ETV Bharat / sports

ಪ್ರೊ ಕಬಡ್ಡಿ: ರೋಚಕ ಹಣಾಹಣಿಯಲ್ಲಿ ಗೆದ್ದ ಬೆಂಗಳೂರು ಬುಲ್ಸ್​​... ಪಾಟ್ನಾ ಪೈರೇಟ್ಸ್​ ವಿರುದ್ಧ ಜಯ!

ಪ್ರೊ ಕಬಡ್ಡಿಯ ತನ್ನ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್​​ ಬೆಂಗಳೂರು ಬುಲ್ಸ್​​ ಗೆಲುವು ದಾಖಲು ಮಾಡಿದ್ದು, ಪಾಟ್ನಾ ಪೈರೇಟ್ಸ್​ ವಿರುದ್ಧ ರೋಚಕ ಜಯ ಸಾಧಿಸಿದೆ.

ಹಾಲಿ ಚಾಂಪಿಯನ್​​ ಗೆಲುವು
author img

By

Published : Jul 20, 2019, 10:16 PM IST

Updated : Jul 21, 2019, 10:31 AM IST

ಹೈದರಾಬಾದ್​: 7ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಹಾಲಿ ಚಾಂಪಿಯನ್​​ ಬೆಂಗಳೂರು ಬುಲ್ಸ್‌ ತಂಡ ತನ್ನ ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌ ವಿರುದ್ಧ 34-32 ಅಂತರದಲ್ಲಿ ರೋಚಕ ಗೆಲುವು ದಾಖಲು ಮಾಡಿದೆ.

ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಆರಂಭದಿಂದಲೇ ಆಕ್ರಮಣ ಹಾಗೂ ರಕ್ಷಣಾತ್ಮಕವಾಗಿ ಆಟಕ್ಕೆ ಮೊರೆ ಹೋದವು.

Bengaluru Bulls
ಪ್ರೊ ಕಬಡ್ಡಿ ರೋಚಕ ಹಣಾಹಣಿಯಲ್ಲಿ ಗೆದ್ದ ಬೆಂಗಳೂರು ಬುಲ್ಸ್
ಬುಲ್ಸ್​ ತಂಡದ ಪರ ಕ್ಯಾಪ್ಟನ್​ ರೋಹಿತ್​ ಕುಮಾರ್​ ಹಾಗೂ ಕಳೆದ ವರ್ಷದ ಗೆಲುವಿನ ಹೀರೋ ಪವನ್ ​ ಮುನ್ನಡೆ ತಂದುಕೊಟ್ಟರೆ, ಪಾಟ್ನಾ ತಂಡಕ್ಕೆ ಪರ್ದೀಪ್​​ ನರ್ವಾಲ್​ ಉತ್ತರ ಆರಂಭ ನೀಡಿದರು. ಮೊದಲಾರ್ಧದಲ್ಲಿ ಪಾಟ್ನಾ 17 ಹಾಗೂ ಬುಲ್ಸ್​ 13 ಅಂಕ ಗಳಿಸಿದ್ದವು. ತದನಂತರ ಎದುರಾಳಿ ತಂಡದ ಮೇಲೆ ಬುಲ್ಸ್​ ಸವಾರಿ ನಡೆಸಿತು. ಹೀಗಾಗಿ ಬುಲ್ಸ್​ ತಂಡ ಕೊನೆಯದಾಗಿ 34-32 ಅಂತರದಲ್ಲಿ ​ ಗೆಲುವು ದಾಖಲು ಮಾಡುವ ಮೂಲಕ ಖಾತೆ ತೆರೆದಿದೆ.

ಬುಲ್ಸ್​ ತಂಡ 18-22 ಅಂಕಗಳಿಂದ ಹಿನ್ನಡೆ ಅನುಭವಿಸಿ ಸೋಲಿನ ಸುಳಿಗೆ ಸಿಲುಕಿಕೊಂಡಿತ್ತು. ಆದರೆ ಪವನ್​, ಮಹೇಂದ್ರ ಸಿಂಗ್​ ಉತ್ತಮವಾಗಿ ಆಡಿ ತಂಡಕ್ಕೆ ಅಂಕ ತಂದುಕೊಟ್ಟರು.

ಒಂದು ಹಂತದಲ್ಲಿ ಉಭಯ ತಂಡ 24-24 ಅಂಕಗಳಿಂದ ಸಮಬಲ ಸಾಧಿಸಿದ್ದವು. ಆದರೆ ಈ ವೇಳೆ ಬುಲ್ಸ್​ ತಂಡದ ಆಟಗಾರರು ಅದ್ಭುತ ಪ್ರದರ್ಶನದ ಮೂಲಕ ಮುನ್ನಡೆ ಪಡೆದುಕೊಂಡರು. ಇದಾದ ಬಳಿಕ ಪಾಟ್ನಾ ಅಂಕಗಳಿಕೆ ಮಾಡಲು ವಿಫಲಗೊಂಡಿತು. ಹೀಗಾಗಿ ಬುಲ್ಸ್​ ತನ್ನ ಆಟ ಮುಂದುವರಿಸಿ ಗೆಲುವು ದಾಖಲು ಮಾಡಿದೆ.

