ETV Bharat / sports

ಕುಸ್ತಿಯಲ್ಲಿ ಭಾರತದ ಭುಜಬಲ ಪರಾಕ್ರಮ; ಪಾಕ್‌ ಮಣಿಸಿ ಚಿನ್ನದ ನಗೆ ಬೀರಿದ ನವೀನ್

author img

By

Published : Aug 7, 2022, 7:41 AM IST

Updated : Aug 7, 2022, 2:26 PM IST

ಕಾಮನ್​ವೆಲ್ತ್​ ಗೇಮ್ಸ್‌ನಲ್ಲಿ ಭಾರತ ಕುಸ್ತಿಪಟುಗಳ ಪಟ್ಟುಗಳಿಗೆ ಪದಕಗಳ ಸುರಿಮಳೆಯಾಗುತ್ತಿದೆ. 74 ಕೆಜಿ ವಿಭಾಗದಲ್ಲಿ ಪಾಕ್ ಸ್ಪರ್ಧಿಯನ್ನು ಸೋಲಿಸಿದ ನವೀನ್​ಕುಮಾರ್​ ಚಿನ್ನ ಗೆದ್ದರು.

indian-wrestler-naveen
ಕುಸ್ತಿಯಲ್ಲಿ 12ನೇ ಸ್ವರ್ಣ

ಬರ್ಮಿಂಗ್‌ಹ್ಯಾಮ್‌(ಯುಕೆ): ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಭಾರತದ ಭುಜಬಲ ಪರಾಕ್ರಮ ಮುಂದುವರಿದಿದೆ. ಕುಸ್ತಿಯ ಎಲ್ಲ ವಿಭಾಗದಲ್ಲಿಯೂ ಭಾರತದ ಶಕ್ತಿ ಪ್ರದರ್ಶನ ಕಂಡುಬರುತ್ತಿದೆ. ಪುರುಷರ 74 ಕೆಜಿ ವಿಭಾಗದ ಫೈನಲ್‌ ಪಂದ್ಯದಲ್ಲಿ ಕುಸ್ತಿಪಟು ನವೀನ್ ಕುಮಾರ್, ಪಾಕಿಸ್ತಾನದ ಮೊಹಮ್ಮದ್ ಷರೀಫ್ ತಾಹಿರ್ ವಿರುದ್ಧ 9-0 ಅಂತರದ ಜಯ ಸಾಧಿಸಿ ಚಿನ್ನಕ್ಕೆ ಕೊರಳೊಡ್ಡಿದರು. ಇದು ಕುಸ್ತಿಯಲ್ಲಿ ದೇಶದ ಬಂದ 12 ನೇ ಪದಕ ಎಂಬುದು ಗಮನಾರ್ಹ.

12th gold medal🥇, 6th in wrestling.. Naveen Kumar winning moments..#Wrestling #naveenkumar #CommonwealthGames2022 pic.twitter.com/giW1T75iLo

