ಬೆಲ್ಗ್ರೇಡ್(ಸರ್ಬಿಯಾ): ಇಲ್ಲಿ ನಡೆಯುತ್ತಿರುವ AIBA ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ 21 ವರ್ಷದ ಆಕಾಶ್ ಕುಮಾರ್ 54 ಕೆಜಿ ವಿಭಾಗದಲ್ಲಿ ಸೆಮಿಫೈನಲ್ ತಲುಪುವ ಮೂಲಕ ಭಾರತಕ್ಕೆ ಮೊದಲ ಪದಕ ಖಚಿತಪಡಿಸಿದ್ದಾರೆ.
ಕ್ವಾರ್ಟರ್ ಫೈನಲ್ಸ್ನಲ್ಲಿ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ವೆನಿಜುವೆಲಾದ ಯೋಲ್ ಫಿನೋಲ್ ರಿವಾಸ್ ವಿರುದ್ಧ ಸರ್ವಾನುಮತ ಪಡೆದು ಗೆಲುವು ಸಾಧಿಸಿ ಸೆಮಿಫೈನಲ್ಸ್ ಪ್ರವೇಶಿಸಿದರು.
ಈ ಮೂಲಕ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ 7ನೇ ಬಾಕ್ಸರ್ ಎನಿಸಿಕೊಂಡರು. ಈ ಮೊದಲು ವಿಜೇಂದರ್ ಸಿಂಗ್ 2009ರಲ್ಲಿ (ಕಂಚು), ವಿಕಾಶ್ ಕ್ರಿಷನ್ 2011ರಲ್ಲಿ (ಕಂಚು), ಶಿವಥಾಪ 2015ರಲ್ಲಿ(ಕಂಚು) ಗೌರವ್ ಬಿಧುರಿ 2017ರಲ್ಲಿ(ಕಂಚು), ಅಮಿತ್ ಪಂಘಲ್ 2019ರಲ್ಲಿ(ಬೆಳ್ಳಿ) ಮತ್ತು ಮನೀಶ್ ಕೌಶಿಕ್ 2019ರಲ್ಲಿ(ಕಂಚು) ಪದಕ ಗೆದ್ದಿದ್ದರು.
-
21 year old young puglist was unaware of his mother's demise, a day before Nationals kicked off in Karnataka. #AkashKumar played nationals & went on to became the national champion and now a world championships medalist 🔥
— Boxing Federation (@BFI_official) November 2, 2021 " class="align-text-top noRightClick twitterSection" data="
Kudos 👏🏻#PunchMeinHaiDum#boxing#aibawchs2021 pic.twitter.com/ZVXxKL812F
">21 year old young puglist was unaware of his mother's demise, a day before Nationals kicked off in Karnataka. #AkashKumar played nationals & went on to became the national champion and now a world championships medalist 🔥
— Boxing Federation (@BFI_official) November 2, 2021
Kudos 👏🏻#PunchMeinHaiDum#boxing#aibawchs2021 pic.twitter.com/ZVXxKL812F21 year old young puglist was unaware of his mother's demise, a day before Nationals kicked off in Karnataka. #AkashKumar played nationals & went on to became the national champion and now a world championships medalist 🔥
— Boxing Federation (@BFI_official) November 2, 2021
Kudos 👏🏻#PunchMeinHaiDum#boxing#aibawchs2021 pic.twitter.com/ZVXxKL812F
ಹಾಲಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ಆಕಾಶ್ ಕಳೆದ ಸೆಪ್ಟೆಂಬರ್ನಲ್ಲಿ ಶ್ವಾಸಕೋಶ ಕ್ಯಾನ್ಸರ್ನಿಂದ ತಾಯಿಯನ್ನು ಕಳೆದುಕೊಂಡಿದ್ದರು. ಆದರೂ ಬಳ್ಳಾರಿಯಲ್ಲಿ ನಡೆದಿದ್ದ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸಿ ಚಾಂಪಿಯನ್ ಆಗಿದ್ದರು. ಇದೀಗ 2016ರ ಒಲಿಂಪಿಕ್ಸ್ ಪದಕ ವಿಜೇತನಿಗೆ ಮಣ್ಣುಮುಕ್ಕಿಸಿ ಭಾರತಕ್ಕೆ ಮತ್ತೊಂದು ಪದಕ ತಂದುಕೊಡುವ ಯಶಸ್ವಿಯಾಗಿದ್ದಾರೆ
ಆಕಾಶ್ ಸೆಮಿಫೈನಲ್ಸ್ನಲ್ಲಿ ಕಜಕಸ್ತಾನದ ಮಖ್ಮೂದ್ ಸಬೀರಖಾನ್ ವಿರುದ್ಧ ನವೆಂಬರ್ 4ರಂದು ಸೆಣಸಾಡಲಿದ್ದಾರೆ.
ಇನ್ನು 63.5 ಕೆಜಿ ವಿಭಾಗದಲ್ಲಿ 2015ರ ಮೆಡಲಿಸ್ಟ್ ಶಿವ ಥಾಪ ಕೂಡ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದು, ಕೊರಿಯನ್ ಬಾಕ್ಸರ್ ವಿರುದ್ಧ ಗೆದ್ದರೆ, ಭಾರತಕ್ಕೆ ಮತ್ತೊಂದು ಪದಕ ದೊರೆಯಲಿದೆ.
ಇದನ್ನೂ ಓದಿ:2020ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ: ವಿಜೇತರಿಗೆ ಟ್ರೋಫಿ ಹಸ್ತಾಂತರಿಸಿದ ಕ್ರೀಡಾ ಸಚಿವ