ಕ್ಯಾಲ್ಗರಿ (ಕೆನಡಾ): ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಅವರು ಕೆನಡಾ ಓಪನ್‌ನಲ್ಲಿ ಫೈನಲ್ಸ್ ತಲುಪಿದ್ದಾರೆ. ಈ ಮೂಲಕ ಕೂಟದಲ್ಲಿ ಭಾರತಕ್ಕೆ ಒಂದು ಪ್ರಶಸ್ತಿ ಸಿಗುವುದು ಪಕ್ಕಾ ಆಗಿದೆ. ಕ್ವಾರ್ಟರ್ಫೈನಲ್ನಲ್ಲಿ ಗೆದ್ದು ಸೆಮಿಫೈನಲ್ ತಲುಪಿದ್ದ ಸ್ಟಾರ್ ಷಟ್ಲರ್ ಪಿ.ವಿ. ಸಿಂಧು ಫೈನಲ್ ಪ್ರವೇಶಿಸುವಲ್ಲಿ ವಿಫಲವಾದರು. ಈ ವರ್ಷದ ಪ್ರಥಮ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಅವರು ಸೋತಿದ್ದಾರೆ.
ಲಕ್ಷ್ಯ ಸೇನ್ ಸೆಮಿಫೈನಲ್‌ನಲ್ಲಿ ಜಪಾನ್‌ನ ಕೆಂಟಾ ನಿಶಿಮೊಟೊ ಅವರನ್ನು 21-17, 21-14ರ ಎರಡು ನೇರ ಗೇಮ್‌ಗಳಿಂದ ಸೋಲಿಸಿದರು. ಇದರಿಂದ ಕೆನಡಾ ಓಪನ್ 2023 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಪುರುಷರ ಸಿಂಗಲ್ಸ್ ಫೈನಲ್‌ಗೆ ಲಗ್ಗೆ ಹಾಕಿದರು. ಕ್ಯಾಲ್ಗರಿಯ ಸ್ಪರ್ಧೆಯಲ್ಲಿ ಸೇನ್ ಆರಂಭದಿಂದಲೂ ಕಠಿಣ ಸವಾಲುಗಳನ್ನು ಎದುರಿಸುತ್ತಾ ಬಂದರು. ಎಲ್ಲ ಸವಾಲುಗಳನ್ನು ಮೆಟ್ಟಿನಿಂತ ಸೇನ್ ಅಂತಿಮವಾಗಿ ಫೈನಲ್ ತಲುಪಿದರು.
-
Straight into the finals at #CanadaOpen ❤️🔥
— Yonex Sunrise India (@YonexSunriseIn) July 9, 2023 " class="align-text-top noRightClick twitterSection" data="
Can you guess which YONEX racquet @senlakshya is playing with? #TeamYonex #YonexSunriseIndia pic.twitter.com/pN5x9kNI7j
">Straight into the finals at #CanadaOpen ❤️🔥
— Yonex Sunrise India (@YonexSunriseIn) July 9, 2023
Can you guess which YONEX racquet @senlakshya is playing with? #TeamYonex #YonexSunriseIndia pic.twitter.com/pN5x9kNI7jStraight into the finals at #CanadaOpen ❤️🔥
— Yonex Sunrise India (@YonexSunriseIn) July 9, 2023
Can you guess which YONEX racquet @senlakshya is playing with? #TeamYonex #YonexSunriseIndia pic.twitter.com/pN5x9kNI7j
2022ರ ಆಗಸ್ಟ್‌ನಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸೇನ್ ಕೊನೆಯ ಬಾರಿಗೆ ಫೈನಲ್ ಆಡಿದ್ದರು. ಇದಾದ ನಂತರ ಸ್ಪರ್ಧೆಯ ಪ್ರಮುಖ ಘಟ್ಟಕ್ಕೆ ಪ್ರವೇಶ ಪಡೆಯುವಲ್ಲಿ ಮುಗ್ಗರಿಸುತ್ತಿದ್ದರು. ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ನಿಂದ ಈ ವರ್ಷ ನಡೆಯುವ ಸೂಪರ್ 500ನ ಮೂರನೇ ಪ್ರವಾಸದ ಇದಾಗಿದೆ. ಈ ವರ್ಷದಲ್ಲಿ ವಿಶ್ವ ಪ್ರವಾಸದಲ್ಲಿ ಸೇನ್ ಅವರು ಥಾಯ್ಲೆಂಡ್ ಓಪನ್‌ನಲ್ಲಿ ಮೂರನೇ ಸ್ಥಾನವನ್ನು ಗಳಿಸಿದ್ದು ಅತ್ಯುತ್ತಮ ಪ್ರದರ್ಶನವಾಗಿತ್ತು. ಆದರೆ ಈಗ ಕೆನಡಾ ಓಪನ್ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ.
