ETV Bharat / sports

Commonwealth Games: ಲಾಂಗ್​ ಜಂಪ್​ನಲ್ಲಿ ಬೆಳ್ಳಿಗೆ ಮುತ್ತಿಕ್ಕಿ ಇತಿಹಾಸ ರಚಿಸಿದ ಶ್ರೀಶಂಕರ್ - ಭಾರತ ಲಾಂಗ್​​ ಜಂಪ್​ನಲ್ಲಿ ಇತಿಹಾಸ

Commonwealth Games 7ನೇ ದಿನದ ಹೈಲೈಟ್ಸ್​ ನೋಡುವುದಾದರೆ, ಭಾರತ ಲಾಂಗ್​​ ಜಂಪ್​ನಲ್ಲಿ ಇತಿಹಾಸ ರಚಿಸಿದೆ. ಇನ್ನು ಪ್ಯಾರಾ ಪವರ್‌ಲಿಫ್ಟಿಂಗ್‌ನ ಪುರುಷರ ಹೆವಿವೇಯ್ಟ್ ಫೈನಲ್‌ನಲ್ಲಿ ಭಾರತಕ್ಕೆ ಸುಧೀರ್​ ಚಿನ್ನ ತಂದುಕೊಟ್ಟಿದ್ದಾರೆ.

Murali Sreeshankar won silver in long jump, Commonwealth Games Day 7 Highlights, Commonwealth Games, Sudhir won gold in men para powerlifting, Commonwealth Games 2022 news, ಲಾಂಗ್​ ಜಂಪ್​ನಲ್ಲಿ ಬೆಳ್ಳಿಗೆ ಮುತ್ತಿಕ್ಕಿ ಇತಿಹಾಸ ರಚಿಸಿದ ಶ್ರೀಶಂಕರ್, ಕಾಮನ್​ವೆಲ್ತ್ ಗೇಮ್ಸ್​, ಪ್ಯಾರಾ ಪವರ್‌ಲಿಫ್ಟಿಂಗ್‌ನ ಪುರುಷರ ಹೆವಿವೇಯ್ಟ್ ಫೈನಲ್‌, ಭಾರತ ಲಾಂಗ್​​ ಜಂಪ್​ನಲ್ಲಿ ಇತಿಹಾಸ, ಭಾರತಕ್ಕೆ ಸುಧೀರ್​ ಚಿನ್ನ,
ಕೃಪೆ: Twitter
author img

By

Published : Aug 5, 2022, 7:10 AM IST

ಬರ್ಮಿಂಗ್ಹ್ಯಾಮ್: ಭಾರತದ ಸುಧೀರ್ ಪ್ಯಾರಾ ಪವರ್‌ಲಿಫ್ಟಿಂಗ್‌ನ ಪುರುಷರ ಹೆವಿವೇಯ್ಟ್ ಫೈನಲ್‌ನಲ್ಲಿ ದೇಶಕ್ಕೆ ಚಿನ್ನವನ್ನು ತಂದುಕೊಟ್ಟಿದ್ದಾರೆ. ಇದಕ್ಕೂ ಮುನ್ನ ಮುರಳಿ ಶ್ರೀಶಂಕರ್ Commonwealth Games ಪುರುಷರ ಲಾಂಗ್ ಜಂಪ್‌ನಲ್ಲಿ 8.08ಮೀ ಜಿಗಿತದ ಮೂಲಕ ಭಾರತಕ್ಕೆ ಐತಿಹಾಸಿಕ ಬೆಳ್ಳಿ ಗೆದ್ದುಕೊಟ್ಟರು. ಕಾಮನ್ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತೀಯ ಪುರುಷ ಆಟಗಾರನೊಬ್ಬ ಲಾಂಗ್ ಜಂಪ್​ನಲ್ಲಿ ಮೊದಲ ಬೆಳ್ಳಿ ಗೆದ್ದ ಎಂಬ ಹೆಗ್ಗಳಿಕೆಗೆ ಶ್ರೀಶಂಕರ್ ಪಾತ್ರರಾಗಿದ್ದಾರೆ.

