ಬೆಂಗಳೂರು: ಪ್ರೋ ಕಬ್ಬಡಿ ಲೀಗ್ನ 14ನೇ ಪಂದ್ಯದಲ್ಲಿ ನಾಯಕ ಪವನ್ ಶೆರಾವತ್ ಅವರ ಅಬ್ಬರದ ನೆರವಿನಿಂದ ಬೆಂಗಳೂರು ಬುಲ್ಸ್ ತಂಡ ಒಂದು ಅಂಕದ ಅಂತರದಿಂದ ಬೆಂಗಾಲ್ ವಾರಿಯರ್ಸ್ ವಿರುದ್ಧ ರೋಚಕ ಜಯ ಸಾಧಿಸಿದೆ.
ಬೆಂಗಳೂರಿನ ವೈಟ್ಫೀಲ್ಸ್ನ ಶೆರಾಟನ್ ಗ್ರ್ಯಾಂಡ್ ಹೋಟೆಲ್ ಮತ್ತು ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 36-35 ಅಂಕದ ಅಂತರದಲ್ಲಿ ರೋಚಕ ಜಯ ಸಾಧಿಸಿತು.
ಪಂದ್ಯದ ಮೊದಲ 5 ನಿಮಿಷಗಳಲ್ಲೇ ಬೆಂಗಳೂರು ತಂಡ ಆಲೌಟ್ ಆಗುವ ಮೂಲಕ ಭಾರಿ ಹಿನ್ನಡೆ ಅನುಭವಿಸಿತು. ಆದರೆ ಆಲೌಟ್ ಆದರ ನಂತರ ಅದ್ಭುತವಾಗಿ ಕಮ್ಬ್ಯಾಕ್ ಮಾಡಿದ ಪವನ್ ಶೆರಾವತ್ ಮೊದಲಾರ್ಧದ ವೇಳೆಗೆ 18-18ರಲ್ಲಿ ಸಮಬಲಕ್ಕೆ ತಂದು ನಿಲ್ಲಿಸಿದರು. ದ್ವಿತೀಯಾರ್ಧದಲ್ಲಿ ಕೊನೆಯ ನಿಮಿಷದ ವರೆಗೂ ಈ ಪೈಪೋಟಿ ಹೀಗೆ ಮುಂದುವರಿದಿತ್ತು.
-
Anyone know if Irshad Kamil sa’ab wrote 'Phir se udd chala' for Pawan Sehrawat? 🤔
— ProKabaddi (@ProKabaddi) December 26, 2021 " class="align-text-top noRightClick twitterSection" data="
Too many high-flying moments in this epic blockbuster as @BengaluruBulls pull off a remarkable victory!#BLRvBEN #SuperhitPanga #vivoProKabaddi pic.twitter.com/CTPSUR5mgd
">Anyone know if Irshad Kamil sa’ab wrote 'Phir se udd chala' for Pawan Sehrawat? 🤔
— ProKabaddi (@ProKabaddi) December 26, 2021
Too many high-flying moments in this epic blockbuster as @BengaluruBulls pull off a remarkable victory!#BLRvBEN #SuperhitPanga #vivoProKabaddi pic.twitter.com/CTPSUR5mgdAnyone know if Irshad Kamil sa’ab wrote 'Phir se udd chala' for Pawan Sehrawat? 🤔
— ProKabaddi (@ProKabaddi) December 26, 2021
Too many high-flying moments in this epic blockbuster as @BengaluruBulls pull off a remarkable victory!#BLRvBEN #SuperhitPanga #vivoProKabaddi pic.twitter.com/CTPSUR5mgd
ಕೊನೆಯ ನಿಮಿಷದಲ್ಲಿ 33-33 ಅಂಕಗಳ ಸಮಬಲ ಇದ್ದಾಗ ಡಾಂಗ್ ಜಿಯೋನ್ ಲೀ 2 ಅಂಕ ಪಡೆದು ಬುಲ್ಸ್ ಮುನ್ನಡೆಯನ್ನು 35-33ಕ್ಕೆ ಹೆಚ್ಚಿಸಿ ಬುಲ್ಸ್ಗೆ ಟರ್ನಿಂಗ್ ಪಾಯಿಂಟ್ ತಂದುಕೊಟ್ಟರು. ನಂತರ ಬೆಂಗಾಲ್ ಮಣೀಂದರ್ ಸಿಂಗ್ ಒಂದು ಅಂಕ ಪಡೆದು 35-34ಕ್ಕೆ ಅಂತರವನ್ನು ತಗ್ಗಿಸಿದರೆ, ಮತ್ತೆ ಪವನ್ ಒಂದು ಅಂಕ ಪಡೆದು 2 ಅಂಕ ಲೀಡ್ಗೆ ತಂದು ನಿಲ್ಲಿಸಿದರು. ಪಂದ್ಯದ ಕೊನೆಯ ರೈಡಿಂಗ್ನಲ್ಲಿ ಬೆಂಗಳೂರಿನ ಅನುಭವಿ ಡಿಫೆಂಡರ್ ಮಹೇಂದರ್ ಸಿಂಗ್ ತಾವಾಗಿಯೇ ಶರಣಾಗಿ ಒಂದು ಅಂಕವನ್ನು ಮಾತ್ರ ಬಿಟ್ಟುಕೊಟ್ಟು 36-35ರಲ್ಲಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
ಬೆಂಗಳೂರು ಪರ ರೈಡಿಂಗ್ನಲ್ಲಿ ನಾಯಕ ಪವನ್ ಕುಮಾರ್ ಶೆರಾವತ್ 15, ಚಂದ್ರನ್ ರಂಜಿತ್ 6 ಅಂಕ ಪಡೆದರೆ, ಡಿಫೆಂಡಿಂಗ್ನಲ್ಲಿ ಮಹೇಂದರ್ ಸಿಂಗ್ , ಅಮನ್ ತಲಾ 2 ಅಂಕ ಪಡೆದು ಉತ್ತಮ ಪ್ರದರ್ಶನ ತೋರಿದರು. ಬೆಂಗಾಲ್ ವಾರಿಯರ್ ಪರ ರೈಡರ್ ಮಣೀಂದರ್ ಸಿಂಗ್ 17, ಆಲ್ರೌಂಡರ್ ಇಸ್ಮಾಯಿಲ್ ನಬೀಬಕ್ಷ್ 8 ಅಂಕ ಪಡೆದು ಮಿಂಚಿದರು.
ಮತ್ತೊಂದು ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಮತ್ತು ಗುಜರಾತ್ ಜೈಂಟ್ಸ್ 24-24 ರಲ್ಲಿ ಸಮಬಲ ಸಾಧಿಸಿತು.
ಇದನ್ನೂ ಓದಿ:Ind vs SA Test: ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಶತಕ ಸಿಡಿಸಿ ಅಬ್ಬರಿಸಿದ ಕನ್ನಡಿಗ ರಾಹುಲ್