ಇಸ್ತಾಂಬುಲ್(ಟರ್ಕಿ): ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡುತ್ತಿರುವ 25 ವರ್ಷದ ನಿಖಾತ್ ಜರೀನ್ ಭಾರತಕ್ಕೆ ಬೆಳ್ಳಿ ಪದಕ ಖಚಿತಪಡಿಸಿದ್ದಾರೆ. ಟರ್ಕಿಯ ಇಸ್ತಾಂಬುಲ್ನಲ್ಲಿ ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಎದುರಾಳಿ ಬ್ರೆಜಿಲ್‌ನ ಕ್ಯಾರೋಲಿನ್ ಡಿ ಅಲ್ಮೇಡಾ ವಿರುದ್ಧ 5-0 ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.
-
𝙂𝙊𝙇𝘿𝙀𝙉 𝙍𝙐𝙉 ! 🤩
— Boxing Federation (@BFI_official) May 18, 2022 " class="align-text-top noRightClick twitterSection" data="
🇮🇳’s @nikhat_zareen becomes first 🇮🇳 boxer to cement her place in the 𝐟𝐢𝐧𝐚𝐥 of #IBAWWC2022 as she displayed her lethal form🔥 to eke out 🇧🇷’s Caroline in the semifinals! 🦾🌟
Go for the GOLD! 👊#PunchMeinHaiDum #stanbulBoxing#boxing pic.twitter.com/PDrq9x9qbh
">𝙂𝙊𝙇𝘿𝙀𝙉 𝙍𝙐𝙉 ! 🤩
— Boxing Federation (@BFI_official) May 18, 2022
🇮🇳’s @nikhat_zareen becomes first 🇮🇳 boxer to cement her place in the 𝐟𝐢𝐧𝐚𝐥 of #IBAWWC2022 as she displayed her lethal form🔥 to eke out 🇧🇷’s Caroline in the semifinals! 🦾🌟
Go for the GOLD! 👊#PunchMeinHaiDum #stanbulBoxing#boxing pic.twitter.com/PDrq9x9qbh𝙂𝙊𝙇𝘿𝙀𝙉 𝙍𝙐𝙉 ! 🤩
— Boxing Federation (@BFI_official) May 18, 2022
🇮🇳’s @nikhat_zareen becomes first 🇮🇳 boxer to cement her place in the 𝐟𝐢𝐧𝐚𝐥 of #IBAWWC2022 as she displayed her lethal form🔥 to eke out 🇧🇷’s Caroline in the semifinals! 🦾🌟
Go for the GOLD! 👊#PunchMeinHaiDum #stanbulBoxing#boxing pic.twitter.com/PDrq9x9qbh
ಕ್ವಾರ್ಟರ್ ಫೈನಲ್ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದ ನಿಖಾತ್ ಜರೀನ್ ಎದುರಾಳಿ ಚಾರ್ಲಿ ಡೇವಿಸನ್ ವಿರುದ್ಧ 5-0 ಅಂತರದಿಂದ ಜಯ ದಾಖಲಿಸಿ, ಸೆಮಿಫೈನಲ್ಗೆ ಲಗ್ಗೆ ಹಾಕಿದ್ದರು. 52 ಕೆಜಿ ವಿಭಾಗದ ಬಾಕ್ಸಿಂಗ್ನಲ್ಲಿ ನಿಖಾತ್ ಜರೀನ್ ಅತ್ಯದ್ಭುತ ಪ್ರದರ್ಶನ ನೀಡಿದ್ದು, ಇದೀಗ ಚಿನ್ನಕ್ಕಾಗಿ ಹೋರಾಟ ನಡೆಸಲಿದ್ದಾರೆ.
ಈ ಹಿಂದೆ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದಿರುವ ತೆಲಂಗಾಣದ ಬಾಕ್ಸರ್ ಜರೀನ್, ಇದೀಗ ಭಾರತಕ್ಕೆ ಮಹಿಳಾ ವಿಭಾಗದ ಬಾಕ್ಸಿಂಗ್ನಲ್ಲಿ ಚಿನ್ನದ ಪದಕದ ಭರವಸೆ ಮೂಡಿಸಿದ್ದಾರೆ.
-
BRILLIANT MANISHA! 👏👏🔝
— Boxing Federation (@BFI_official) May 16, 2022 " class="align-text-top noRightClick twitterSection" data="
⚔️ #Manisha (57kg) gave a robust reply to stave of a stiff challenge from 🇲🇳’s Monkhor and confirmed 2️⃣nd medal for 🇮🇳 at the #IBAWWC2022 !
Well done, champ! 👏👏🔥#PunchMeinHaiDum #boxing #IstanbulBoxing pic.twitter.com/aETo9s11jB
">BRILLIANT MANISHA! 👏👏🔝
— Boxing Federation (@BFI_official) May 16, 2022
⚔️ #Manisha (57kg) gave a robust reply to stave of a stiff challenge from 🇲🇳’s Monkhor and confirmed 2️⃣nd medal for 🇮🇳 at the #IBAWWC2022 !
Well done, champ! 👏👏🔥#PunchMeinHaiDum #boxing #IstanbulBoxing pic.twitter.com/aETo9s11jBBRILLIANT MANISHA! 👏👏🔝
— Boxing Federation (@BFI_official) May 16, 2022
⚔️ #Manisha (57kg) gave a robust reply to stave of a stiff challenge from 🇲🇳’s Monkhor and confirmed 2️⃣nd medal for 🇮🇳 at the #IBAWWC2022 !
Well done, champ! 👏👏🔥#PunchMeinHaiDum #boxing #IstanbulBoxing pic.twitter.com/aETo9s11jB
ಮತ್ತೊಂದೆಡೆ ಸೆಮಿಫೈನಲ್ನಲ್ಲಿ ಸೋಲು ಕಾಣುವ ಮೂಲಕ ಮನೀಷಾ (57 ಕೆಜಿ ವಿಭಾಗ) ಹಾಗೂ ಪ್ರವೀಣ್ ಹೂಡಾ(63 ಕೆಜಿ ವಿಭಾಗ) ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. 57 ಕೆಜಿ ವಿಭಾಗದ ಬಾಕ್ಸಿಂಗ್ನಲ್ಲಿ ಮನೀಷಾ ಹಾಗೂ ಪ್ರವೀಣ್(63 ಕೆಜಿ ವಿಭಾಗ) ಸೆಮೀಸ್ಗೆ ಲಗ್ಗೆ ಹಾಕಿದ್ದರು.
ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಮೇರಿ ಕೋಮ್, ಸರಿತಾ ದೇವಿ ಈಗಾಗಲೇ ಪ್ರಶಸ್ತಿ ಗೆದ್ದಿದ್ದು, ಇದೀಗ ಹೈದರಾಬಾದ್ನ ಬಾಕ್ಸರ್ ಕೂಡ ಈ ಪಟ್ಟಿಗೆ ಸೇರುವ ತವಕದಲ್ಲಿದ್ದಾರೆ.