— Nishant Rana (@nishantranaCRM) August 6, 2022

ನವೀನ್​ ಮೊದಲ ಸುತ್ತಿನಲ್ಲಿ ಪಾಕ್​ ಪೈಲ್ವಾನ್​ನನ್ನು ಉರುಳಿಸುವ ಮೂಲಕ 2 ಪಾಯಿಂಟ್​ ಪಡೆದರು. ಬಳಿಕ ಇವರ ಹಲವು ಪ್ರಯತ್ನಗಳಿಗೆ ತಾಹಿರ್​ ಸವಾಲೊಡ್ಡಿದರು. ಮೊದಲಾರ್ಧದ ಉಳಿದ ಸಮಯದಲ್ಲಿ ಇಬ್ಬರೂ ಆಟಗಾರರು ರಕ್ಷಣಾತ್ಮಕ ಆಟದ ಮೊರೆ ಹೋದರು. ದ್ವಿತೀಯಾರ್ಧದಲ್ಲಿ ಪಾಕಿಸ್ತಾನದ ಆಟಗಾರನ ಎಲ್ಲ ಪಟ್ಟುಗಳನ್ನು ಬೇಧಿಸಿದ ಚಾಣಾಕ್ಷ ಜಟ್ಟಿ ನವೀನ್​ ಸತತವಾಗಿ 8 ಪಾಯಿಂಟ್​ ತನ್ನ ಖಾತೆಗೆ ಹಾಕಿಕೊಂಡರು. ಈ ವೇಳೆ ಆದ ಒಂದು ಫೌಲ್​ನಿಂದ ಅವರು 1 ಅಂಕ ಕಳೆದುಕೊಳ್ಳಬೇಕಾಯ್ತು. ಆದರೂ ಪಟ್ಟು ಬಿಡದ ನವೀನ್ ಆಕ್ರಮಣಕಾರಿ ಆಟವಾಡಿದರು.

23 ವರ್ಷದ ನವೀನ್‌ರ ತಾಂತ್ರಿಕತೆ ಮತ್ತು ಆಕ್ರಮಣಕಾರಿ ಆಟದ ಮುಂದೆ ಪಾಕ್ ಪೈಲ್ವಾನ ಸಂಪೂರ್ಣವಾಗಿ ಬಸವಳಿದರು. ಉಳಿದ ಸಮಯದಲ್ಲಿ ರಕ್ಷಣೆಗೆ ಮೊರೆ ಹೋಗಿ ಅವರು ಸೋಲನುಭವಿಸಿದರು. ಈ ಮೂಲಕ ನವೀನ್ ಚೊಚ್ಚಲ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಚಿನ್ನದ ಬೆಳೆ ಬೆಳೆದರು. 23 ವರ್ಷದೊಳಗಿನ ಪಂದ್ಯದ ವಿಶ್ವ ಚಾಂಪಿಯನ್​ ನವೀನ್,​ ಟೋಕಿಯೋ ಒಲಿಂಪಿಕ್​ ಸಂದರ್ಭದಲ್ಲಿ ಕೋವಿಡ್​ ತುತ್ತಾಗಿ ಕ್ರೀಡಾಕೂಟ ತಪ್ಪಿಸಿಕೊಂಡಿದ್ದರು.

ಇದನ್ನೂ ಓದಿ: CWG 2022: ಇತಿಹಾಸ ಸೃಷ್ಟಿಸಿದ ವಿನೇಶ್​ ಫೋಗಟ್​... ಹ್ಯಾಟ್ರಿಕ್​​​ ಚಿನ್ನಕ್ಕೆ ಮುತ್ತಿಕ್ಕಿದ ಕುಸ್ತಿಪಟು

ಬರ್ಮಿಂಗ್‌ಹ್ಯಾಮ್‌(ಯುಕೆ): ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಭಾರತದ ಭುಜಬಲ ಪರಾಕ್ರಮ ಮುಂದುವರಿದಿದೆ. ಕುಸ್ತಿಯ ಎಲ್ಲ ವಿಭಾಗದಲ್ಲಿಯೂ ಭಾರತದ ಶಕ್ತಿ ಪ್ರದರ್ಶನ ಕಂಡುಬರುತ್ತಿದೆ. ಪುರುಷರ 74 ಕೆಜಿ ವಿಭಾಗದ ಫೈನಲ್‌ ಪಂದ್ಯದಲ್ಲಿ ಕುಸ್ತಿಪಟು ನವೀನ್ ಕುಮಾರ್, ಪಾಕಿಸ್ತಾನದ ಮೊಹಮ್ಮದ್ ಷರೀಫ್ ತಾಹಿರ್ ವಿರುದ್ಧ 9-0 ಅಂತರದ ಜಯ ಸಾಧಿಸಿ ಚಿನ್ನಕ್ಕೆ ಕೊರಳೊಡ್ಡಿದರು. ಇದು ಕುಸ್ತಿಯಲ್ಲಿ ದೇಶದ ಬಂದ 12 ನೇ ಪದಕ ಎಂಬುದು ಗಮನಾರ್ಹ.

