ETV Bharat / sports

ಕಾಮನ್​ವೆಲ್ತ್​ ಗೇಮ್ಸ್​: 26 ಸೆಕೆಂಡಲ್ಲಿ ಕಂಚು ಗೆದ್ದ ದಿವ್ಯಾ, ಪ್ಯಾರಾ ಪವರ್​ ಲಿಫ್ಟರ್​ ಸುಧೀರ್​ಗೆ ಸ್ವರ್ಣ - ಪದಕ ಪಟ್ಟಿಯಲ್ಲಿ ಏರಿಕೆ

ಬರ್ಮಿಂಗ್​ಹ್ಯಾಮ್​ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾರತ ಪದಕಗಳ ಮೇಲೆ ಪದಕಗಳನ್ನು ಬಾಚಿಕೊಳ್ಳುತ್ತಿದೆ. ನಿನ್ನೆ ಒಂದೇ ದಿನ 9 ಮೆಡಲ್​ ಪಡೆದು ಪಟ್ಟಿಯಲ್ಲಿ ಒಂದು ಸ್ಥಾನ ಜಿಗಿದು 5 ನೇ ಕ್ರಮಾಂಕದಲ್ಲಿದೆ.

commonwealth-games
ಕಾಮನ್​ವೆಲ್ತ್​ ಗೇಮ್ಸ್
author img

By

Published : Aug 6, 2022, 6:59 AM IST

ನವದೆಹಲಿ: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಿನ್ನೆ ಭಾರತಕ್ಕೆ ಲಕ್ಕಿ ಡೇ. 6 ಚಿನ್ನ, 2 ಬೆಳ್ಳಿ, 1 ಕಂಚು ಸೇರಿ 9 ಪದಕಗಳನ್ನು ಕೊಳ್ಳೆ ಹೊಡೆಯಿತು. ಇದರಲ್ಲಿ ಕುಸ್ತಿಪಟುಗಳು 5 ಪದಕ ಬಾಚಿದರು. ಭಜರಂಗ ಪೂನಿಯಾ, ದೀಪಕ್​ ಪೂನಿಯಾ, ಸಾಕ್ಷಿ ಮಲಿಕ್​ ಚಿನ್ನ ಗೆದ್ದರೆ, , ಅನ್ಯು ಮಲಿಕ್ ಬೆಳ್ಳಿ, ದಿವ್ಯಾ ಕಾಕ್ರ್ಯನ್​ ಕಂಚು ಗೆದ್ದರು. ಇನ್ನೊಂದೆಡೆ ಪ್ಯಾರಾ ಪವರ್​ಲಿಫ್ಟಿಂಗ್​ನಲ್ಲಿ ಭಾರತ ಸುಧೀರ್​ ಚಿನ್ನ ಗೆದ್ದರು.

26 ಸೆಕೆಂಡಲ್ಲಿ ದಿವ್ಯಾಗೆ ಕಂಚು: ಮಹಿಳೆಯರ ಫ್ರೀಸ್ಟೈಲ್ 68 ಕೆಜಿ ವಿಭಾಗದ ಕುಸ್ತಿಯಲ್ಲಿ ದಿವ್ಯಾ ಕಾಕ್ರನ್​ ಅವರು ಟಾಂಗಾದ ಟೈಗರ್ ಲಿಲಿ ವಿರುದ್ಧ ನಡೆದ ರೋಚಕ ಸೆಣಸಾಟದಲ್ಲಿ ಕಂಚು ಜಯಿಸಿದರು.

ಕಂಚಿನ ಪದಕಕ್ಕಾಗಿ ನಡೆದ ಗುದ್ದಾಟದಲ್ಲಿ ದಿವ್ಯಾ, ಟೈಗರ್​ ಲಿಲ್ಲಿಯನ್ನು ಕೇವಲ 26 ಸೆಕೆಂಡುಗಳಲ್ಲಿ 2-0 ಅಂತರದಲ್ಲಿ ಮಣ್ಣು ಮುಕ್ಕಿಸುವ ಮೂಲಕ ಪದಕ ಬಾಚಿದರು. ಇದು ನಿನ್ನೆ ಕುಸ್ತಿಯಲ್ಲಿ ಬಂದ 5 ನೇ ಪದಕವಾಗಿದೆ.

ಚಾಣಾಕ್ಷತನದ ಆಟ ಪ್ರದರ್ಶಿಸಿದ ದಿವ್ಯಾ, ಟಾಂಗಾದ ಟೈಗಲ್​ ಲಿಲ್ಲಿ ವಿರುದ್ಧ ಏಕಸ್ವಾಮ್ಯ ಗೆಲುವು ಪಡೆದರು. ಲಿಲ್ಲಿಯನ್ನು 26 ಸೆಕೆಂಡುಗಳಲ್ಲಿ ನೆಲಕ್ಕೆ ಗುದ್ದಿದ್ದು ದಿವ್ಯಾರ ಆಟದ ವೈಖರಿ ತೋರಿಸಿತು.

