ನವದೆಹಲಿ: ಫಿನ್‌ಲ್ಯಾಂಡ್‌ನಲ್ಲಿ ನಡೆದ ಕುರ್ಟೇನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ತಮಗಾದ ಗಾಯಗಳನ್ನ ವಾಸಿಮಾಡಿಕೊಂಡಿದ್ದು, ಬೌಹೌಸ್ಗಲಾನ್ನಲ್ಲಿ ನಡೆಯಲಿರುವ ಸ್ಟಾಕ್‌ಹೋಮ್ ಡೈಮಂಡ್ ಲೀಗ್ನಲ್ಲಿ ಆಟವಾಡಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.
ಫಿನ್‌ಲ್ಯಾಂಡ್‌ನಲ್ಲಿ ಈ ವಾರದ ಆರಂಭದಲ್ಲಿ ನಡೆದ ಪಾವೊ ನೂರ್ಮಿ ಗೇಮ್ಸ್‌ನಲ್ಲಿ ನೀರಜ್ ಚೋಪ್ರಾ 89.30 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದರು. ಇದು ಅವರ ತಮ್ಮದೇ ಆದ ರಾಷ್ಟ್ರೀಯ ದಾಖಲೆಯನ್ನೇ ಮುರಿದಿದ್ದರು. ಟೋಕಿಯೋ ಒಲಿಂಪಿಕ್ಸ್‌ನ ನಂತರ ಇದು ನೀರಜ್ ಚೋಪ್ರಾರ ಎರಡನೇ ಸ್ಪರ್ಧೆಯಾಗಿದೆ.
-
Tough conditions with the weather, but happy to get my first win of the season here at Kuortane. I'm feeling good and looking forward to kicking off my Diamond League season at @BAUHAUSGALAN on the 30th.
— Neeraj Chopra (@Neeraj_chopra1) June 19, 2022 " class="align-text-top noRightClick twitterSection" data="
Thank you for all the messages and support. 🙏🏽🇮🇳 pic.twitter.com/C1ulI0mktN
">Tough conditions with the weather, but happy to get my first win of the season here at Kuortane. I'm feeling good and looking forward to kicking off my Diamond League season at @BAUHAUSGALAN on the 30th.
— Neeraj Chopra (@Neeraj_chopra1) June 19, 2022
Thank you for all the messages and support. 🙏🏽🇮🇳 pic.twitter.com/C1ulI0mktNTough conditions with the weather, but happy to get my first win of the season here at Kuortane. I'm feeling good and looking forward to kicking off my Diamond League season at @BAUHAUSGALAN on the 30th.
— Neeraj Chopra (@Neeraj_chopra1) June 19, 2022
Thank you for all the messages and support. 🙏🏽🇮🇳 pic.twitter.com/C1ulI0mktN
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚೋಪ್ರಾ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದ ಮೊದಲ ಭಾರತೀಯರಾದರು. ಇನ್ನು ಕೆಶೋರ್ನ್ ವಾಲ್ಕಾಟ್ 86.64 ಮೀ. ಎಸೆದು ಎರಡನೇ ಸ್ಥಾನ ಪಡೆದರೆ, ಆಂಡರ್ಸನ್ ಪೀಟರ್ಸ್ 84.75ರ ಅತ್ಯುತ್ತಮ ಪ್ರಯತ್ನದೊಂದಿಗೆ ಮೂರನೇ ಸ್ಥಾನ ಪಡೆದರು.
-
After an intentional foul on his second, he slips on his third.. Testing conditions out there…#NeerajChopra pic.twitter.com/71qRFcEEyJ
— Naveen Peter (@peterspeaking) June 18, 2022 " class="align-text-top noRightClick twitterSection" data="
">After an intentional foul on his second, he slips on his third.. Testing conditions out there…#NeerajChopra pic.twitter.com/71qRFcEEyJ
— Naveen Peter (@peterspeaking) June 18, 2022After an intentional foul on his second, he slips on his third.. Testing conditions out there…#NeerajChopra pic.twitter.com/71qRFcEEyJ
— Naveen Peter (@peterspeaking) June 18, 2022
ಮಳೆಗಾಲದ ಪರಿಸ್ಥಿತಿಯಲ್ಲಿಯೂ ನೀರಜ್ ಚೋಪ್ರಾ ಉತ್ತಮವಾಗಿ ಆಟ ಪ್ರಾರಂಭಿಸಿದರು, ಆದರೆ, ಅವರ ಎರಡನೇ ಎಸೆತದಲ್ಲಿ ಉದ್ದೇಶಪೂರ್ವಕ ಫೌಲ್ ಮಾಡಿದರು. ನಂತರ ಮೂರನೇ ಎಸೆತದಲ್ಲಿ ಸಮತೋಲನ ಕಳೆದುಕೊಂಡು ಸ್ಲಿಪ್ ಆಗಿ ಕೆಳಗೆ ಬಿದ್ದರು. ಈ ವೇಳೆ ಅವರ ಎಡ ಭುಜವು ಟರ್ಫ್‌ಗೆ ಬಡಿದಿದ್ದು, ಗಾಯವಾಗಿತ್ತು. ಇದೀಗ ನೋವಿನಿಂದ ಸುಧಾರಿಸಿಕೊಂಡಿರುವುದಾಗಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಚಿನ್ನದ ಹುಡುಗ, ಹವಾಮಾನದ ಕಠಿಣ ಪರಿಸ್ಥಿತಿಯಲ್ಲೂ ಕುರ್ಟೇನ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವು ಸಾಧಿಸಿರುವುದಕ್ಕೆ ಸಂತೋಷವಾಗಿದೆ. ಜೂನ್ 30 ರಂದು ಬೌಹೌಸ್ಗಲಾನ್ನಲ್ಲಿ ನಡೆಲಿರುವ (Stockholm Diamond League) ನಲ್ಲಿ ನನ್ನ ಡೈಮಂಡ್ ಲೀಗ್ ಋತುವನ್ನು ಪ್ರಾರಂಭಿಸಲು ಎದುರು ನೋಡುತ್ತಿದ್ದೇನೆ . ಇಲ್ಲಿ ಸಹ ಪದಕ ಗೆಲ್ಲುವ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆಯ ಆಟ.. ಸರಣಿ ಸಮ.. ಪ್ರಶಸ್ತಿ ಹಂಚಿಕೊಂಡ ಭಾರತ-ದಕ್ಷಿಣ ಆಫ್ರಿಕಾ!