ನವೀನ್​ ಮೊದಲ ಸುತ್ತಿನಲ್ಲಿ ಪಾಕ್​ ಪೈಲ್ವಾನ್​ನನ್ನು ಉರುಳಿಸುವ ಮೂಲಕ 2 ಪಾಯಿಂಟ್​ ಪಡೆದರು. ಬಳಿಕ ಇವರ ಹಲವು ಪ್ರಯತ್ನಗಳಿಗೆ ತಾಹಿರ್​ ಸವಾಲೊಡ್ಡಿದರು. ಮೊದಲಾರ್ಧದ ಉಳಿದ ಸಮಯದಲ್ಲಿ ಇಬ್ಬರೂ ಆಟಗಾರರು ರಕ್ಷಣಾತ್ಮಕ ಆಟದ ಮೊರೆ ಹೋದರು. ದ್ವಿತೀಯಾರ್ಧದಲ್ಲಿ ಪಾಕಿಸ್ತಾನದ ಆಟಗಾರನ ಎಲ್ಲ ಪಟ್ಟುಗಳನ್ನು ಬೇಧಿಸಿದ ಚಾಣಾಕ್ಷ ಜಟ್ಟಿ ನವೀನ್​ ಸತತವಾಗಿ 8 ಪಾಯಿಂಟ್​ ತನ್ನ ಖಾತೆಗೆ ಹಾಕಿಕೊಂಡರು. ಈ ವೇಳೆ ಆದ ಒಂದು ಫೌಲ್​ನಿಂದ ಅವರು 1 ಅಂಕ ಕಳೆದುಕೊಳ್ಳಬೇಕಾಯ್ತು. ಆದರೂ ಪಟ್ಟು ಬಿಡದ ನವೀನ್ ಆಕ್ರಮಣಕಾರಿ ಆಟವಾಡಿದರು.

23 ವರ್ಷದ ನವೀನ್‌ರ ತಾಂತ್ರಿಕತೆ ಮತ್ತು ಆಕ್ರಮಣಕಾರಿ ಆಟದ ಮುಂದೆ ಪಾಕ್ ಪೈಲ್ವಾನ ಸಂಪೂರ್ಣವಾಗಿ ಬಸವಳಿದರು. ಉಳಿದ ಸಮಯದಲ್ಲಿ ರಕ್ಷಣೆಗೆ ಮೊರೆ ಹೋಗಿ ಅವರು ಸೋಲನುಭವಿಸಿದರು. ಈ ಮೂಲಕ ನವೀನ್ ಚೊಚ್ಚಲ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಚಿನ್ನದ ಬೆಳೆ ಬೆಳೆದರು. 23 ವರ್ಷದೊಳಗಿನ ಪಂದ್ಯದ ವಿಶ್ವ ಚಾಂಪಿಯನ್​ ನವೀನ್,​ ಟೋಕಿಯೋ ಒಲಿಂಪಿಕ್​ ಸಂದರ್ಭದಲ್ಲಿ ಕೋವಿಡ್​ ತುತ್ತಾಗಿ ಕ್ರೀಡಾಕೂಟ ತಪ್ಪಿಸಿಕೊಂಡಿದ್ದರು.

ಇದನ್ನೂ ಓದಿ: CWG 2022: ಇತಿಹಾಸ ಸೃಷ್ಟಿಸಿದ ವಿನೇಶ್​ ಫೋಗಟ್​... ಹ್ಯಾಟ್ರಿಕ್​​​ ಚಿನ್ನಕ್ಕೆ ಮುತ್ತಿಕ್ಕಿದ ಕುಸ್ತಿಪಟು

Last Updated : Aug 7, 2022, 2:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.