ಪ್ರತಿಯೊಬ್ಬ ವ್ಯಕ್ತಿ ಬೆಳಗಿನ ಉಪಹಾರವು ಆತನ ದಿನದ ಪ್ರಮುಖ ಆಹಾರವಾಗುತ್ತದೆ. ಹೆಚ್ಚಿನ ಆಹಾರ ಸೇವನೆಗೆ, ದೇಹದ ಫಿಟ್ನೆಸ್ ಕಾಪಾಡಲು ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಎಂದು ತಜ್ಞರು ತಿಳಿಸುತ್ತಾರೆ. ಅಂತೆಯೇ ಕ್ರೀಡಾಪಟುಗಳಿಗೂ ಸಹ ಬೆಳಗಿನ ಉಪಾಹಾರವು ಮುಖ್ಯವಾಗುತ್ತದೆ. ಅವರ ದೇಹಕ್ಕೆ ಒಗ್ಗುವಂತಹ ಆಹಾರವನ್ನು ಅವರು ಸೇವನೆ ಮಾಡಬೇಕಾಗುತ್ತದೆ.
ಬಾಕ್ಸರ್ ಮೇರಿ ಕೋಮ್ ಸದ್ಯ ಟೋಕಿಯೋ ಒಲಿಂಪಿಕ್ಸ್ಗೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಸೇವಿಸುವ ಆಹಾರದ ಚಿತ್ರವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಆಹಾರದ ಮುಂದೆ ಆಕೆ ಪ್ರಾರ್ಥಿಸುತ್ತಿರುವುದನ್ನು ಕಾಣಬಹುದು.
- " class="align-text-top noRightClick twitterSection" data="">
ಮೇರಿ ಕೋಮ್ “ಬ್ರೇಕ್‌ಫಾಸ್ಟ್ ಸಮಯ” ಎಂಬ ಶೀರ್ಷಿಕೆ ನೀಡಿ ‘ಟೋಕಿಯೊ 2020 ಆ್ಯಂಡ್ ಚೀರ್ 4 ಇಂಡಿಯಾ’ ಎಂದು ಹ್ಯಾಶ್‌ಟ್ಯಾಗ್ ಮಾಡಿದ್ದಾರೆ. ಮೇರಿ ಕೋಮ್ ಅವರ ಆರೋಗ್ಯಕರ ಉಪಹಾರದಲ್ಲಿ ಕಿತ್ತಳೆ, ಬೇಯಿಸಿದ ಮೊಟ್ಟೆ, ಸಾಸೇಜ್‌ಗಳು ಮತ್ತು ಆವಿಯಲ್ಲಿ ಬೇಯಿಸಿದ ತರಕಾರಿಗಳು ಸೇರಿವೆ. ಸಾಂಪ್ರದಾಯಿಕ ಮಿಸೊ ಸೂಪ್ನ್ನು ಸಹ ಸೇವಿಸುತ್ತಿದ್ದಾರೆ. ಇದು ಜಪಾನ್‌ನಲ್ಲಿ ತಿನ್ನುವ ವಿಶಿಷ್ಟ ಉಪಹಾರ ಭಕ್ಷ್ಯವಾಗಿದೆ.
ಮಿಸೊ ಎಂಬುದು ಜಪಾನಿನ ಮಸಾಲೆ. ಸೋಯಾಬೀನ್ ಅನ್ನು ಉಪ್ಪಿನೊಂದಿಗೆ ಹುದುಗಿಸಿ ತಯಾರಿಸಲಾಗುತ್ತದೆ. ಮಿಸ್ಸೊ ಪೇಸ್ಟ್ ಅನ್ನು ಸ್ಟಾಕ್ ಆಗಿ ಬೆರೆಸಿ ತರಕಾರಿಗಳು ಅಥವಾ ಮಾಂಸದೊಂದಿಗೆ ಕುದಿಸಿ ಪೌಷ್ಠಿಕಾಂಶದ ಸೂಪ್ ತಯಾರಿಸಲಾಗುತ್ತದೆ.
ವರದಿಗಳ ಪ್ರಕಾರ, ಟೋಕಿಯೊ ಒಲಿಂಪಿಕ್ನಲ್ಲಿರುವ ಕೆಫೆಟೇರಿಯಾಗಳು ಪ್ರತಿದಿನ ವಿಶ್ವದ ನಾನಾ ಭಾಗದಿಂದ ಬಂದಿರುವ 48,000 ಗಣ್ಯ ಕ್ರೀಡಾಪಟುಗಳಿಗೆ ನೀಡಲಿವೆ. ಇದರಲ್ಲಿ ಕೆಲವು ಕೆಫೆಟೇರಿಯಾಗಳು 24 ಗಂಟೆಗಳ ಕಾಲ ತೆರೆದಿರುತ್ತವೆ. ಮೆನುವನ್ನು ಮುಖ್ಯವಾಗಿ ವೆಸ್ಟರ್ನ್, ಜಪಾನೀಸ್ ಮತ್ತು ಏಷ್ಯನ್ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ.