ETV Bharat / sports

ಆಸ್ಟ್ರೇಲಿಯಾ ಓಪನ್​ನಿಂದ ಕಾರ್ಲಸ್​ ಅಲ್ಕಾರಜ್​, ಮರಿನ್​ ಸಿಲಿಕ್​ ಔಟ್​: ಜಾಕೊವಿಚ್​ಗೆ ಸ್ನಾಯುಸೆಳೆತ

ಮುಂದಿನ ವಾರದಿಂದ ಆರಂಭವಾಗುವ ವರ್ಷದ ಮೊದಲ ಗ್ರ್ಯಾನ್​ ಸ್ಲಾಂ ಆಸ್ಟ್ರೇಲಿಯನ್​ ಓಪನ್​ಗೆ ಆರಂಭದಲ್ಲೇ ವಿಘ್ನ ಶುರುವಾಗಿದೆ. ಪ್ರಮುಖ ಆಟಗಾರರು ಗಾಯಕ್ಕೀಡಾಗಿದ್ದು, ಟೂರ್ನಿ ರೋಚಕತೆ ಕಳೆದುಕೊಳ್ಳುವ ಸಾಧ್ಯತೆ ಇದೆ.

australian-open
ಆಸ್ಟ್ರೇಲಿಯಾ ಓಪನ್​
author img

By

Published : Jan 12, 2023, 2:11 PM IST

ಮೆಲ್ಬೋರ್ನ್(ಆಸ್ಟ್ರೇಲಿಯಾ): ವರ್ಷದ ಮೊದಲ ಗ್ರ್ಯಾನ್​ ಸ್ಲಾಂ ಆಸ್ಟ್ರೇಲಿಯಾ ಓಪನ್​ಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಆಟಗಾರರ ಗಾಯದ ಸಮಸ್ಯೆ ಹೆಚ್ಚಾಗಿದೆ. ವಿಶ್ವದ ಮಾಜಿ ನಂ.1 ಟೆನಿಸ್ಸಿಗ ಸರ್ಬಿಯಾದ ನೊವಾಕ್​ ಜಾಕೊವಿಚ್​ ಸ್ನಾಯು ಸೆಳೆತಕ್ಕೆ ತುತ್ತಾದ ಬೆನ್ನಲ್ಲೇ, ಮೊಣಕಾಲಿನ ಗಾಯದಿಂದಾಗಿ ಮಾಜಿ ಫೈನಲಿಸ್ಟ್​ ಕ್ರೊವೇಷಿಯಾದ ಮರಿನ್​ ಸಿಲಿಕ್​ ಟೂರ್ನಿಯಿಂದಲೇ ಹಿಂದೆ ಸರಿದಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿ ಮಾಹಿತಿ ನೀಡಿರುವ ಮರಿನ್​ ಸಿಲಿಕ್​, ನನ್ನ ವೃತ್ತಿ ಜೀವನದ ವರ್ಷಾರಂಭ ಉತ್ತಮವಾಗಿಲ್ಲ. ಮೊಣಕಾಲಿನ ಗಾಯಕ್ಕೀಡಾಗಿದ್ದು, ಆಸ್ಟ್ರೇಲಿಯನ್​ ಓಪನ್​ನಿಂದ ಹಿಂದೆ ಸರಿಯುತ್ತಿದ್ದೇನೆ. ಈ ವರ್ಷ ಆಡಲು ಸಾಧ್ಯವಾಗದ ಕಾರಣ ಮುಂದಿನ ವರ್ಷ ಮತ್ತೆ ಮೆಲ್ಬೋರ್ನ್​ಗೆ ಬರುವೆ. ಆರೋಗ್ಯಕ್ಕೆ ಆದ್ಯತೆ ನೀಡಬೇಕಿದೆ ಎಂದು ತಿಳಿಸಿದ್ದಾರೆ. 34 ವರ್ಷದ ಕ್ರೊಯೇಷಿಯಾದ ಆಟಗಾರ 2018 ರ ಫೈನಲ್‌ನಲ್ಲಿ ವಿಶ್ವಶ್ರೇಷ್ಠ ಮಾಜಿ ಟೆನಿಸ್ಸಿಗ ರೋಜರ್ ಫೆಡರರ್ ವಿರುದ್ಧ ಸೋಲನುಭವಿಸಿ ರನ್ನರ್ ಅಪ್ ಆಗಿದ್ದರು.