ಒಟ್ಟಾರೆ ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ (ಬಿಡಬ್ಲ್ಯೂಎಫ್ -BWF) ವರ್ಲ್ಡ್ ಟೂರ್ ಸೂಪರ್ 500 ಈವೆಂಟ್‌ನ ಫೈನಲ್‌ನಲ್ಲಿ ಲಕ್ಷ್ಯ ಸೇನ್ ಅವರ ಎರಡನೇ ಫೈನಲ್ ಪ್ರದರ್ಶನವಿದು. ಈ ಬಾರಿ ಫೈನಲ್ಸ್ನಲ್ಲಿ ವಿಶ್ವದ 19 ಶ್ರೇಯಾಂಕದ ಭಾರತೀಯ ಆಟಗಾರ ಸೇನ್ ಆಲ್ ಇಂಗ್ಲೆಂಡ್ ಚಾಂಪಿಯನ್ ಚೀನಾದ ಲಿ ಶಿ ಫೆಂಗ್ ವಿರುದ್ಧ ಸೆಣಸಲಿದ್ದಾರೆ. ಪಂದ್ಯ ಇಂದು ರಾತ್ರಿ ನಡೆಯಲಿದೆ.
ಪಿ.ವಿ. ಸಿಂಧು ಶನಿವಾರ ರಾತ್ರಿ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ್ತಿ ಅಕಾನೆ ಯಮಗುಚಿ ವಿರುದ್ಧ ನಿರಾಸೆ ಅನುಭವಿಸಿದರು. ಪ್ರಸ್ತುತ 15ನೇ ಶ್ರೇಯಾಂಕದಲ್ಲಿರುವ ಸಿಂಧು 14-21, 15-21 ಅಂಕಗಳ ನೇರ ಗೇಮ್‌ಗಳಲ್ಲಿ ಸೋತರು. ಅಕಾನೆ ಯಮಗುಚಿ ವಿರುದ್ಧ ಸಿಂಧು ಅವರ ಎರಡನೇ ಸೋಲು ಇದಾಗಿದೆ. ಈ ಹಿಂದೆ ಸಿಂಗಾಪುರ ಓಪನ್‌ನ ಆರಂಭಿಕ ಸುತ್ತಿನಲ್ಲಿ ಯಮಗುಚಿ ವಿರುದ್ಧ ಅವರು ಸೋಲುಂಡರು.
ಪಿ.ವಿ. ಸಿಂಧು ಗಾಯದಿಂದ ಚೇತರಿಸಿಕೊಂಡ ನಂತರ ಯಾವುದೇ ಪ್ರಶಸ್ತಿ ಗೆದ್ದಿಲ್ಲ. ಆಗಸ್ಟ್ 2022ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅವರು ಕೊನೆಯ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಇದಾದ ನಂತರ ಪಾದದ ಗಾಯಕ್ಕೆ ತುತ್ತಾಗಿ ಆರು ತಿಂಗಳ ಕಾಲ ವಿಶ್ರಾಂತಿ ಪಡೆದುಕೊಂಡರು. ಈ ವರ್ಷ ಕಮ್ಬ್ಯಾಕ್ ಮಾಡಿದ ನಂತರ ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್‌ನಲ್ಲಿ ರನ್ನರ್ ಅಪ್ ಮತ್ತು ಮಲೇಷ್ಯಾ ಮಾಸ್ಟರ್ಸ್‌ನಲ್ಲಿ ಮೂರನೇ ಸ್ಥಾನ ತಲುಪಿದ್ದರು.
ಇದನ್ನೂ ಓದಿ: ಐರನ್‌ಮ್ಯಾನ್, ಓಷನ್‌ಮ್ಯಾನ್ ಕ್ರೀಡಾಕೂಟ ಜಯಿಸಿದ ರೈಲ್ವೆ ಅಧಿಕಾರಿ ಶ್ರೇಯಸ್ ಹೊಸೂರ್