ETV Bharat / sports

Tokyo Olympics: ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದ ಬಾಕ್ಸರ್​ ಮನೀಶ್ ಕೌಶಿಕ್ - ಬಾಕ್ಸಿಂಗ್ ನ್ಯೂಸ್​

ಮನೀಶ್ ​ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಗ್ರೇಟ್​ ಬ್ರಿಟನ್​ನ ಲ್ಯೂಕ್ ಮೆಕಾರ್ಕಮ್​ ವಿರುದ್ಧ ಪುರುಷರ ಲೈಟ್​ವೇಟ್​ ಬಾಕ್ಸಿಂಗ್ ವಿಭಾಗದಲ್ಲಿ 4-1 ರಲ್ಲಿ ಸೋಲು ಕಂಡರು.

Tokyo Olympics
ಮನೀಶ್ ಕೌಶಿಕ್
author img

By

Published : Jul 25, 2021, 4:38 PM IST

ಟೋಕಿಯೋ: ಭಾರತದ ಉದಯೋನ್ಮುಖ ಬಾಕ್ಸರ್ ಮನೀಶ್​ ಕೌಶಿಕ್(63ಕೆಜಿ)​ ಟೋಕಿಯೋ ಒಲಿಂಪಿಕ್ಸ್​ನ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ.

ಮನೀಶ್ ​ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಗ್ರೇಟ್​ ಬ್ರಿಟನ್​ನ ಲ್ಯೂಕ್ ಮೆಕಾರ್ಕಮ್​ ವಿರುದ್ಧ ಪುರುಷರ ಲೈಟ್​ವೇಟ್​ ಬಾಕ್ಸಿಂಗ್ ವಿಭಾಗದಲ್ಲಿ 4-1 ರಲ್ಲಿ ಸೋಲು ಕಂಡರು.

ಕಾಮನ್​ವೆಲ್ತ್​ ಗೇಮ್ಸ್​ನ ಬೆಳ್ಳಿ ಪದಕ ವಿಜೇತ ಕೌಶಿಕ್ ಮೊದಲ ಸುತ್ತಿನಲ್ಲಿ ಸೋಲು ಕಂಡರೂ ಎರಡನೇ ಸುತ್ತಿನಲ್ಲಿ 3-2ರಲ್ಲಿ ಗೆಲ್ಲುವ ಮೂಲಕ ತಿರುಗೇಟು ನೀಡಿದ್ದರು, ಆದರೆ ನಿರ್ಣಾಯಕ ಸುತ್ತಿನಲ್ಲಿ ಬ್ರಿಟನ್ ಆಟಗಾರ ಸಂಪೂರ್ಣ ಪ್ರಾಬಲ್ಯ ಸಾಧಿಸಿ ಭಾರತೀಯ ಬಾಕ್ಸರ್ ವಿರುದ್ಧ ಗೆಲುವು ಸಾಧಿಸಿದರು.

ಇದನ್ನೂ ಓದಿ:Tokyo Olympics: ಭಾರತದ ಸ್ಟಾರ್​ ಬಾಕ್ಸರ್​ ಮೇರಿ ಕೋಮ್ ಪ್ರಿಕ್ವಾರ್ಟರ್​​ ಪ್ರವೇಶ

ಮಹಿಳೆಯರ 51 ಕೆ.ಜಿ ವಿಭಾಗದಲ್ಲಿ ಭಾರತದ ಅನುಭವಿ ಬಾಕ್ಸರ್ ಮೇರಿ ಕೋಮ್​ 4-1ರ ಅಂತರದಲ್ಲಿ ಡೊಮಿನಿಕನ್ ರಿಪಬ್ಲಿಕನ್​ನ ಮಿಗುಯೆಲಿನಾ ಹೆರ್ನಾಂಡೆಜ್ ಗಾರ್ಸಿಯಾ ವಿರುದ್ಧ ಗೆಲುವು ಸಾಧಿಸಿ ಪ್ರೀ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಶನಿವಾರ ವಿಕಾಶ್ ಕ್ರಿಶನ್ ಕೂಡ ಮೊದಲ ಸುತ್ತಿನಲ್ಲೇ ಸೋಲು ಕಂಡ ಜಪಾನ್ ಬಾಕ್ಸರ್ ವಿರುದ್ಧ ಸೋಲು ಕಂಡು ಕ್ರೀಡಾಕೂಟದಿಂದ ಹೊರಬಿದ್ದಿದ್ದರು.

ಇದನ್ನೂ ಓದಿ: Tokyo Olympics boxing: ಮೊದಲ ಸುತ್ತಿನಲ್ಲೇ ಸೋಲುಕಂಡು ನಿರಾಸೆ ಅನುಭವಿಸಿದ ವಿಕಾಸ್ ಕ್ರಿಶನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.