ಭಾರತದ ಪುಣೆಯಲ್ಲಿ ಈಚೆಗೆ ನಡೆದ ಮಹಾರಾಷ್ಟ್ರ ಓಪನ್‌ನಲ್ಲಿ ಟೆನಿಸ್​ ವರ್ಷ ಆರಂಭಿಸಿದ್ದ ಸಿಲಿಕ್​ ಟ್ಯಾಲನ್ ಗ್ರೀಕ್ಸ್‌ಪೂರ್ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ ಮೊಣಕಾಲಿನ ಗಾಯಕ್ಕೀಡಾಗಿದ್ದರು. ಬಳಿಕ ಎಟಿಪಿ ಈವೆಂಟ್‌ನಿಂದ ಹಿಂದೆ ಸರಿದ ವಿಶ್ವದ 18 ನೇ ಶ್ರೇಯಾಂಕಿತ ಆಟಗಾರ ಈಗ ವರ್ಷದ ಮೊದಲ ಗ್ರ್ಯಾನ್ ಸ್ಲಾಮ್​ನಿಂದಲೂ ಹೊರಬಿದ್ದಿದ್ದಾರೆ. ಇದಕ್ಕೂ ಮೊದಲು ವಿಶ್ವ ನಂಬರ್ 1 ಆಟಗಾರ ಕಾರ್ಲೋಸ್ ಅಲ್ಕರಾಜ್ ಕೂಡ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ.

ನೊವಾಕ್​ಗೆ ಸ್ನಾಯುಸೆಳೆತದ ಭೀತಿ: ಇನ್ನೊಂದೆಡೆ, ಮಾಜಿ ವಿಶ್ವ ನಂ.1 ಟೆನಿಸ್ಸಿಗ ಸರ್ಬಿಯಾದ ನೊವಾಕ್​ ಜಾಕೊವಿಚ್​ ಕೂಡ ಗಾಯದ ಸಮಸ್ಯೆಗೀಡಾಗಿದ್ದಾರೆ. ನಿನ್ನೆ ರಷ್ಯಾ ಟೆನಿಸ್ಸಿಗ ಡೇನಿಯಲ್​ ಮೆಡ್ವೆದೇವ್​ ಅವರ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಸ್ನಾಯು ಸೆಳೆಯಕ್ಕೆ ತುತ್ತಾಗಿದ್ದಾರೆ. ಇದರಿಂದಾಗಿ ಅಭ್ಯಾಸ ಪಂದ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ವಾರ ಅಡಿಲೇಡ್​ ಓಪನ್​ ವೇಳೆ ಸ್ನಾಯು ಸೆಳೆತಕ್ಕೀಡಾಗಿದ್ದೆ. ಇದೀಗ ನೋವು ಮತ್ತೆ ಕಾಣಿಸಿಕೊಂಡಿದೆ ಎಂದು ತಿಳಿಸಿದರು. ಇದೇ 16 ರಿಂದ ಆಸ್ಟ್ರೇಲಿಯನ್​ ಓಪನ್​ ಶುರುವಾಗಲಿದೆ.

ಓದಿ: ವಿರಾಟ್ ಕೊಹ್ಲಿ​ ವಿಶ್ವ ಕ್ರಿಕೆಟ್​ನ ಅಚ್ಚರಿಯ ಆಟಗಾರ: ಪಾಕಿಸ್ತಾನದ ಮಾಜಿ ಕ್ರಿಕೆಟಿಗನ ಬಣ್ಣನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.