ಟೋಕಿಯೋ: ಅಮೆರಿಕದ ಉದಯೋನ್ಮುಖ ಆಟಗಾರ್ತಿ ಕೊಕೊ ಗಫ್ ಕೋವಿಡ್ 19 ಪಾಸಿಟಿವ್ ದೃಢಪಟ್ಟಿರುವುದರಿಂದ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ನಿಂದ ಹೊರಬಿದ್ದಿದ್ದಾರೆ.
ಈ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ತುಂಬಾ ಬೇಸರವಾಗುತ್ತಿದೆ. ನನಗೆ ಕೋವಿಡ್ 19 ಪಾಸಿಟಿವ್ ದೃಢಪಟ್ಟಿದ್ದು, ಟೋಕಿಯೋ ಒಲಿಂಪಿಕ್ಸ್ ಗೇಮ್ಸ್ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಗಫ್ ಟ್ವಿಟರ್ನಲ್ಲಿ ಭಾನುವಾರ ಶೇರ್ ಮಾಡಿಕೊಂಡಿದ್ದಾರೆ.
-
🙏🏾❤️🤍💙 pic.twitter.com/lT0LoEV3eO
— Coco Gauff (@CocoGauff) July 18, 2021 " class="align-text-top noRightClick twitterSection" data="
">🙏🏾❤️🤍💙 pic.twitter.com/lT0LoEV3eO
— Coco Gauff (@CocoGauff) July 18, 2021🙏🏾❤️🤍💙 pic.twitter.com/lT0LoEV3eO
— Coco Gauff (@CocoGauff) July 18, 2021
ಅಮೆರಿಕವನ್ನು ಒಲಿಂಪಿಕ್ಸ್ನಲ್ಲಿ ಪ್ರತಿನಿಧಿಸಬೇಕೆಂಬುದು ನನ್ನ ಕನಸಾಗಿತ್ತು. ಭವಿಷ್ಯದಲ್ಲಿ ನನ್ನ ಕನಸನ್ನು ಈಡೇರಿಸಿಕೊಳ್ಳಲು ಹಲವು ಅವಕಾಶಗಳು ಸಿಗಲಿವೆ ಎಂಬ ಭರವಸೆಯಿದೆ ಎಂದು ಬರೆದುಕೊಂಡಿದ್ದಾರೆ.
17 ವರ್ಷದ ಆಟಗಾರ್ತಿ ಇತ್ತೀಚೆಗೆ ಮುಗಿದ ವಿಂಬಲ್ಡನ್ನ ನಾಲ್ಕನೇ ಸುತ್ತಿನಲ್ಲಿ 6-4, 6-4 ರ ಅಂತರದಲ್ಲಿ ಏಂಜಲಿಕ್ ಕೆರ್ಬರ್ ವಿರುದ್ಧ ಸೋತು ಹೊರಬಿದ್ದಿದ್ದರು. ಗಫ್ ಪ್ರಸ್ತುತ WTA ಶ್ರೇಯಾಂಕದಲ್ಲಿ 25ನೇ ಸ್ಥಾನದಲ್ಲಿದ್ದಾರೆ.
ಜುಲೈ 23ರಿಂದ ಒಲಿಂಪಿಕ್ಸ್ 2020 ಆರಂಭವಾಗಲಿದ್ದು, ಆಗಸ್ಟ್ 8ರಂದು ಮುಕ್ತಾಯವಾಗಲಿದೆ.
ಇದನ್ನು ಓದಿ:Tokyo Olympics: ಒಲಿಂಪಿಕ್ಸ್ ಗ್ರಾಮದಲ್ಲಿ ಮೂವರು ಅಥ್ಲೀಟ್ಗಳಿಗೆ ಕೋವಿಡ್ ಸೋಂಕು