ಚೆನ್ನೈ( ತಮಿಳುನಾಡು): ಹದಿನಾಲ್ಕು ವರ್ಷದ ಭರತ್ ಸುಬ್ರಮಣ್ಯಂ ಭಾನುವಾರ ಇಟಲಿಯಲ್ಲಿ ನಡೆದ ಈವೆಂಟ್‌ನಲ್ಲಿ ಮೂರನೇ ಮತ್ತು ಅಂತಿಮ ಹಂತದ ಗ್ರಾಂಡ್ಮಾಸ್ಟರ್ ಸುತ್ತಿನ ಅರ್ಹತೆ ಪಡೆದುಕೊಳ್ಳುವ ಮೂಲಕ ಭಾರತದ 73ನೇ ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗಿ ಹೊರ ಹೊಮ್ಮಿದ್ದಾರೆ.
ಕ್ಯಾಟೊಲಿಕಾದಲ್ಲಿ ನಡೆದ ಈವೆಂಟ್‌ನಲ್ಲಿ ಚೆನ್ನೈ ಮೂಲದ ಆಟಗಾರ ಒಂಬತ್ತು ಸುತ್ತುಗಳಿಂದ ಒಟ್ಟಾರೆ 6.5 ಪಾಯಿಂಟ್‌ಗಳನ್ನು ಪಡೆದು ಏಳನೇ ಸ್ಥಾನ ಪಡೆದರು. ಅವರು ಈ ಈವೆಂಟ್‌ನಲ್ಲಿ ತಮ್ಮ ಮೂರನೇ GM ಅರ್ಹತೆ ಪಡೆದರು ಮತ್ತು ಇದಕ್ಕೆ ಅಗತ್ಯ ಇರುವ 2,500 (Elo) ಮಾರ್ಕ್ ಅನ್ನು ಸಹ ತಲುಪಿ ಗ್ರಾಂಡ್ ಮಾಸ್ಟರ್ ಮಾನ್ಯತೆ ಗಿಟ್ಟಿಸಿಕೊಂಡರು.
ಗ್ರಾಂಡ್ಮಾಸ್ಟರ್ ಆಗಲು ಮಾನದಂಡವೇನು?
ಫೆಬ್ರವರಿ 2020 ರಲ್ಲಿ ಮಾಸ್ಕೋದಲ್ಲಿ ನಡೆದ ಏರೋಫ್ಲಾಟ್ ಓಪನ್‌ನಲ್ಲಿ ಭರತ್ 11 ನೇ ಸ್ಥಾನವನ್ನು ಗಳಿಸಿದ್ದರು. ಇದಾದ ಬಳಿಕ ಭರತ್ ತಮ್ಮ ಮೊದಲ GM ನಾರ್ಮ್ ಅನ್ನು ಸಾಧಿಸಿದ್ದಾರೆ. ಅಕ್ಟೋಬರ್ 2021 ರಲ್ಲಿ ಬಲ್ಗೇರಿಯಾದಲ್ಲಿ ನಡೆದ ಜೂನಿಯರ್ ರೌಂಡ್‌ಟೇಬಲ್ ಅಂಡರ್ 21 ಪಂದ್ಯಾವಳಿಯಲ್ಲಿ 6.5 ಅಂಕಗಳೊಂದಿಗೆ 4 ನೇ ಸ್ಥಾನ ಗಳಿಸಿದ ನಂತರ ಅವರು ಎರಡನೇ ಸುತ್ತಿನ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ರಾಂಡ್ ಮಾಸ್ಟರ್ ಆಗಲು ಚೆಸ್ ಆಟಗಾರನೊಬ್ಬ ಮೂರು ವಿವಿಧ ಅರ್ಹತೆಗಳನ್ನು ಹಾಗೂ ಮಾನದಂಡಗಳಲ್ಲಿ ಉತ್ತೀರ್ಣರಾಗಬೇಕು. ಆಟಗಾರನೊಬ್ಬ ಗ್ರಾಂಡ್ಮಾಸ್ಟರ್ ಮಾನದಂಡಗಳನ್ನು ಪಡೆದುಕೊಳ್ಳಲು 2,500 Elo ಪಾಯಿಂಟ್‌ಗಳ ಲೈವ್ ರೇಟಿಂಗ್ ಪಡೆಯಬೇಕಾಗುತ್ತದೆ. ಸುಬ್ರಮಣ್ಯಂ ಅವರು 2019 ರಲ್ಲಿ 11 ವರ್ಷ ಮತ್ತು 8 ತಿಂಗಳ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಮಾಸ್ಟರ್ ಆಗಿದ್ದರು.
ಲಲಿತ್ ಬಾಬುಗೆ ಒಲಿದ ಪ್ರಶಸ್ತಿ
ಭಾರತದ ಸಹ ಆಟಗಾರ ಎಂ ಆರ್ ಲಲಿತ್ ಬಾಬು ಏಳು ಅಂಕಗಳೊಂದಿಗೆ ಪಂದ್ಯಾವಳಿಯಲ್ಲಿ ವಿಜೇತರಾಗಿ ಹೊರಹೊಮ್ಮಿದರು. ಅಗ್ರ ಶ್ರೇಯಾಂಕದ ಆಂಟನ್ ಕೊರೊಬೊವ್ (ಉಕ್ರೇನ್) ಸೇರಿದಂತೆ ಇತರ ಮೂವರೊಂದಿಗೆ ಟೈ ಮಾಡಿದ ಅವರು, ಉತ್ತಮ ಟೈ-ಬ್ರೇಕ್ ಸ್ಕೋರ್ ಆಧಾರದ ಮೇಲೆ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಇದನ್ನು ಓದಿ: Watch: ಒಂದೇ ಬಾಲ್ಗೆ 7 ರನ್.. ಬಾಂಗ್ಲಾ-ಕಿವೀಸ್ ಟೆಸ್ಟ್ ಪಂದ್ಯದ ಕಾಮಿಡಿ ದೃಶ್ಯ ನೋಡಿ