ಪವನ್​ ಕುಮಾರ್​ 9 ಅಂಕ, ಅಮಿತ್​ ಶಿರೋನ್​ 5, ಸುಮಿತ್​ ಸಿಂಗ್​ 4, ಆಶೀಷ್​ ಸಿಂಗ್​ 4. ಮಹೇಂದ್ರ ಸಿಂಗ್​ 4, ರೋಹಿತ್​ ಕುಮಾರ್​ 4, ಬಂಟಿ 2 ಅಂಕ ಸಂಪಾದಿಸಿದರು.

ಪಾಟ್ನಾ ಪರ ಪರ್ದೀಪ್​ ನರ್ವಾಲ್​ 10,ಮೊಹಮ್ಮದ್​ ಇಸ್ಮಾಯಿಲ್​ 9, ವಿಕಾಸ್​ ಜಗ್ಲಾನ್​ 3, ನೀರಜ್​ ಕುಮಾರ್​​ 2, ಹದಿ ಒಸ್ತೊರಾಕ್​ 3, ಜಾನ್​ ಕುಂಗ್​ ಲೀ 1, ಜೈದೀಪ್​ 1 ಅಂಕ ಪಡೆದುಕೊಂಡರು.

Intro:Body:

ಪ್ರೊ ಕಬಡ್ಡಿ ರೋಚಕ ಹಣಾಹಣಿಯಲ್ಲಿ ಗೆದ್ದ ಬೆಂಗಳೂರು ಬುಲ್ಸ್​​... ಪಟನಾ ಪೈರೇಟ್ಸ್​ ವಿರುದ್ಧ ಜಯ! 

ಬೆಂಗಳೂರು: 7ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಹಾಲಿ ಚಾಂಪಿಯನ್​​ ಬೆಂಗಳೂರು ಬುಲ್ಸ್‌ ತಂಡ ಮೊದಲ ಪಂದ್ಯ ತವರಿನಲ್ಲಿ ಪಟನಾ ಪೈರೇಟ್ಸ್‌ ವಿರುದ್ಧ ಸೆಣಸಿ ರೋಚಕ ಗೆಲುವು ದಾಖಲು ಮಾಡಿದೆ. 

ಇಲ್ಲಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಆರಂಭದಿಂದಲೇ ಆಕ್ರಮಣ ಹಾಗೂ ರಕ್ಷಣಾತ್ಮಕವಾಗಿ ಆಟಕ್ಕೆ ಮೊರೆ ಹೋದವು.  ಆರಂಭಿಸಿದೆ. 

ಬುಲ್ಸ್​ ತಂಡದ ಪರ ಕ್ಯಾಪ್ಟನ್​ ರೋಹಿತ್​ ಕುಮಾರ್​ ಹಾಗೂ ಕಳೆದ ವರ್ಷದ ಗೆಲುವಿನ ಹೀರೋ ಪವನ್​ ಮುನ್ನಡೆ ತಂದುಕೊಟ್ಟರೆ, ಪಟನಾ ತಂಡಕ್ಕೆ ಪ್ರದೀಪ್​ ನರ್ವಾಲ್​ ಉತ್ತರ ಆರಂಭ ನೀಡಿದರು. ಮೊಲದಲಾರ್ಧದಲ್ಲಿ ಪಟನಾ 17 ಹಾಗೂ ಬುಲ್ಸ್​ 13 ಅಂಕ ಗಳಿಸಿದ್ದವು. ತದನಂತರ ಎದುರಾಳಿ ತಂಡದ ಮೇಲೆ ಬುಲ್ಸ್​ ಸವಾರಿ ನಡೆಸಿತು. ಹೀಗಾಗಿ ತಂಡ ಕೊನೆಯದಾಗಿ 34-32  ಅಂತರದಲ್ಲಿ ಬುಲ್ಸ್​ ಗೆಲುವು ದಾಖಲು ಮಾಡಿ ಖಾತೆ ತೆರೆದಿದೆ. 

ಬುಲ್ಸ್​ ತಂಡ 18-22 ಅಂಕಗಳಿಂದ ಹಿನ್ನಡೆ ಅನುಭವಿಸಿ ಸೋಲಿನ ಸುಳಿಗೆ ಸಿಲುಕೊಂಡಿತ್ತು. ಆದರೆ ಪವನ್​,ಮಹೇಂದ್ರ ಸಿಂಗ್​ ಉತ್ತಮವಾಗಿ ಆಡಿ ತಂಡಕ್ಕೆ ಅಂಕ ತಂದುಕೊಟ್ಟರು.

ಒಂದು ಹಂತದಲ್ಲಿ ಉಭಯ ತಂಡ 24-24 ಅಂಕಗಳಿಂದ ಸಮಬಲ ಸಾಧಿಸಿದ್ದವು. ಆದರೆ ಈ ವೇಳೆ ಬುಲ್ಸ್​ ತಂಡದ ಆಟಗಾರರು ಸವಾರಿ ನಡೆಸಿ ಮುನ್ನಡೆ ಪಡೆದುಕೊಂಡರು. ಇದಾದ ಬಳಿಕ ಪಟನಾ ಅಂಕಗಳಿಕೆ ಮಾಡಲು ವಿಫಲಗೊಂಡಿತು. ಹೀಗಾಗಿ ಬುಲ್ಸ್​ ತನ್ನ ಆಟ ಮುಂದುವರಿಸಿ ಗೆಲುವು ದಾಖಲು ಮಾಡಿದೆ. 

Conclusion:
Last Updated : Jul 21, 2019, 10:31 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.