ಪ್ಯಾರಾ ಪವರ್​ಲಿಫ್ಟರ್​ ಸುಧೀರ್​: ಕ್ರೀಡಾಕೂಟದ ಪ್ಯಾರಾ ಪವರ್​ಲಿಫ್ಟಿಂಗ್​ನಲ್ಲಿ ಹರಿಯಾಣದ ಸುಧೀರ್​ ತಮ್ಮ ತಾಕತ್ತು ತೋರಿಸಿ ಚಿನ್ನ ಗೆದ್ದರು. 27 ವರ್ಷದ ಸುಧೀರ್​ ಹೆವಿವೇಟ್​ ಪ್ಯಾರಾಪರ್​ ಲಿಫ್ಟಿಂಗ್​ನಲ್ಲಿ ಎರಡು ಪ್ರಯತ್ನದಲ್ಲಿ 430 ಕೆಜಿ ಎತ್ತಿದರು. ಈ ಮೂಲಕ 134.5 ಅಂಕ ಗಳಿಸಿ ಕೂಟ ದಾಖಲೆಯೊಂದಿಗೆ ಸ್ವರ್ಣ ಸಾಧನೆ ಮಾಡಿದರು.

ನೈಜೀರಿಯಾದ ಕ್ರಿಸ್ಟಿಯನ್​ 133.6, ಸ್ಕಾಟ್ಲೆಂಡ್​ನ ಮಿಕ್ಕಿ 13.9 ಅಂಕಗಳೊಂದಿಗೆ ಬೆಳ್ಳಿ, ಕಂಚು ಗೆದ್ದರು. ಕೂಟ ದಾಖಲೆ ಮಾಡಿದ ಸುಧೀರ್​ ಅವರು ಮುಂದೆ ನಡೆಯುವ ಏಷ್ಯನ್​ ಪ್ಯಾರಾ ಗೇಮ್ಸ್​ಗೂ ಅರ್ಹತೆ ಪಡೆದರು.

ಪ್ರಧಾನಿ ಮೋದಿ ಶ್ಲಾಘನೆ: ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭರ್ಜರಿ ಸಾಧನೆ ಮಾಡುತ್ತಿರುವ ಭಾರತದ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್​ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

"ಭಾರತೀಯರ ಸಾಧನೆ ಗಮನಾರ್ಹವಾಗಿದೆ. ಕ್ರೀಡಾಪಟುಗಳ ಅತ್ಯುತ್ತಮ ಪ್ರದರ್ಶನ ನಮ್ಮನ್ನು ರೋಮಾಂಚನಗೊಳಿಸಿದೆ. ದೇಶ ಹೆಮ್ಮೆ ಪಡುವಂತಹ ಸಾಧನೆ ನಿಮ್ಮಿಂದ ಹೊರಹೊಮ್ಮಿದೆ. ಪ್ರತಿಷ್ಠಿತ ಕೂಟದಲ್ಲಿ ಪದಕ ಸಾಧನೆ ಮಾಡುತ್ತಿರುವ ಎಲ್ಲ ಆಟಗಾರರ ಶ್ರಮ ಶ್ಲಾಘನೀಯ. ಭವಿಷ್ಯದ ಎಲ್ಲ ಪ್ರಯತ್ನಗಳೂ ಕೈಗೂಡಲಿ" ಎಂದು ಶುಭ ಕೋರಿದ್ದಾರೆ.

ಪದಕ ಪಟ್ಟಿಯಲ್ಲಿ ಏರಿಕೆ: ನಿನ್ನೆ ಒಂದೇ ದಿನ 9 ಸೇರಿದಂತೆ 25 ಪದಕಗಳನ್ನು ಬಾಚಿಕೊಳ್ಳುವ ಮೂಲಕ ಭಾರತ ಪದಕ ಪಟ್ಟಿಯಲ್ಲಿ ಸ್ಕಾಟ್ಲೆಂಡ್​ ಅನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೆ ಏರಿದೆ. 9 ಚಿನ್ನ, 8 ಬೆಳ್ಳಿ, 8 ಕಂಚಿನ ಪದಕಗಳು ಭಾರತ ಪಾಲಾಗಿವೆ. ಇದರಲ್ಲಿ ವೇಟ್​ಲಿಫ್ಟಿಂಗ್​ನಲ್ಲಿ 8, ಕುಸ್ತಿಯಲ್ಲಿ 5 ಪದಕ ಬಂದಿವೆ.

ಓದಿ: ಕಾಮನ್​ವೆಲ್ತ್ ಗೇಮ್ಸ್​​ನಲ್ಲಿ ಬಜರಂಗ, ಸಾಕ್ಷಿಗೆ ಚಿನ್ನ; ಬರ್ತ್‌ಡೇ ದಿನವೇ ಬೆಳ್ಳಿ ಗೆದ್ದ ಅಂಶು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.