ETV Bharat / sports

ಚೆಸ್‌ ವಿಶ್ವಕಪ್‌ ಫೈನಲ್‌: ಪ್ರಜ್ಞಾನಂದ vs ಕಾರ್ಲ್‌ಸನ್ ಮೊದಲ ಪಂದ್ಯ ಡ್ರಾ, ನಾಳೆ 2ನೇ ಫೈಟ್​ - ನಾಳೆ 2ನೇ ಫೈಟ್​

Chess World Cup 2023 Final: ಅಜರ್‌ಬೈಜಾನ್​ ದೇಶದ ಬಾಕುವಿನಲ್ಲಿ ನಡೆಯುತ್ತಿರುವ ಫಿಡೆ ಚೆಸ್ ವಿಶ್ವಕಪ್‌ನಲ್ಲಿ ಆರ್.ಪ್ರಜ್ಞಾನಂದ ಮತ್ತು ಮ್ಯಾಗ್ನಸ್ ಕಾರ್ಲ್‌ಸನ್ ನಡುವಣ ಫೈನಲ್‌ನ ಮೊದಲ ಪಂದ್ಯ ಡ್ರಾ ಆಗಿದೆ.

Chess World Cup 2023 Final
Chess World Cup 2023 Final
author img

By ETV Bharat Karnataka Team

Published : Aug 22, 2023, 7:53 PM IST

Updated : Aug 22, 2023, 9:06 PM IST

ಬಾಕು (ಅಜರ್‌ಬೈಜಾನ್‌): ಇಲ್ಲಿ ಇಂದಿನಿಂದ ನಡೆಯುತ್ತಿರುವ ಫಿಡೆ ಚೆಸ್ ವಿಶ್ವಕಪ್ 2023ರ ಫೈನಲ್​ನ ಮೊದಲ ಪಂದ್ಯವನ್ನು ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಜ್ಞಾನಂದ ಡ್ರಾ ಮಾಡಿಕೊಂಡಿದ್ದಾರೆ. ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ 35 ನಡೆಗಳ ನಂತರ ಪಂದ್ಯ ಡ್ರಾ ಕಂಡಿದೆ. ನಾಳೆ ಎರಡನೇ ಕ್ಲಾಸಿಕಲ್ ಪಂದ್ಯ ನಡೆಯಲಿದೆ. ಇದರ ಫಲಿತಾಂಶದ ಮೂಲಕ ಪಂದ್ಯ ಟೈಬ್ರೇಕರ್​ನತ್ತ ಹೋಗಲಿದೆಯೇ ಎಂಬುದು ನಿರ್ಧಾರವಾಗಲಿದೆ.

ಸೋಮವಾರ ನಡೆದ ಸೆಮಿಫೈನಲ್‌ನ ಟೈಬ್ರೇಕರ್​ನಲ್ಲಿ ವಿಶ್ವದ ನಂಬರ್ 3ನೇ ಆಟಗಾರ ಫ್ಯಾಬಿಯಾನೊ ಕರುವಾನಾ ಅವರನ್ನು ಮಣಿಸಿ ಪ್ರಜ್ಞಾನಂದ ಫೈನಲ್​ ಪ್ರವೇಶಿಸಿದ್ದರು. ಈ ಮೂಲಕ ಕ್ಯಾಂಡಿಡೇಟ್ಸ್​ ಟೂರ್ನಿಗೆ ಅರ್ಹತೆ ಪಡೆದುಕೊಂಡಿದ್ದರು. ಬಾಬಿ ಫಿಶರ್ ಮತ್ತು ಕಾರ್ಲ್‌ಸನ್ ನಂತರ ಕ್ಯಾಂಡಿಡೇಟ್ಸ್ ಟೂರ್ನಮೆಂಟ್‌ಗೆ ಅರ್ಹತೆ ಪಡೆದ 3ನೇ ಕಿರಿಯ ಆಟಗಾರ ಎಂಬ ಖ್ಯಾತಿಯನ್ನು ಆರ್.ಪ್ರಜ್ಞಾನಂದ ಗಳಿಸಿದ್ದಾರೆ.

  • The first game of the #FIDEWorldCup final between Praggnanandhaa and Magnus Carlsen ends in a draw after 35 moves.
    Magnus will be White in tomorrow's second classical game.

