ETV Bharat / sports

CWG 2022: ಇತಿಹಾಸ ಸೃಷ್ಟಿಸಿದ ವಿನೇಶ್​ ಫೋಗಟ್​... ಹ್ಯಾಟ್ರಿಕ್​​​ ಚಿನ್ನಕ್ಕೆ ಮುತ್ತಿಕ್ಕಿದ ಕುಸ್ತಿಪಟು

ಕಾಮನ್​ವೆಲ್ತ್ ಗೇಮ್​​ನಲ್ಲಿ ವಿನೇಶ್​​ ಫೋಗಟ್​​​ ಚಿನ್ನದ ಪದಕಕ್ಕೆ ಮುತ್ತಿಕ್ಕುವ ಮೂಲಕ ಹೊಸದೊಂದು ದಾಖಲೆ ನಿರ್ಮಿಸಿದ್ದು, ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಹ್ಯಾಟ್ರಿಕ್​ ಚಿನ್ನದ ಸಾಧನೆ ಮಾಡಿದ್ದಾರೆ.

Wrestler Vinesh Phogat win Gold
Wrestler Vinesh Phogat win Gold
author img

By

Published : Aug 6, 2022, 10:49 PM IST

Updated : Aug 6, 2022, 10:57 PM IST

ಬರ್ಮಿಂಗ್​ಹ್ಯಾಮ್​: ಕಾಮನ್​ವೆಲ್ತ್ ಗೇಮ್ಸ್​​ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕದ ಬೇಟೆ ಮುಂದುವರೆದಿದ್ದು, ಮಹಿಳಾ ಕುಸ್ತಿಯಲ್ಲಿ ಭಾರತದ ಭರವಸೆಯ ಕ್ರೀಡಾಪಟು ವಿನೇಶ್ ಫೋಗಟ್​​​ ಹೊಸ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಕಾಮನ್​ವೆಲ್ತ್ ಹಾಗೂ ಏಷ್ಯನ್ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕ್ರೀಡಾಪಟುವಾಗಿ ಹೊರಹೊಮ್ಮಿರುವ ಇವರು, ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಸತತ ಮೂರನೇ ಸಲ ಸ್ವರ್ಣ ಪದಕ ಗಳಿಸಿರುವ ಮೊದಲ ಮಹಿಳಾ ಕುಸ್ತಿಪಟು ಆಗಿದ್ದಾರೆ.

ಉಳಿದಂತೆ ಕುಸ್ತಿಯಲ್ಲಿ ಭಾರತದ ಪೂಜಾ ಗೆಹ್ಲೋಟ್​ ಹಾಗೂ ಬಾಕ್ಸಿಂಗ್​ನಲ್ಲಿ ಜೈಸ್ಮಿನ್​ ಲಂಬೋರಿಯಾ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 50 ಕೆಜಿ ಮಹಿಳೆಯರ ಕುಸ್ತಿ ವಿಭಾಗದಲ್ಲಿ ಸೆಮೀಸ್​ನಲ್ಲಿ ಸೋಲು ಕಂಡಿದ್ದ ಪೂಜಾ ಗೆಹ್ಲೋಟ್​ ಕಂಚಿಗೋಸ್ಕರ ಸ್ಕ್ಯಾಟ್​ಲ್ಯಾಂಡ್​ನ ಸ್ಪರ್ಧಾಳು ವಿರುದ್ಧ ಗೆಲುವು ದಾಖಲು ಮಾಡಿ ಪದಕ ಗೆದ್ದಿದ್ದಾರೆ. ಮತ್ತೊಂದೆಡೆ ಬಾಕ್ಸರ್​​ ಜೈಸ್ಮಿನ್​​ 60 ಕೆಜಿ ವಿಭಾಗದ ಬಾಕ್ಸಿಂಗ್​ನಲ್ಲಿ ಕಂಚು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಭಾರತ ಇಲ್ಲಿಯವರೆಗೆ 11 ಚಿನ್ನ, 11 ಬೆಳ್ಳಿ ಹಾಗೂ 11 ಕಂಚಿನೊಂದಿಗೆ 33 ಪದಕ ಗೆದ್ದು, 5ನೇ ಸ್ಥಾನದಲ್ಲಿ ಮುಂದುವರೆದಿದೆ. ಕುಸ್ತಿಯಲ್ಲೇ ಭಾರತ ಇಲ್ಲಿಯವರೆಗೆ ಐದು ಪದಕ ಗೆದ್ದಿದೆ.

ಒಲಿಂಪಿಕ್​ ಬೆಳ್ಳಿ ಪದಕ ವಿಜೇತ ಕುಸ್ತಿ ಪಟು ರವಿ ದಹಿಯಾ ಅವರು ಕಾಮನ್​ವೆಲ್ತ್​ ಗೇಮ್ಸ್​​ನ 57 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಉಳಿದಂತೆ ಬಾಕ್ಸಿಂಗ್ ವಿಭಾಗದಲ್ಲಿ ನಿಕಾಂತ್ ಜರೀನಾ ಫೈನಲ್​ಗೆ ಲಗ್ಗೆ ಹಾಕಿದ್ದು, ಕ್ರಿಕೆಟ್​ನಲ್ಲೂ ಭಾರತೀಯ ಮಹಿಳಾ ತಂಡ ಫೈನಲ್​ಗೆ ಲಗ್ಗೆ ಹಾಕಿದ್ದು, ಸೋಲು ಕಂಡರೂ ಬೆಳ್ಳಿಗೆ ಮುತ್ತಿಕ್ಕಲಿದೆ.

ಇದನ್ನೂ ಓದಿರಿ: ಕಾಮನ್ ವೆಲ್ತ್ ಗೇಮ್ಸ್: ಪದಕ ಗೆದ್ದು ತವರಿಗೆ ಮರಳಿದ ಕ್ರೀಡಾಪಟುಗಳಿಗೆ ಅದ್ಧೂರಿ ಸ್ವಾಗತ

Last Updated : Aug 6, 2022, 10:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.