ETV Bharat / sports

ಯು ಮುಂಬಾ ವಿರುದ್ಧ ರೋಚಕ ಜಯ ಸಾಧಿಸಿ ಫೈನಲ್ ಪ್ರವೇಶಿಸಿದ ಬೆಂಗಾಲ್​ ವಾರಿಯರ್ಸ್​ - ಫೈನಲ್​ ಪ್ರವೇಶಿಸಿದ ಬೆಂಗಾಲ್​ ವಾರಿಯರ್ಸ್

7ನೇ ಸೀಸನ್​ನ ಪ್ರೋ ಕಬಡ್ಡಿ ಲೀಗ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೋಡಿರುವ ಬೆಂಗಾಲ್​ ವಾರಿಯರ್ಸ್​ ತಂಡ ಸ್ಟಾರ್​ ರೈಡರ್​ ಮಣೀಂದರ್​ ಸಿಂಗ್​ ಅನುಪಸ್ಥಿತಿಯಲ್ಲಿಯೂ 37-35 ರ ಅಂತರದಲ್ಲಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ.

Bengal Warriors vs U Mumba
author img

By

Published : Oct 16, 2019, 10:53 PM IST

ಅಹ್ಮದಾಬಾದ್: ಕರ್ನಾಟಕದ ಆಟಗಾರರ ದಂಡನ್ನೇ ಹೊಂದಿರುವ ಬೆಂಗಾಲ್​ ವಾರಿಯರ್ಸ್ ತಂಡ​ ಯು ಮುಂಬಾ ತಂಡವನ್ನು ಬಗ್ಗುಬಡಿದು ಫೈನಲ್​ ಪ್ರವೇಶಿಸಿದೆ.

7ನೇ ಸೀಸನ್​ನ ಪ್ರೋ ಕಬಡ್ಡಿ ಲೀಗ್​ನಲ್ಲಿ ಅತ್ಯತ್ತಮ ಪ್ರದರ್ಶನ ನೋಡಿರುವ ಬೆಂಗಾಲ್​ ವಾರಿಯರ್ಸ್​ ತಂಡ ಸ್ಟಾರ್​ ರೈಡರ್​ ಮಣೀಂದರ್​ ಸಿಂಗ್​ ಅನುಪಸ್ಥಿತಿಯಲ್ಲಿಯೂ 37-35 ರ ಅಂತರದಲ್ಲಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ.

ಎರಡೂ ತಂಡಗಳು ಉತ್ತಮ ಆರಂಭ ಪಡೆದವೂ . ಆದರೆ, ಮೊದಲಾರ್ಧದ ಅಂತ್ಯದ ವೇಳೆಗೆ ಚುರುಕಾಗಿ ಆಡಿದ ಬೆಂಗಾಲ್​ ಮುಂಬೈ ತಂಡವನ್ನು ಆಲೌಟ್​ ಮಾಡುವ ಮೂಲಕ 18-12 ರಲ್ಲಿ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲೂ ಮುಂಬೈ ತಂಡವನ್ನು ಒಮ್ಮೆ ಆಲೌಟ್​ ಮಾಡಿ ಕೊನೆಯ 5 ನಿಮಿಷದಲ್ಲಿ 30-20 ಕ್ಕೆ ಮುನ್ನಡೆ ಹೆಚ್ಚಿಸಿಕೊಂಡಿತ್ತು.

ಆದರೆ, ಮುಂಬೈನ ಸಬ್​ಸ್ಟಿಟ್ಯೂಟ್ ರೈಡರ್​ ಸೂಪರ್​ ರೈಡ್​ ಮಾಡಿ 4 ಅಂಕ ಸಂಪಾದಿಸಿ ಬೆಂಗಾಲ್​ ವಾರಿಯರ್ಸ್​ ಆಲೌಟ್​ ಆಗುವಂತೆ ಮಾಡಿದ್ದಲ್ಲದೆ ಹಿನ್ನಡೆ ಅಂತರವನ್ನು 29-33ಕ್ಕೆ ತಗ್ಗಿಸಿದರು.

ಕೊನೆ ಎರಡು ನಿಮಿಷದಲ್ಲಿ ಗೆಲುವು:

ಕೊನೆ ಎರಡು ನಿಮಿಷದ ವೇಳೆಗೆ ಎರಡು ತಂಡಗಳು 35-35 ಅಂಕಗಳಿಸಿದ್ದವು. ಈ ವೇಳೆ, ಜಾಣತನದ ಆಟವಾಡಿದ ಬೆಂಗಾಲ್​ ಖಾಲಿ ರೈಡ್​ ಮಾಡಿ ಎದುರಾಳಿಗೆ ರೈಡರ್​ಗಳಾದ ಅಭಿಷೇಕ್​ ಸಿಂಗ್ ಹಾಗೂ ಅರ್ಜುನ್​ ದೇಶ್​ವಲ್​ ಅವರನ್ನು ಟ್ಯಾಕಲ್​ ಮಾಡುವ ಮೂಲಕ 2 ಅಂಕಗಳ ರೋಚಕ ಗೆಲುವು ದಾಖಲಸಿತು.​

ಬೆಂಗಾಲ್​ ಪರ ಸುಕೇಶ್ ಹೆಗ್ಡೆ 8, ಮೊಹಮ್ಮದ್​ ನಬೀಬಕ್ಷ್​ 5, ಕೆ.ಪ್ರಪಂಜನ್​ 4, ರಿಂಕು ನರ್ವಾಲ್​ 4, ಜೀವಾ ಕುಮಾರ್​ 3, ಬಲ್ದೇವ್​ ಸಿಂಗ್​ 2 ಹಾಗೂ ಸೌರಭ್​ 2 ಅಂಕ ಸಂಪಾದಿಸಿದರು.

ಮುಂಬೈ ಪರ ಅಭಿಷೇಕ್​ ಸಿಂಗ್​ 11, ಸಂದೀಪ್​ ನರ್ವಾಲ್​ 5, ಅಜಿಂಕ್ಯಾ ಕಪ್ರೆ 5, ಅರ್ಜುನ್​ ದೇಶ್ವಲ್​ 4, ಸುರಿಂದ್​ ಸಿಂಗ್​ 4, ಅತುಲ್​, ಫಜಲ್​ ತಲಾ 1 ಅಂಕ ಪಡೆದು ಉತ್ತಮ ಪೈಪೋಟಿ ನೀಡಿದರು. ತಂಡದ ನಾಯಕ ಫಜಲ್​ ಅಟ್ರಾಚಲಿ ಡಿಫೆಂಡಿಂಗ್​ನಲ್ಲಿ ವಿಫಲರಾಗಿದ್ದೇ ತಂಡದ ಸೋಲಿಗೆ ಕಾರಣವಾಯಿತು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.