ETV Bharat / sports

ಆಸ್ಟ್ರೇಲಿಯಾ ಓಪನ್ ಟೆನಿಸ್​ಗೆ ಹೊಸ ಒಡತಿ: ಬೆಲಾರಸ್‌ನ ಅರಿನಾ ಸಬಲೆಂಕಾ ಚಾಂಪಿಯನ್​ - Womens Singles title

ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್‌ನಲ್ಲಿ ಬೆಲಾರಸ್​ನ ಅರಿನಾ ಸಬಲೆಂಕಾ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ. ಕಜಾಕಸ್ಥಾನದ ಎಲೈನಾ ರಬೈಕನಾಗೆ ಎದುರು ಗೆಲ್ಲುವ ಮೂಲಕ ವೃತ್ತಿ ಜೀವನದ ಮೊದಲ ಪ್ರಶಸ್ತಿಯನ್ನು ಎತ್ತಿ ಹಿಡಿದರು.

aryna sabalenka wins australian open
ಅರಿನಾ ಸಬಲೆಂಕಾ ಚಾಂಪಿಯನ್​
author img

By

Published : Jan 29, 2023, 7:14 AM IST

ಮೆಲ್ಬರ್ನ್​: ಆಸ್ಟ್ರೇಲಿಯನ್ ಓಪನ್ ಟೆನಿಸ್‌ನಲ್ಲಿ ಹೊಸ ತಾರೆ ಉದಯಿಸಿದೆ. ಶನಿವಾರ ನಡೆದ ಫೈನಲ್​ ಪಂದ್ಯದಲ್ಲಿ ಬೆಲಾರಸ್​ನ ಅರಿನಾ ಸಬಲೆಂಕಾ ಚಾಂಪಿಯನ್​ ಆಗುವ ಮೂಲಕ ಸಿಂಗಲ್ಸ್​​ ವಿಭಾಗದಲ್ಲಿ ಮೊದಲ ಗ್ರಾನ್​ಸ್ಲಾಂ ಪ್ರಶಸ್ತಿ ಜಯಿಸಿದರು. ಹಾಲಿ ವಿಂಬಲ್ಡನ್​ ಚಾಂಪಿಯನ್​, ಕಜಾಕಸ್ಥಾನದ ಎಲೈನಾ ರಬೈಕನಾ ಅವರು 4-6, 6-3, 6-4 ಸೆಟ್​ಗಳಿಂದ ತನಗಿಂತ ಒಂದು ವರ್ಷ ಹಿರಿಯ ಆಟಗಾರ್ತಿ ಅರಿನಾ ಸೆಬಲಂಕಾ ವಿರುದ್ಧ ಸೋಲು ಕಂಡರು. ಈ ಮೂಲಕ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡರು.

ಚೊಚ್ಚಲ ಆಸ್ಟ್ರೇಲಿಯಾ ಓಪನ್​ ಪ್ರಶಸ್ತಿ ಗೆಲುವಿಗಾಗಿ ಯುವ ಆಟಗಾರ್ತಿಯರ ಮಧ್ಯೆ ಜಿದ್ದಾಜಿದ್ದಿ ನಡೆಯಿತು. 2 ಗಂಟೆ 28 ನಿಮಿಷಗಳ ಕಾಲ ನಡೆದ ಸೆಣಸಾಟದಲ್ಲಿ ಅಂತಿಮ ಗೆಲುವು ಅರಿನಾ ಪಾಲಾಯಿತು. ಬಲಿಷ್ಠ ಏಸ್​ಗಳ ಮೂಲಕ ಮೈದಾನದಲ್ಲಿ ಪಾರಮ್ಯ ಮೆರೆದ ಅರಿನಾ, ಎರಡನೇ ಗ್ರಾನ್​ಸ್ಲಾಂ ಮೇಲೆ ಕಣ್ಣಿಟ್ಟಿದ್ದ ರಬೈಕನಾಗೆ ಸವಾಲಾದರು. ಮೊದಲ ಸೆಟ್​ ಅನ್ನು 4-6 ರಿಂದ ಗೆಲ್ಲುವ ಮೂಲಕ ರಬೈಕನಾ ಶುಭಾರಂಭ ಮಾಡಿದರು.