    📷 Stev Bonhage pic.twitter.com/UXpcbQxIfN

    — International Chess Federation (@FIDE_chess) August 22, 2023 " class="align-text-top noRightClick twitterSection" data=" ">

ಪಂದ್ಯದ ಸ್ವರೂಪ: ಮೊದಲು ಎರಡು ಪಂದ್ಯಗಳು ನಡೆಯುತ್ತವೆ. ಇಂದಿನದು ಮೊದಲ ಪಂದ್ಯ. ಪ್ರತಿಯೊಂದು ಪಂದ್ಯವು ಆರಂಭಿಕ 40 ಚಲನೆಗಳಿಗೆ 90 ನಿಮಿಷಗಳ ಸಮಯದ ನಿಯಂತ್ರಣ ಹೊಂದಿರುತ್ತದೆ. ಮುಂದಿನ 40 ಚಲನೆಗಳಿಗೆ 30 ನಿಮಿಷಗಳನ್ನು ಸೇರಿಸಲಾಗುತ್ತದೆ. ಈ ಸಮಯದ ಲೆಕ್ಕಾಚಾರ ಮೊದಲ ಚಲನೆಯಿಂದ ಆರಂಭವಾಗುತ್ತದೆ.

ಟೈ ಸಂಭವಿಸಿದರೆ, ಸುತ್ತಿನ ಮೂರನೇ ದಿನದಂದು ಪ್ಲೇಆಫ್ ಸಂಭವಿಸುತ್ತದೆ. ಟೈಬ್ರೇಕ್ ಪ್ರಕ್ರಿಯೆಯು ಎರಡು ಕ್ಷಿಪ್ರ ಆಟಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ 25 ನಿಮಿಷಗಳ ಸಮಯದ ನಿಯಂತ್ರಣ ಮತ್ತು ಹೆಚ್ಚು ಅಗತ್ಯಬಿದ್ದಲ್ಲಿ 10 ನಿಮಿಷಗಳ ಸಮಯ ನಿಯಂತ್ರಣದೊಂದಿಗೆ ಎರಡು ಆಟಗಳನ್ನು ಆಡಿಸಲಾಗುತ್ತದೆ.

ಇದನ್ನೂ ಓದಿ: ಚೆಸ್‌ ವಿಶ್ವಕಪ್ ಫೈನಲ್: ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ vs ಭಾರತದ ಪ್ರಜ್ಞಾನಂದ- ಗೆಲುವು ಯಾರಿಗೆ?

ಇತಿಹಾಸ ನಿರ್ಮಿಸಿದ್ದ ಆರ್.ಪ್ರಗ್ನಾನಂದನ್: ವಿಶ್ವದ 3ನೇ ಶ್ರೇಯಾಂಕದ ಆಟಗಾರ ಫ್ಯಾಬಿಯಾನೊ ಕರುವಾನಾ ಅವರನ್ನು ಸೋಮವಾರವಷ್ಟೇ ಭಾರತದ 18 ವರ್ಷದ ಗ್ರ್ಯಾಂಡ್ ಮಾಸ್ಟರ್ ಆರ್.ಪ್ರಗ್ನಾನಂದನ್ ಅವರು ಫಿಡೆ ಚೆಸ್ ವಿಶ್ವಕಪ್ 2023ರಲ್ಲಿ ಸೋಲಿಸಿ, ಇತಿಹಾಸ ಬರೆದಿದ್ದರು. ಈ ಮೂಲಕ ಚೆಸ್​ ವಿಶ್ವಕಪ್​ ಫೈನಲ್​ಗೆ ಅರ್ಹತೆ ಪಡೆದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈ ಮೊದಲು ವಿಶ್ವನಾಥನ್ ಆನಂದ್ ಅವರು ಈ ಸಾಧನೆ ಮಾಡಿದ್ದರು.

ಚೆನ್ನೈ ಮೂಲದ ಆರ್.ಪ್ರಗ್ನಾನಂದನ್ 2024ರ ಕ್ಯಾಂಡಿಡೇಟ್ಸ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಈ ಟೂರ್ನಿಯಲ್ಲಿ ಅಗ್ರ ಮೂರು ಸ್ಥಾನಗಳನ್ನು ಪಡೆಯುವ ಆಟಗಾರರು 2024ರ ಡಿಂಗ್ ಲಿರೆನ್‌ ಈವೆಂಟ್‌ಗೆ ಅರ್ಹತೆ ಪಡೆಯಲಿದ್ದಾರೆ. ಕಳೆದ ವರ್ಷ ನಾರ್ವೆ ಚೆಸ್ ಗ್ರೂಪ್ ಎ ಓಪನ್ ಚೆಸ್ ಪಂದ್ಯಾವಳಿಯಲ್ಲಿ ಆರ್.ಪ್ರಗ್ನಾನಂದನ್ ಚಾಂಪಿಯನ್ ಆಗಿ ಸಾಧನೆಗೈದಿದ್ದರು.

Last Updated : Aug 22, 2023, 9:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.