ETV Bharat / sports

ಬ್ರೆಜಿಲ್​ನಲ್ಲಿ ನಡೆದ ಕಿವುಡರ ಒಲಿಂಪಿಕ್ಸ್​ನಲ್ಲಿ ಬಥಿಂಡಾದ ಕುವರಿ ಶ್ರೇಯಾಗೆ ಸ್ವರ್ಣ ಪದಕ - ವಿಕಲಚೇತನ ಆಟಗಾರ್ತಿ

ಭಾರತ ತಂಡಕ್ಕೆ ಆಯ್ಕೆಯಾಗಿದ್ದ ಪಂಜಾಬ್​ ರಾಜ್ಯದ ಏಕೈಕ ವಿಕಲಚೇತನ ಆಟಗಾರ್ತಿ ಶ್ರೇಯಾ ಕಿವುಡರ ಒಲಿಂಪಿಕ್ಸ್​ನಲ್ಲಿ ಬ್ಯಾಡ್ಮಿಂಟನ್​ನಲ್ಲಿ ದೇಶವನ್ನು ಪ್ರತಿನಿಧಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ..

Gold medal winner Shreya
ಸ್ವರ್ಣ ಪದಕ ವಿಜೇತೆ ಶ್ರೇಯಾ
author img

By

Published : May 15, 2022, 1:02 PM IST

ಬಥಿಂಡಾ (ಪಂಜಾಬ್​) : ಬ್ರೆಜಿಲ್​ನಲ್ಲಿ ನಡೆದ ಕಿವುಡರ ಒಲಿಂಪಿಕ್ ಗೇಮ್ಸ್​ನಲ್ಲಿ ಬಥಿಂಡಾದ ಶ್ರೇಯಾ ಬ್ಯಾಡ್ಮಿಂಟನ್ ತಂಡದಲ್ಲಿ ಆಡುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. ಶ್ರೇಯಾ ಅವರು ಭಾರತ ತಂಡಕ್ಕೆ ಆಯ್ಕೆಯಾಗಿದ್ದ ಪಂಜಾಬ್​ ರಾಜ್ಯದ ಏಕೈಕ ವಿಕಲಚೇತನ ಆಟಗಾರ್ತಿ. ಮೇ 2ರಿಂದ 4ರವರೆಗೆ ನಡೆದ ಪಂದ್ಯಗಳಲ್ಲಿ ಶ್ರೇಯಾ ಭಾಗವಹಿಸಿದ್ದು, ಏಪ್ರಿಲ್​ 27ರಂದು ಡೆಫ್​ ಒಲಿಂಪಿಕ್ಸ್​ನಲ್ಲಿ ಭಾಗವಹಿಸಲು ಬ್ರೆಜಿಲ್​ಗೆ ತೆರಳಿದ್ದರು.

ಶ್ರೇಯಾ ಅವರು ಬಾಲ್ಯದಿಂದಲೂ ಕಿವುಡರಾಗಿದ್ದಾರೆ. ಆಕೆಗೆ ಪ್ರಾರಂಭದಿಂದಲೂ ಬ್ಯಾಡ್ಮಿಂಟನ್​ ಆಟದಲ್ಲಿ ಒಲವು ಇತ್ತು. 7ನೇ ವಯಸ್ಸಿನಿಂದಲೇ ಈಕೆ ಬ್ಯಾಡ್ಮಿಂಟನ್​ ಆಡಲು ಪ್ರಾರಂಭಿಸಿದ್ದಾರೆ ಎಂದು ಶ್ರೇಯಾ ತಂದೆ ದೇವಿಂದರ್ ಕುಮಾರ್ ಸಿಂಗ್ಲಾ ಹೇಳಿದರು.

ಬ್ರೆಜಿಲ್​ನಲ್ಲಿ ನಡೆದ ಕಿವುಡರ ಒಲಿಂಪಿಕ್ಸ್​ನಲ್ಲಿ ಬಥಿಂಡಾದ ಕುವರಿ ಶ್ರೇಯಾಗೆ ಸ್ವರ್ಣ ಪದಕ

ಮಗಳಿಗೆ ಬ್ಯಾಡ್ಮಿಂಟನ್ ಬಗ್ಗೆ ಇದ್ದ ಆಸಕ್ತಿಯನ್ನು ಕಂಡು ತಂದೆ ತರಬೇತಿ ನೀಡಲು ನಿರ್ಧರಿಸಿದ್ದರು. ಭಾರತದಿಂದ ನಾಲ್ವರು ಮಹಿಳಾ ಅಥ್ಲೀಟ್‌ಗಳು ಕಿವುಡರ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದು, ಅವರಲ್ಲಿ ಬಥಿಂಡಾದಿಂದ ಒಬ್ಬರು, ಮಧ್ಯಪ್ರದೇಶದಿಂದ ಒಬ್ಬರು, ಉತ್ತರಪ್ರದೇಶದಿಂದ ಒಬ್ಬರು ಮತ್ತು ತಮಿಳುನಾಡಿನಿಂದ ಒಬ್ಬರು ಆಯ್ಕೆಯಾದವರು.

ಇದನ್ನೂ ಓದಿ: ಸುನಿಲ್ ಗವಾಸ್ಕರ್ ಟೆಸ್ಟ್​ ಡೆಬ್ಯು ಸಂಭ್ರಮಕ್ಕೆ 50 ವರ್ಷ.. ಅಮೆರಿಕದಲ್ಲಿ ಆಚರಣೆಗೆ ನಿರ್ಧಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.