ಕಾಮನ್​ವೆಲ್ತ್ ಗೇಮ್ಸ್ ಪುರುಷರ ವೆಲ್ಟರ್ ವೇಟ್ ವಿಭಾಗದಲ್ಲಿ ಬಾಕ್ಸರ್ ರೋಹಿತ್ ಟೋಕಾಸ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಹಾಲಿ ಚಾಂಪಿಯನ್ ಮಣಿಕಾ ಬಾತ್ರಾ 4-0 ಅಂತರದ ಮೇಲುಗೈ ಸಾಧಿಸುವ ಮೂಲಕ ಮಹಿಳೆಯರ ಸಿಂಗಲ್ಸ್​ 16ರ ಸುತ್ತಿಗೆ ಪ್ರವೇಶಿಸಿದ್ದಾರೆ. ಪ್ಯಾಡ್ಲರ್‌ಗಳಾದ ಶ್ರೀಜಾ ಅಕುಲಾ ಮತ್ತು ರೀತ್ ಟೆನ್ನಿಸನ್ ಅವರು ತಮ್ಮ ಪಂದ್ಯಗಳಲ್ಲಿ ಜಯಗಳಿಸುವುದರೊಂದಿಗೆ 16ರ ಮಹಿಳಾ ಸಿಂಗಲ್ಸ್ ಸುತ್ತಿಗೆ ಪ್ರವೇಶಿಸಿದರು.

ಟೆಬಲ್​ ಟೆನಿಸ್ ಪುರಷರ​ ಡಬಲ್ಸ್​ ವಿಭಾಗದಲ್ಲಿ ಅಲ್ಲೆನ್ ಜೋಯಲ್ ಮತ್ತು ವ್ಯಾನ್ ಲ್ಯಾಂಗ್ ಜೋನಾಥನ್ ವಿರುದ್ಧ ಭಾರತ ತಂಡದ ಆಟಗಾರರಾದ ಶರತ್​ ಮತ್ತು ಸಾಥಿಯಾನ್​ ಭರ್ಜರಿ ಗೆಲುವು ಸಾಧಿಸುವ ಮೂಲಕ 16ರ ಸುತ್ತಿಗೆ ಪ್ರವೇಶಿಸಿದರು.

ಬ್ಯಾಡ್ಮಿಂಟನ್‌ನಲ್ಲಿ ಆಕರ್ಷಿ ಕಶ್ಯಪ್ 16ರ ಮಹಿಳಾ ಸಿಂಗಲ್ಸ್ ಸುತ್ತಿಗೆ ಮುನ್ನಡೆದ್ರೆ, ವೆರ್ನಾನ್ ಸ್ಮೀಡ್ ವಿರುದ್ಧ ಗೆಲುವು ಸಾಧಿಸಿರುವ ಲಕ್ಷ್ಯ ಸೇನ್ ಸಹ 16ರ ಪುರುಷರ ಸಿಂಗಲ್ಸ್​ ಸುತ್ತಿಗೆ ಪ್ರವೇಶ ಪಡೆದರು. ಭಾರತೀಯ ಪುರುಷರ ಹಾಕಿ ತಂಡವು ಸಹ ಉತ್ತಮ ಪ್ರದರ್ಶನ ನೀಡುತ್ತಿದ್ದು, ಹರ್ಮನ್‌ಪ್ರೀತ್ ಸಿಂಗ್ ಅವರ ಹ್ಯಾಟ್ರಿಕ್‌ ಗೋಲ್​ನೊಂದಿಗೆ ಪೂಲ್ ಬಿ ಪಂದ್ಯದಲ್ಲಿ ವೇಲ್ಸ್ ವಿರುದ್ಧ 4-1 ಗೆಲುವು ದಾಖಲಿಸಲು ಸಹಾಯ ಮಾಡಿದರು.

