋಜನೆಯಂತೆ ಸಭೆಯನ್ನು ಆಯೋಜಿಸಿತ್ತು. ಆದರೆ, 2028ರ ಒಲಿಂಪಿಕ್ಸ್‌ಗೆ ಹೊಸ ಕ್ರೀಡೆಗಳನ್ನು ಸೇರಿಸುವ ಚರ್ಚೆಯನ್ನು ಕಾರ್ಯಸೂಚಿಯಿಂದ ತೆಗೆದುಹಾಕಲಾಗಿದ್ದು, ಅಂತಾರಾಷ್ಟ್ರೀಯ ಒಲಂಪಿಕ್ಸ್​ ಕಾರ್ಯಕಾರಿ ಮಂಡಳಿಯ ಮುಂದಿನ ಸಭೆಯನ್ನು ಶುಕ್ರವಾರ ಅಂದರೆ ನಾಳೆ ಸ್ವಿಟ್ಜರ್ಲೆಂಡ್‌ನ ಲೌಸನ್ನೆಯಲ್ಲಿ ನಿಗದಿಪಡಿಸಲಾಗಿದೆ.

ಇನ್ನು ಅಂತಾರಾಷ್ಟ್ರೀಯ ಒಲಂಪಿಕ್​ ಸಮೀತಿ ಸದಸ್ಯರು ಅಕ್ಟೋಬರ್ 15 ರಿಂದ 17 ರವರೆಗೆ ಮುಂಬೈಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಕ್ರಿಕೆಟ್‌ ಸೇರ್ಪಡೆಯ ಕುರಿತು ಬಿಸಿಸಿಐ ಚರ್ಚೆಸಲಿದೆ ಎಂದು ನಿರೀಕ್ಷಿಸಲಾಗಿದೆ. 2028ರಲ್ಲಿ ಲಾಸ್ ಏಂಜಲೀಸ್ ಗೇಮ್ಸ್‌ಗಾಗಿ ಹೊಸ ಕ್ರೀಡೆಗಳನ್ನು ಘೋಷಿಸಬೇಕಿದ್ದ ನಿಗದಿತ ಆನ್‌ಲೈನ್ ಸಮ್ಮೇಳನವನ್ನು ಸಮಿತಿ ಮುಂದೂಡಿದೆ. ಒಲಂಪಿಕ್​ ಸಮೀತಿ ಮತ್ತು ಸಂಘಟನಾ ಸಮಿತಿಯ ನಡುವೆ ನಡೆಯುತ್ತಿರುವ ಚರ್ಚೆಗಳಿಂದಾಗಿ, ಒಲಿಂಪಿಕ್ ಆಯೋಗವು ಇನ್ನೂ ಯಾವುದೇ ಕಾರ್ಯಕ್ರಮಗಳನ್ನು ಮಾಡಿಲ್ಲ. ಅಂತಾರಾಷ್ಟ್ರೀಯ ಒಲಿಂಪಿಕ್ ಕಾರ್ಯಕಾರಿ ಮಂಡಳಿಗಾಗಿ ಅಂತಿಮ ಶಿಫಾರಸನ್ನು ಸಿದ್ಧಪಡಿಸಿ ಸಭೆಸ ನಡೆಸಲು ಅವಕಾಶವಿದೆ. ಇದರ ಪರಿಣಾಮವಾಗಿ, ಅಂತಾರಾಷ್ಟ್ರೀಯ ಒಲಂಪಿಕ್ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಚರ್ಚಿಸಿ, ನಿರ್ಧರಿಸುವ ದಿನಾಂಕದಂದು ಮುಂದಿನ ಕಾರ್ಯಕ್ರಮಗಳು ನಡೆಯಲಿದೆ ಎಂದು ಐಒಸಿ ಬುಧವಾರ ಅಧಿಕೃತ ಟಿಪ್ಪಣಿಯಲ್ಲಿ ತಿಳಿಸಿದೆ.

2028 ಒಲಂಪಿಕ್ಸ್​ಗೆ ಪ್ರವೇಶ ಬಯಸುವ ಒಂಬತ್ತು ಕ್ರೀಡೆಗಳೆಂದರೆ ಕ್ರಿಕೆಟ್, ಫ್ಲಾಗ್ ಫುಟ್ಬಾಲ್​ , ಕರಾಟೆ, ಕಿಕ್‌ಬಾಕ್ಸಿಂಗ್, ಬೇಸ್‌ಬಾಲ್-ಸಾಫ್ಟ್‌ಬಾಲ್, ಲ್ಯಾಕ್ರೋಸ್, ಬ್ರೇಕ್‌ಡ್ಯಾನ್ಸಿಂಗ್, ಸ್ಕ್ವಾಷ್ ಮತ್ತು ಮೋಟಾರ್‌ಸ್ಪೋರ್ಟ್ ಆಗಿವೆ. ಮತ್ತೊಂದೆಡೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹಲವು ವರ್ಷಗಳಿಂದ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡಿಸಲು ಕಸರತ್ತು ನಡೆಸುತ್ತಿದೆ. 1900ರಲ್ಲಿ ಒಲಿಂಪಿಕ್ಸ್‌ನಲ್ಲಿ ಕೊನೆಯದಾಗಿ ಕ್ರಿಕೆಟ್ ಪಂದ್ಯವನ್ನು ಆಡಿಸಲಾಗಿತ್ತು. ಇದರಲ್ಲಿ ಬ್ರಿಟನ್ ಮತ್ತು ಫ್ರಾನ್ಸ್ ಚಿನ್ನದ ಪದಕಕ್ಕಾಗಿ ಹೋರಾಡಿದ್ದವು. ಬ್ರಿಟನ್ ಚಿನ್ನದ ಪದಕವನ್ನು ವಶಪಡಿಸಿಕೊಂಡಿತ್ತು.

ಇದನ್ನೂ ಓದಿ: 2023 Cricket World Cup: ಆಯ್ಕೆಗೆ ಲಭ್ಯವಿರುವ ಅತ್ಯುತ್ತಮ ಭಾರತೀಯ ತಂಡ ಇದು: ಲಾಲ್‌ಚಂದ್ ರಜಪೂತ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.