ETV Bharat / sports

ಸೆಮಿಫೈನಲ್​ ಪ್ರವೇಶಿಸಿ ವಿಶ್ವದಾಖಲೆಯ 21ನೇ ಗ್ರ್ಯಾಂಡ್​ಸ್ಲಾಮ್​ಗೆ ಮತ್ತಷ್ಟು ಹತ್ತಿರವಾದ ನಡಾಲ್.. - ಸೆಮಿಫೈನಲ್ ಪ್ರವೇಶಿಸಿದ ರಾಫೆಲ್ ನಡಾಲ್

2009ರ ಚಾಂಪಿಯನ್​ ನಡಾಲ್​ ಮೊದಲೆರಡು ಸೆಟ್​​ಗಳಲ್ಲಿ ವಿಶ್ವಾಸದಿಂದ ಆಡಿ ಎರಡರಲ್ಲೂ ಗೆಲುವು ಸಾಧಿಸಿದ್ದರಿಂದ ಏಕಪಕ್ಷೀಯವಾಗಿ ಪಂದ್ಯವನ್ನು ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕೆನಡಿಯನ್​ ಮರು ಹೋರಾಟ ನಡೆಸಿ 3 ಮತ್ತು 4 ಸೆಟ್​ಗಳನ್ನು ಗೆದ್ದುಕೊಂಡರು..

Nadal beats Shapovalov in five sets to enter semi-finals
ರಾಫಲ್ ನಡಾಲ್​ 21ನೇ ಗ್ರ್ಯಾಂಡ್​ ಸ್ಲಾಮ್
author img

By

Published : Jan 25, 2022, 4:09 PM IST

ಮೆಲ್ಬೋರ್ನ್​ : 20 ಬಾರಿಯ ಗ್ರ್ಯಾಂಡ್​​ ಸ್ಲಾಮ್​ ಚಾಂಪಿಯನ್​ ರಾಫೆಲ್ ನಡಾಲ್​ 5 ಸೆಟ್​ಗಳ ರೋಚಕ ಹೋರಾಟದಲ್ಲಿ 14ನೇ ಶ್ರೇಯಾಂಕದ ಕೆನಡಾದ ಡೆನಿಸ್​ ಶಪೊವಲೋವ್ ವಿರುದ್ಧ ಜಯ ಸಾಧಿಸಿ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದ್ದಾರೆ.

4 ಗಂಟೆ 8 ನಿಮಿಷಗಳ ಮ್ಯಾರಾಥಾನ್​ ಹೋರಾಟದಲ್ಲಿ ಸ್ಪೇನ್​ ಸ್ಟಾರ್​ ನಡಾಲ್​ 6-3,6-4, 4-6,3-6,6-3ರ ರೋಚಕ ಹಣಾಹಣಿಯಲ್ಲಿ ಶಪೊವಲೋವ್ ವಿರುದ್ಧ ಗೆದ್ದು ಬೀಗಿದರು.

2009ರ ಚಾಂಪಿಯನ್​ ನಡಾಲ್​ ಮೊದಲೆರಡು ಸೆಟ್​​ಗಳಲ್ಲಿ ವಿಶ್ವಾಸದಿಂದ ಆಡಿ ಎರಡರಲ್ಲೂ ಗೆಲುವು ಸಾಧಿಸಿದ್ದರಿಂದ ಏಕಪಕ್ಷೀಯವಾಗಿ ಪಂದ್ಯವನ್ನು ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕೆನಡಿಯನ್​ ಮರು ಹೋರಾಟ ನಡೆಸಿ 3 ಮತ್ತು 4 ಸೆಟ್​ಗಳನ್ನು ಗೆದ್ದುಕೊಂಡರು.

ಇದನ್ನೂ ಓದಿ:ಐಪಿಎಲ್​ನ ದುಬಾರಿ ಫ್ರಾಂಚೈಸಿಗೆ 'ಲಖನೌ ಸೂಪರ್​ ಜೇಂಟ್ಸ್​' ಎಂದು ನಾಮಕರಣ

ಆದರೆ, ಕೊನೆಯ ಸೆಟ್​ನಲ್ಲಿ ಆಕ್ರಮಣಕಾರಿ ಪ್ರದರ್ಶನ ತೋರಿದ ನಡಾಲ್ ಡಬಲ್​ ಫಾಲ್ಟ್​ ಹೊರೆತಾಗಿಯೂ ಮೊದಲ ಸರ್ವ್​ ಉಳಿಸಿಕೊಂಡಿದ್ದಲ್ಲದೆ, ನಂತರದ ಗೇಮ್​​ನಲ್ಲಿ ಶಪೊವಲೋವ್ ಸರ್ವೀಸ್ ಬ್ರೇಕ್ ಮಾಡಿ 2-0ಯಲ್ಲಿ ಮುನ್ನಡೆ ಪಡೆದರು.

ಕೊನೆವರೆಗೂ ತಮ್ಮ ಸರ್ವ್​ ಉಳಿಸಿಕೊಂಡ ನಡಾಲ್, 6-3ರಲ್ಲಿ ಗೆದ್ದು ಬೀಗಿದರು. ರಾಫೆಲ್ ನಡಾಲ್ ಸೆಮಿಫೈನಲ್ಸ್​ನಲ್ಲಿ ಇಟಲಿಯ ಮ್ಯಾಟಿಯೊ ಬೆರೆಟ್ಟಿನಿ ಅಥವಾ ಗೇಲ್ ಮಾನ್ಫಿಲ್ಸ್ ಅವರ ನಡುವೆ ಗೆದ್ದವರನ್ನ ಎದುರಿಸಲಿದ್ದಾರೆ.

ಸೆಮಿಗೆ ಎಂಟ್ರಿಕೊಟ್ಟ ನಂಬರ್​ 1 ಆ್ಯಶ್ಲೇ ಬಾರ್ಟಿ : ಮಹಿಳೆಯರ ಸಿಂಗಲ್ಸ್​ ವಿಭಾಗದಲ್ಲಿ ವಿಶ್ವದ ನಂಬರ್​ 1 ಆಟಗಾರ್ತಿ ಆಸ್ಟ್ರೇಲಿಯಾದ ಬಾರ್ಟಿ 21ನೇ ಶ್ರೇಯಾಂಕದ ಅಮೆರಿಕಾದ ಜೆಸ್ಸಿಕಾ ಪೆಗುಲಾ ವಿರುದ್ಧ 6-2,6-0ಯಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದರು.

2021ರ ವಿಂಬಲ್ಡನ್ ಚಾಂಪಿಯನ್ ಈ ಪ್ರಶಸ್ತಿಯನ್ನು ಗೆದ್ದರೆ 1978ರ ನಂತರ ಆಸ್ಟ್ರೇಲಿಯನ್ ಓಪನ್​ ಗೆದ್ದ ಆಸ್ಟ್ರೇಲಿಯನ್ ಆಟಗಾರ್ತಿ ಎಂಬ ಶ್ರೇಯಕ್ಕೆ ಪಾತ್ರರಾಗಲಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.