Commonwealth Championship 2021 : ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಬರೆದ ಭಾರತದ ಲಿಫ್ಟರ್ ಪೂರ್ಣಿಮಾ ಪಾಂಡೆ ಗುರುವಾರ ನಡೆದ ಮಹಿಳೆಯರ +87 ಕೆಜಿ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಮುಂದಿನ ವರ್ಷ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ಗೆ ನೇರವಾಗಿ ಅರ್ಹತೆ ಪಡೆದಿದ್ದಾರೆ.
ಪೂರ್ಣಿಮಾ 229 ಕೆಜಿ (102 ಕೆಜಿ+127 ಕೆಜಿ) ತೂಕವನ್ನು ಎತ್ತಿದ್ದಾರೆ. ಸ್ನ್ಯಾಚ್‌ನಲ್ಲಿ ಎರಡು, ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ ಮೂರು-ಮೂರು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಈ ಕ್ರಮದಲ್ಲಿ ಅವರು ಒಟ್ಟು ಎಂಟು ರಾಷ್ಟ್ರೀಯ ದಾಖಲೆಗಳನ್ನು ನಿರ್ಮಿಸಿದ್ದಾರೆ.
ಓದಿ: ಡ್ರಗ್ಸ್ ಕೇಸ್ : ವಿಚಾರಣೆಗೆ ಹಾಜರಾಗುವಂತೆ ಪ್ರೆಸ್ಟೀಜ್ ಕಂಪನಿ ಸಿಇಒಗೆ ನೋಟಿಸ್
87 ಕೆಜಿ ವಿಭಾಗದಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡ ಅನುರಾಧ ಒಟ್ಟು 195 ಕೆಜಿ (90 ಕೆಜಿ + 105 ಕೆಜಿ) ತೂಕವನ್ನು ಎತ್ತಿದರು. ಪುರುಷರ 109 ಕೆಜಿ ಸ್ಪರ್ಧೆಯಲ್ಲಿ ಲವ್ಪ್ರೀತ್ ಸಿಂಗ್ 348 ಕೆಜಿ (161 ಕೆಜಿ +187 ಕೆಜಿ) ತೂಕ ಎತ್ತುವ ಮೂಲಕ ಬೆಳ್ಳಿ ಗೆದ್ದರು.
ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ವಿವಿಧ ವಿಭಾಗಗಳಲ್ಲಿ ಚಿನ್ನ ಗೆದ್ದವರು 2022ರ ಕಾಮನ್‌ವೆಲ್ತ್ ಗೇಮ್ಸ್‌ಗೆ ನೇರವಾಗಿ ಅರ್ಹತೆ ಪಡೆಯುತ್ತಾರೆ. ಉಳಿದವರು ಅವರ ಶ್ರೇಯಾಂಕಗಳ ಆಧಾರದ ಮೇಲೆ ಅರ್ಹತೆ ಮೇಲೆ ಸ್ಥಾನವನ್ನು ಗಿಟ್ಟಿಸಿಕೊಳ್ಳುತ್ತಾರೆ.