ಈ ಗೆಲುವಿನೊಂದಿಗೆ ಭಾರತ ಹಾಕಿ ತಂಡ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಇದಕ್ಕೂ ಮೊದಲು, ಬಾಕ್ಸರ್‌ಗಳಾದ ಅಮಿತ್ ಪಂಗಲ್, ಜೈಸ್ಮಿನ್ ಲಂಬೋರಿಯಾ ಮತ್ತು ಸಾಗರ್ ಅಹ್ಲಾವತ್ ಪುರುಷರ ಫ್ಲೈವೇಟ್, ಮಹಿಳೆಯರ ಲೈಟ್‌ವೇಟ್ ಮತ್ತು ಪುರುಷರ ಸೂಪರ್ ಹೆವಿವೇಟ್ ಕ್ವಾರ್ಟರ್-ಫೈನಲ್‌ಗಳಲ್ಲಿ ಗೆಲುವುಗಳೊಂದಿಗೆ ಕನಿಷ್ಠ ಮೂರು ಕಂಚಿನ ಪದಕಗಳನ್ನು ಭಾರತಕ್ಕೆ ಖಚಿತಪಡಿಸಿದ್ದಾರೆ.

ಅಥ್ಲೆಟಿಕ್ಸ್‌ನಲ್ಲಿ ಹಿಮಾದಾಸ್ ಮಹಿಳೆಯರ 200 ಮೀ ಓಟದ ಸೆಮಿಫೈನಲ್‌ಗೆ ಪ್ರವೇಶಿಸಿದರೆ, ಮಂಜು ಬಾಲಾ ಮಹಿಳೆಯರ ಹ್ಯಾಮರ್ ಥ್ರೋ ಸ್ಪರ್ಧೆಯ ಫೈನಲ್‌ಗೆ ಪ್ರವೇಶಿಸಿದರು. ಶಟ್ಲರ್‌ಗಳಾದ ಪಿವಿ ಸಿಂಧು ಮತ್ತು ಕಿಡಂಬಿ ಶ್ರೀಕಾಂತ್ ತಮ್ಮ ಬ್ಯಾಡ್ಮಿಂಟನ್ ಸಿಂಗಲ್ಸ್ ರೌಂಡ್ ಆಫ್ 32 ಪಂದ್ಯಗಳನ್ನು ಗೆದ್ದಿದ್ದಾರೆ. ಸ್ಕ್ವಾಷ್ ಮಹಿಳಾ ಡಬಲ್ಸ್​ ವಿಭಾಗದಲ್ಲಿ ಮೀಗನ್ ಬೆಸ್ಟ್ ಮತ್ತು ಅಮಂಡಾ ಹೇವುಡ್ ಜೋಡಿ ವಿರುದ್ಧ ದಿಪೀಕಾ ಮತ್ತು ಜೋಶ್ನಾ ಜಯ ಗಳಿಸುವ ಮೂಲಕ ಭಾರತದ ಜೋಡಿ ಕ್ವಾರ್ಟರ್ ಫೈನಲ್​ಗೆ ಲಗ್ಗೆಯಿಟ್ಟಿದೆ.

ಪದಕ ಪಟ್ಟಿ: ಇದುವರೆಗೂ ಭಾರತ 19 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ 7 ನೇ ಸ್ಥಾನ ಅಲಂಕರಿಸಿದೆ. ಆಸ್ಟ್ರೇಲಿಯಾ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.

ಓದಿ: ಇಂಗ್ಲೆಂಡ್​ U-19 ತಂಡದಲ್ಲಿ ಭಾರತೀಯ ಪ್ರತಿಭೆ: ಈತ ಟೀಂ ಇಂಡಿಯಾ ಮಾಜಿ ವೇಗಿಯ ಪುತ್ರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.