ಈ ಸೆಟ್​ ಸೋತರೂ ಪಟ್ಟು ಬಿಡದ ಸಬಲೆಂಕಾ 2ನೇ ಸೆಟ್​ನಲ್ಲಿ ಪುಟಿದೆದ್ದು 6-3 ರಲ್ಲಿ ಗೆದ್ದರು. ಬಳಿಕ ನಡೆದ ನಿರ್ಣಾಯಕ, ಅಂತಿಮ ಸುತ್ತಿನಲ್ಲಿ ಇಬ್ಬರೂ ತಮ್ಮ ತೋಳ್ಬಲ ಪ್ರದರ್ಶಿಸಿ ಸಮಬಲ ಸಾಧಿಸಿದರು. ಒಂದು ಹಂತದಲ್ಲಿ ಪಂದ್ಯ ಟ್ರೈಬ್ರೇಕರ್​ಗೆ ತಲುಪಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ರಬೈಕನಾರ ಸರ್ವ್​ ಮುರಿದ ಸಬಲೆಂಕಾ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಕೊನೆಯಲ್ಲಿ, ಎಲೈನಾ ರಬೈಕನಾ ನಡೆಸಿದ ಹೋರಾಟ ಫಲ ನೀಡಲಿಲ್ಲ. ಇದರಿಂದ 6-4 ಸೆಟ್​ಗಳಲ್ಲಿ ಗೆಲ್ಲುವ ಮೂಲಕ ಅರಿನಾ ಸಬಲೆಂಕಾ ಹೊಸ ಚಾಂಪಿಯನ್​ ಆಗಿದ್ದಲ್ಲದೇ, ಚೊಚ್ಚಲ ಗ್ರಾನ್​​ಸ್ಲಾಂಗೆ ಮುತ್ತಿಟ್ಟರು. ಗೆದ್ದ ಖುಷಿಯಲ್ಲಿ ಮೈದಾನದಲ್ಲೇ ಆನಂದಭಾಷ್ಪ ಸುರಿಸಿದರು.

ಮುಗಿದ ಸೆಮಿಫೈನಲ್​ ಕಂಟಕ: ಇದಕ್ಕೂ ಮೊದಲು ಅರಿನಾ ಸಬಲೆಂಕಾ ಗ್ರಾನ್​ಸ್ಲಾಂಗಳಲ್ಲಿ ಮೂರು ಬಾರಿ ಸೆಮಿಫೈನಲ್​ ತಲುಪಿ ಸೋಲು ಕಂಡು ಪ್ರಶಸ್ತಿಯಿಂದ ವಂಚಿತರಾಗಿದ್ದರು. ಈ ಬಾರಿ ಎಲ್ಲ ಸವಾಲುಗಳನ್ನು ಮೀರಿದ ಸಬಲೆಂಕಾ ಆಸ್ಟ್ರೇಲಿಯನ್​ ಓಪನ್​ನ ಸೆಮೀಸ್​ನಲ್ಲಿ ವಿಕ್ಟೋರಿಯಾ ಅಜರೆಂಕಾ ವಿರುದ್ಧ ಪಾರಮ್ಯ ಮೆರೆದು 7-6, 6-3 ರಲ್ಲಿ ಗೆದ್ದು ಅಂತಿಮ ಸುತ್ತು ಪ್ರವೇಶಿಸಿದ್ದರು. ಗುಂಪು ಹಂತ ಮತ್ತು ಕ್ವಾರ್ಟರ್​ಫೈನಲ್​ನಲ್ಲೂ ಸಬಲೆಂಕಾ 2 ಸೆಟ್​ಗಿಂತಲೂ ಹೆಚ್ಚು ಅವಧಿಗೆ ಆಟವನ್ನು ಕೊಂಡೊಯ್ದಿಲ್ಲ. 2 ಸೆಟ್​ಗಳಲ್ಲೇ ಪಂದ್ಯ ಗೆದ್ದು ಚಾಂಪಿಯನ್​ ಆಟವಾಡಿದ್ದರು.

