ನವದೆಹಲಿ: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತ ಸತೀಶ್ ಕುಮಾರ್ (+91 ಕೆಜಿ) ಜರ್ಮನಿಯಲ್ಲಿ ನಡೆಯುತ್ತಿರುವ ಬಾಕ್ಸಿಂಗ್‌ನ ಕಲೋನ್ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದಾರೆ.
ಸತೀಶ್ ಅವರು ಜರ್ಮನಿಯ ನೆಲ್ವಿ ಟಿಯಾಫ್ಯಾಕ್ ಅವರನ್ನು 4 -1 ಅಂಕಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದಾರೆ. ಮಹಿಳೆಯರ 57 ಕೆಜಿ ವಿಭಾಗದಲ್ಲಿ ಸಾಕ್ಷಿ ಮತ್ತು ಮನೀಷಾ ಫೈನಲ್‌ಗೆ ಪ್ರವೇಶಿಸಿದ್ದು, ಇಬ್ಬರು ಬಾಕ್ಸರ್‌ಗಳು ಪರಸ್ಪರ ಮುಖಾಮುಖಿಯಾಗಲಿದ್ದಾರೆ.
-
𝐑𝐄𝐒𝐔𝐋𝐓𝐒 𝐔𝐏𝐃𝐀𝐓𝐄📜
— Boxing Federation (@BFI_official) December 19, 2020 " class="align-text-top noRightClick twitterSection" data="
A strong display 🔥 from #SatishKumar (+91 Kg) paves his way into the final of #CologneBoxingWorldCup as he defeated Aboudou Moindze Djamili Dini of 🇫🇷 4️⃣:1️⃣.
Way to go, champ! 🔥#PunchMeinHaiDum #boxing #CologneBoxingWorldCup#Germany pic.twitter.com/8CEoKtwS34
">𝐑𝐄𝐒𝐔𝐋𝐓𝐒 𝐔𝐏𝐃𝐀𝐓𝐄📜
— Boxing Federation (@BFI_official) December 19, 2020
A strong display 🔥 from #SatishKumar (+91 Kg) paves his way into the final of #CologneBoxingWorldCup as he defeated Aboudou Moindze Djamili Dini of 🇫🇷 4️⃣:1️⃣.
Way to go, champ! 🔥#PunchMeinHaiDum #boxing #CologneBoxingWorldCup#Germany pic.twitter.com/8CEoKtwS34𝐑𝐄𝐒𝐔𝐋𝐓𝐒 𝐔𝐏𝐃𝐀𝐓𝐄📜
— Boxing Federation (@BFI_official) December 19, 2020
A strong display 🔥 from #SatishKumar (+91 Kg) paves his way into the final of #CologneBoxingWorldCup as he defeated Aboudou Moindze Djamili Dini of 🇫🇷 4️⃣:1️⃣.
Way to go, champ! 🔥#PunchMeinHaiDum #boxing #CologneBoxingWorldCup#Germany pic.twitter.com/8CEoKtwS34
ಮನೀಷಾ ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಸೋನಿಯಾ ಲೆದರ್ ಅವರನ್ನು 5- 0 ಅಂಕಗಳಿಂದ ಸೋಲಿಸಿದರೆ, ಸಾಕ್ಷಿ, ಜರ್ಮನಿಯ ರಮೋನಾ ಗ್ರಾಫ್ ಅವರನ್ನು 4 -1 ಅಂಕಗಳಿಂದ ಮಣಿಸಿದ್ರು. ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಪಡೆದಿದ್ದ ಪೂಜಾ ರಾಯ್ ನೆದರ್ಲೆಂಡ್ನ ನೌಚ್ಕಾ ಫಾಂಟಿಜ್ನ್ ವಿರುದ್ಧ ಸೋಲು ಕಂಡಿದ್ದು, ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಪುರುಷರ 57 ಕೆಜಿ ವಿಭಾಗದಲ್ಲಿ ಮೊಹಮ್ಮದ್ ಹುಸಾಮುದ್ದೀನ್ ಮತ್ತು ಗೌರವ್ ಸೋಲಂಕಿ ಕಂಚಿನ ಪದಕ ಪಡೆದಿದ್ದಾರೆ.