ETV Bharat / sports

ಚಿನ್ನಕ್ಕೆ ಬಜರಂಗ, ಪೂನಿಯಾ, ಸಾಕ್ಷಿ, ಅಂಶು ಹೋರಾಟ; ಕಂಚಿಗೋಸ್ಕರ ಮೋಹಿತ್, ದಿವ್ಯಾ ಫೈಟ್​​ - ಈಟಿವಿ ಭಾರತ ಕನ್ನಡ

ಬರ್ಮಿಂಗ್​ಹ್ಯಾಮ್​ನ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾರತದ ಕುಸ್ತಿಪಟುಗಳು ಅದ್ಭುತ ಪ್ರದರ್ಶನ ನೀಡಿದ್ದು, ಭಾರತಕ್ಕೆ ಮತ್ತಷ್ಟು ಪದಕ ಖಚಿತಗೊಳಿಸಿದ್ದಾರೆ.

Etv BharatCommonwealth Games
Etv BharatCommonwealth Games
author img

By

Published : Aug 5, 2022, 9:29 PM IST

ಬರ್ಮಿಂಗ್​ಹ್ಯಾಮ್​: ಕಾಮನ್​ ವೆಲ್ತ್ ಗೇಮ್ಸ್​​ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ. ಈವರೆಗೆ ಒಟ್ಟು 20 ಪದಕ ಗೆದ್ದಿರುವ ಭಾರತೀಯ ಕ್ರೀಡಾಪಟುಗಳು ಇದೀಗ ಮತ್ತಷ್ಟು ಮೆಡಲ್ಸ್​ ಗೆಲ್ಲುವುದು ಖಚಿತವಾಗಿದೆ. ಭಾರತದ ಕುಸ್ತಿಪಟುಗಳು ಅದ್ಭುತ ಪ್ರದರ್ಶನ ನೀಡಿದ್ದು, ದೇಶಕ್ಕಾಗಿ ಮತ್ತಷ್ಟು ಸ್ವರ್ಣ ಪದಕ ಗೆಲ್ಲುವುದರತ್ತ ದಾಪುಗಾಲು ಇಟ್ಟಿದ್ದಾರೆ.

ಪುರುಷರ 65 ಕೆಜಿ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಬಜರಂಗ ಪೂನಿಯಾ ಫೈನಲ್​​ಗೆ ಲಗ್ಗೆ ಹಾಕಿದ್ದು, ಗೇಮ್ಸ್​​ನಲ್ಲಿ ಹ್ಯಾಟ್ರಿಕ್​ ಚಿನ್ನ ಗೆಲ್ಲುವ ತವಕದಲ್ಲಿದ್ದಾರೆ. ಇನ್ನೂ ದೀಪಕ್ ಪೂನಿಯಾ ಸಹ 86 ಕೆಜಿ ವಿಭಾಗದಲ್ಲಿ ಫೈನಲ್​ಗೆ ಲಗ್ಗೆ ಹಾಕಿದ್ದು, ಚೊಚ್ಚಲ ಚಿನ್ನದ ಮೇಲೆ ಕಣ್ಣಿಟ್ಟಿದ್ದಾರೆ. ಮತ್ತೊಂದೆಡೆ, 125 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಸೋತಿರುವ ಮೋಹಿತ್ ಇದೀಗ ಕಂಚಿನ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ.

ಇದನ್ನೂ ಓದಿ: Commonwealth Games: ಲಾಂಗ್​ ಜಂಪ್​ನಲ್ಲಿ ಬೆಳ್ಳಿಗೆ ಮುತ್ತಿಕ್ಕಿ ಇತಿಹಾಸ ರಚಿಸಿದ ಶ್ರೀಶಂಕರ್

ಉಳಿದಂತೆ, ಮಹಿಳಾ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ (62 ಕೆಜಿ), ಅಂಶು ಮಲಿಕ್ (57 ಕೆಜಿ) ಫೈನಲ್‌ಗೆ ಲಗ್ಗೆ ಹಾಕಿದ್ದು, ಭಾರತಕ್ಕೆ ಪದಕ ತಂದುಕೊಡುವುದು ಫಿಕ್ಸ್​ ಆಗಿದೆ. ಸೆಮೀಸ್​ನಲ್ಲಿ ಸೋತ ದಿವ್ಯಾ ಕಂಚಿಗಾಗಿ ಕಣಕ್ಕಿಳಿಯಲಿದ್ದಾರೆ. ಬಾಕ್ಸಿಂಗ್ ವಿಭಾಗದಲ್ಲಿ ಭರವಸೆ ಮೂಡಿಸಿದ್ದ ಬಾಕ್ಸರ್ ಲವ್ಲಿನಾ ಕ್ವಾರ್ಟರ್​ ಫೈನಲ್​​ನಲ್ಲಿ ಸೋತು ಹೊರಬಿದ್ದಿದ್ದಾರೆ. ಕಾಮನ್​​ವೆಲ್ತ್ ಗೇಮ್ಸ್​​ನಲ್ಲಿ ಭಾರತ ಇಲ್ಲಿಯವರೆಗೆ ಆರು ಚಿನ್ನ, ಏಳು ಬೆಳ್ಳಿ ಹಾಗೂ ಏಳು ಕಂಚು ಪಡೆದುಕೊಂಡಿದ್ದು, 20 ಪದಕ ಗೆದ್ದಿದೆ.

ಭಾರತ ಪುರುಷರ ತಂಡ 4 x 400 ಮೀಟರ್ಸ್ ರಿಲೇಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಫೈನಲ್ ಪ್ರವೇಶಿಸಿದೆ. ಮೊಹಮ್ಮದ್ ಅನಸ್, ನೋಹ್ ನಿರ್ಮಲ್, ಮೊಹಮ್ಮದ್ ಅಜ್ಮಲ್ ಮತ್ತು ಅಮೋಜ್ ಜಾಕೋಬ್ ಅವರ ಕ್ವಾರ್ಟೆಟ್ ಹೀಟ್ 2 ನಲ್ಲಿ 3:06.97 ಸಮಯದೊಂದಿಗೆ ಎರಡನೇ ಸ್ಥಾನ ಗಳಿಸಿತು.

ಟೇಬಲ್ ಟೆನಿಸ್​ನಲ್ಲಿ ಭಾರತದ ಆಟಗಾರರ ಪ್ರಾಬಲ್ಯ: ಭಾವಿನಾ ಪಟೇಲ್ ಪ್ಯಾರಾ ಟೇಬಲ್ ಟೆನಿಸ್ ಫೈನಲ್ ತಲುಪಿದ್ದಾರೆ. ಇದರೊಂದಿಗೆ ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ.

ಕಳಚಿ ಬಿದ್ದ ಧ್ವನಿವರ್ದಕ: ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಕುಸ್ತಿ ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಚಾವಣಿಗೆ ಜೋಡಿಸಿದ್ದ ಧ್ವನಿವರ್ಧಕವೊಂದು ಕಳಚಿ ಬಿದ್ದಿದೆ. ಇದರಿಂದ ಸಂಘಟಕರು ಮುಜುಗರ ಅನುಭವಿಸಿದ್ದಾರೆ. ಇದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕೆಲಹೊತ್ತು ಕುಸ್ತಿ ಸ್ಪರ್ಧೆ ಸ್ಥಗಿತಗೊಳಿಸಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.