ETV Bharat / sports

Australian open 2022: ಮೊದಲ 2 ಸೆಟ್​ ಸೋತರೂ, ಪಂದ್ಯ ಗೆದ್ದು ಸೆಮಿಫೈನಲ್ ಪ್ರವೇಶಿಸಿದ ಮೆಡ್ವೆಡೆವ್

ನೊವಾಕ್ ಜೊಕೊವಿಕ್​ ಅನುಪಸ್ಥಿತಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವ ಮೆಡ್ವೆಡೆವ್​ ಕೆನಡಾದ 9ನೇ ಶ್ರೇಯಾಂಕದ ಆಟಗಾರನ ವಿರುದ್ಧ 6-7,3-6,7-6. 7-5, 6-4ರ ಮ್ಯಾರಥಾನ್ ಪಂದ್ಯದಲ್ಲಿ ಗೆದ್ದು ಬೀಗಿದರು.

Australian Open:Medvedev beats Auger Aliassime enter to semifinal
ಡ್ಯಾನಿಯಲ್ ಮೆಡ್ವೆಡೆವ್
author img

By

Published : Jan 26, 2022, 9:05 PM IST

ಮೆಲ್ಬೋರ್ನ್​: ವಿಶ್ವದ 2ನೇ ಶ್ರೇಯಾಂಕದ ರಷ್ಯಾದ ಡ್ಯಾನಿಯಲ್ ಮೆಡ್ವೆಡೆವ್ ಬುಧವಾರ ನಡೆದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ 21 ವರ್ಷದ ಕೆನಡಾದ ಫೆಲಿಕ್ಸ್ ಆಗರ್ ಅಲಿಯಾಸ್ಸಿಮ್​ ವಿರುದ್ಧ 5 ಸೆಟ್​ಗಳ ರೋಚಕ ಪಂದ್ಯದಲ್ಲಿ ಗೆಲುವು ಸಾಧಿಸಿ ಆಸ್ಟ್ರೇಲಿಯನ್ ಓಪನ್​ನಲ್ಲಿ ಸೆಮಿಫೈನಲ್​ ಪ್ರವೇಶಿಸಿದರು.

ನೊವಾಕ್ ಜೊಕೊವಿಕ್​ ಅನುಪಸ್ಥಿತಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವ ಮೆಡ್ವೆಡೆವ್​ ಕೆನಡಾದ 9ನೇ ಶ್ರೇಯಾಂಕದ ಆಟಗಾರನ ವಿರುದ್ಧ 6-7,3-6,7-6. 7-5, 6-4ರ ಮ್ಯಾರಥಾನ್ ಪಂದ್ಯದಲ್ಲಿ ಗೆದ್ದು ಬೀಗಿದರು.

ರೋಡ್​ ಲೇವರ್​ ಅರೇನಾದಲ್ಲಿ ಮೊದಲೆರಡು ಸೆಟ್​ಗಳಲ್ಲಿ ಯುವ ಆಟಗಾರ ವಿರುದ್ಧ ಸೋಲು ಕಂಡ ಮೆಡ್ವೆಡೆವ್​ 3ನೇ ಸೆಟ್​ನಲ್ಲಿ ಪ್ರಬಲ ಹೋರಾಟ ನಡೆಸಿ ಟೈ ಬ್ರೇಕರ್​ನಲ್ಲಿ ಗೆಲುವು ಸಾಧಿಸಿದರು. 4ನೇ ಸೆಟ್​​ಅನ್ನು 7-5ರಿಂದ ಗೆದ್ದ ರಷ್ಯನ್​ ಸ್ಟಾರ್​ ಕೊನೆಯ ಸೆಟ್​ನಲ್ಲಿ ಮೊದಲ ಗೇಮ್​ನಲ್ಲೇ ಫೆಲಿಕ್ಸ್​ರ ಸರ್ವ್​ ಬ್ರೇಕ್​ ಮಾಡಿದ್ದಲ್ಲೆ 2ನೇ ಗೇಮ್ ಗೆದ್ದು 2-0ಯಲ್ಲಿ ಮುನ್ನಡೆ ಸಾಧಿಸಿದರು. ಕೊನೆಯವರೆಗೂ ಸರ್ವ್​ ಉಳಿಸಿಕೊಂಡ ಅವರು 6-4ರಲ್ಲಿ ಗೆಲುವು ಸಾಧಿಸಿ ಸತತ 2ನೇ ವರ್ಷ ಸೆಮಿಫೈನಲ್ ಪ್ರವೇಶಿಸಿದರು.

ಇದನ್ನೂ ಓದಿ:ದೇವೇಂದ್ರ ಜಝಾರಿಯಾಗೆ ಪದ್ಮಭೂಷಣ.. ನೀರಜ್ ಚೋಪ್ರಾ ಸೇರಿ 7 ಕ್ರೀಡಾಪಟುಗಳಿಗೆ ಪದ್ಮಶ್ರೀ ಗರಿ

ಮತ್ತೊಂದು ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ 4ನೇ ಶ್ರೇಯಾಂಕದ ಗ್ರೀಕ್​ನ ಸ್ಟೆಫನೋಸ್​ ಸಿಟ್ಸಿಪಾಸ್​ 11ನೇ ಶ್ರೇಯಾಂಕದ ಇಟಾಲಿಯನ್​ ಜೆನ್ನಿಕ್ ಸಿನ್ನರ್ ವಿರುದ್ಧ 6-3 6-4, 6-2ರಲ್ಲಿ ಗೆಲುವು ಸಾಧಿಸಿದರು.

ಭಾನುವಾರ ನಡೆಯಲಿರುವ ಸೆಮಿಫೈನಲ್​ ಪಂದ್ಯದಲ್ಲಿ ಮೆಡ್ವೆಡೆವ್ ಮತ್ತು ಸಿಟ್ಸಿಪಾಸ್​ ಸೆಣಸಾಡಲಿದ್ದಾರೆ. ಶುಕ್ರವಾರ ಮೊದಲ ಸೆಮಿಫೈನಲ್ ನಡೆಯಲಿದ್ದು 20 ಗ್ರ್ಯಾಂಡ್​ ಸ್ಲಾಮ್ ವಿಜೇತ ರಾಫೆಲ್ ನಡಾಲ್ 7ನೇ ಶ್ರೇಯಾಂಕದ ಇಟಲಿಯ ಆಟಗಾರ ಮ್ಯಾಟಿಯೋ ಬೆರೆಟ್ಟಿನಿ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.