ಪ್ರಶಸ್ತಿ ಮೊತ್ತ: ಆಸ್ಟ್ರೇಲಿಯನ್​ ಚಾಂಪಿಯನ್​ ಆಗಿ ಹೊರಹೊಮ್ಮಿದ ಅರಿನಾ ಸಬಲೆಂಕಾ 17.34 ಕೋಟಿ ರೂ. ಬಹುಮಾನದ ಮೊತ್ತ ಪಡೆದರು. ರನ್ನರ್​ ಅಪ್​ ಆದ ಎಲೈನಾ ರಬೈಕೆನಾ 9.47 ಕೋಟಿ ರೂ. ಪ್ರಶಸ್ತಿ ಮೊತ್ತ ಗಿಟ್ಟಿಸಿಕೊಂಡರು. ಚಾಂಪಿಯನ್​ ಆದ ಬಳಿಕ ವಿಜಯೋತ್ಸವದ ಮಾತನಾಡಿದ ಸಬಲೆಂಕಾ, "ಈ ಗೆಲುವು ತುಂಬಾ ಖುಷಿ ತಂದಿದೆ. ಟ್ರೋಫಿಯ ಮೇಲೆ ದಿಗ್ಗಜರ ಹೆಸರಿನ ಜೊತೆಗೆ ನನ್ನ ಹೆಸರೂ ಸೇರುತ್ತಿರುವುದು ಹೆಮ್ಮೆಯಾಗಿದೆ. ಇದೊಂದು ನಂಬಲಾಗದ ಕ್ಷಣ. ಎಲೈನಾ ವಿರುದ್ಧ ಗೆಲುವು ಸಾಧಿಸಿದ ಪಂದ್ಯ ನನ್ನ ವೃತ್ತಿ ಜೀವನದ ಶ್ರೇಷ್ಠ ಪಂದ್ಯ ಎಂದೇ ಭಾವಿಸುವೆ" ಎಂದು ಸಂಭ್ರಮಿಸಿದರು.

ಇಂದು ಪುರುಷರ ಫೈನಲ್​ ಫೈಟ್​: ಪುರುಷರ ಸಿಂಗಲ್ಸ್‌ನ ಫೈನಲ್​ ಪಂದ್ಯ ಇಂದು ನಡೆಯಲಿದೆ. 4ನೇ ಶ್ರೇಯಾಂಕದ ನೊವಾಕ್ ಜೋಕೊವಿಚ್​ ಮತ್ತು ಮೂರನೇ ಶ್ರೇಯಾಂಕದ ಸ್ಟೆಫಾನೊಸ್ ಸಿಟ್ಸಿಪಾಸ್ ಮಧ್ಯೆ ಪ್ರಶಸ್ತಿಗಾಗಿ ಸೆಣಸಾಟ ನಡೆಯಲಿದೆ. ಸರ್ಬಿಯಾದ ಜೋಕೊವಿಚ್​​ ಅವರು ಸೆಮಿಫೈನಲ್​ನಲ್ಲಿ ಶ್ರೇಯಾಂಕರಹಿತ ಅಮೆರಿಕದ ಆಟಗಾರ ಟಾಮಿ ಪಾಲ್ ಎದುರು 7-5, 6-1, 6-2 ಸೆಟ್‌ಗಳಿಂದ ಸೋಲಿಸಿ ಫೈನಲ್‌ನಗೆ ಲಗ್ಗೆ ಇಟ್ಟಿದ್ದಾರೆ. 21 ಗ್ರಾನ್​ಸ್ಲಾಂಗಳ ಒಡೆಯ ಜೋಕೊವಿಚ್​ ಇಲ್ಲಿ ಗೆದ್ದಲ್ಲಿ 22 ಪ್ರಶಸ್ತಿ ಗೆದ್ದಿರುವ ರಾಫೆಲ್​ ನಡಾಲ್​ ದಾಖಲೆ ಸರಿಗಟ್ಟಲಿದ್ದಾರೆ. ಆಸ್ಟ್ರೇಲಿಯನ್​ ಓಪನ್​ನಲ್ಲಿ ತಮ್ಮದೇ ರೀತಿಯ ಛಾಪು ಮೂಡಿಸಿರುವ ನೊವಾಕ್​ 10ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಮೂರನೇ ಶ್ರೇಯಾಂಕದ ಗ್ರೀಸ್​ನ ಸ್ಟೆಫಾನೊಸ್ ಸಿಟ್ಸಿಪಾಸ್ ಮೊದಲ ಗ್ರಾನ್​ಸ್ಲಾಂ ಗೆದ್ದು ಇತಿಹಾಸ ರಚಿಸುವ ತವಕದಲ್ಲಿದ್ದಾರೆ.

ಇದನ್ನೂ ಓದಿ: ನ್ಯೂಜಿಲ್ಯಾಂಡ್​ ವಿರುದ್ಧದ ಸೋಲಿಗೆ ಮಾರಕವಾದ ಕೊನೆಯ ಓವರ್: ಸುಂದರ್​ ಹೊಗಳಿದ ಪಾಂಡ್ಯ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.