ಮ್ಯಾಂಚೆಸ್ಟರ್ : ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಆ್ಯಷಸ್ ಕ್ರಿಕೆಟ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವು ಮಳೆಯಿಂದಾಗಿ ಡ್ರಾ ಆಗಿದೆ. ಇಲ್ಲಿನ ಓಲ್ಡ್ ಟ್ರಾಫರ್ಡ್ನಲ್ಲಿ ನಡೆಯುತ್ತಿದ್ದ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿಗೆ 5 ವಿಕೆಟ್ಗಳ ಅಗತ್ಯವಿತ್ತು. ಆದರೆ ದಿನದಂತ್ಯದ ಪಂದ್ಯದಲ್ಲಿ ಮಳೆಯ ಆಟ ನಡೆದು ಆಸ್ಟ್ರೇಲಿಯಾ 2-1 ರಲ್ಲಿ ಸರಣಿ ಮುನ್ನಡೆ ಸಾಧಿಸಿತು. ಈ ಮೂಲಕ ಪ್ರತಿಷ್ಟಿತ ಆ್ಯಷಸ್ ಕಪ್ ಅನ್ನು ತನ್ನಲ್ಲೇ ಉಳಿಸಿಕೊಂಡಿತು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ, ಮೊದಲ ಇನ್ನಿಂಗ್ಸ್ನಲ್ಲಿ 317 ರನ್ ಗಳಿಸಿತ್ತು. ಆಸ್ಟ್ರೇಲಿಯಾ ಪರ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಉಸ್ಮಾನ್ ಖವಾಜ ಅಲ್ಪ ಮೊತ್ತಕ್ಕೆ ಕಟ್ಟುಬಿದ್ದರು. ಡೇವಿಡ್ ವಾರ್ನರ್ 3 ಬೌಂಡರಿಗಳೊಂದಿಗೆ 32 ರನ್ ಗಳಿಸಿ ಕ್ರಿಸ್ ವೋಕ್ಸ್ಗೆ ವಿಕೆಟ್ ಒಪ್ಪಿಸಿದರೆ, ಉಸ್ಮಾನ್ ಖವಾಜ ಕೇವಲ 3 ರನ್ ಗಳಿಸಿ ಸ್ಟುವರ್ಟ್ ಬ್ರಾಡ್ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು. ಬಳಿಕ ಬಂದ ಮಾರ್ನಸ್ 51 ರನ್ ಗಳಿಸಿ ಮೊಯಿನ್ ಅಲಿ ಎಸೆತದಲ್ಲಿ ಎಲ್ಬಿ ಆದರು. ಸ್ಟೀವ್ ಸ್ಮಿತ್ (41), ಟ್ರಾವಿಸ್ ಹೆಡ್ (48), ಮಾರ್ಷ್ (51) ರನ್ ಗಳಿಸಿ ತಂಡ ಅಲ್ಪ ಮೊತ್ತಕ್ಕೆ ಕುಸಿಯುವುದನ್ನು ತಡೆದರು.
-
The first draw of the Bazball era as Australia retain the #Ashes heading into the final Test of the series in London 💪#WTC25 | ENGvAUShttps://t.co/Yn2YM0K7jM
— ICC (@ICC) July 24, 2023 " class="align-text-top noRightClick twitterSection" data="
">The first draw of the Bazball era as Australia retain the #Ashes heading into the final Test of the series in London 💪#WTC25 | ENGvAUShttps://t.co/Yn2YM0K7jM
— ICC (@ICC) July 24, 2023The first draw of the Bazball era as Australia retain the #Ashes heading into the final Test of the series in London 💪#WTC25 | ENGvAUShttps://t.co/Yn2YM0K7jM
— ICC (@ICC) July 24, 2023
ಇನ್ನುಳಿದಂತೆ, ಗ್ರೀನ್ (16), ಅಲೆಕ್ಸ್ ಕ್ಯಾರಿ (20), ಮಿಚೆಲ್ ಸ್ಟಾರ್ಕ್ (36), ಪ್ಯಾಟ್ ಕಮಿನ್ಸ್(1), ಹೆಜಲ್ವುಡ್ (4) ರನ್ ಸೇರಿಸಿದರು. ಈ ಮೂಲಕ ಆಸ್ಟ್ರೇಲಿಯಾ 317 ರನ್ಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ 5 ವಿಕೆಟ್ ಪಡೆದರೆ, ಸ್ಟುವರ್ಟ್ ಬ್ರಾಡ್ 2 ವಿಕೆಟ್ ಕಬಳಿಸಿದರು. ಜೇಮ್ಸ್ ಆ್ಯಂಡರ್ಸನ್, ಮಾರ್ಕ್ ವುಡ್, ಮೋಯಿನ್ ಅಲಿ ತಲಾ 1 ವಿಕೆಟ್ ಪಡೆದರು.
ನಂತರ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡವು ಉತ್ತಮ ಆರಂಭ ಪಡೆಯಿತು. ಆರಂಭಿಕ ಆಟಗಾರ ಝಾಕ್ ಕ್ರಾಲಿ ಅವರ ಅದ್ಭುತ ಬ್ಯಾಟಿಂಗ್ನಿಂದ ಇಂಗ್ಲೆಂಡ್ 592 ರನ್ ಪೇರಿಸಿತು. ಕ್ರಾಲಿ 21 ಬೌಂಡರಿ ಮತ್ತು ಹಾಗೂ 3 ಸಿಕ್ಸರ್ನೊಂದಿಗೆ 189 ರನ್ ಚಚ್ಚಿದರು. ದ್ವಿಶತಕ ಹೊಸ್ತಿಲಲ್ಲಿ ಇರುವಾಗ ಕ್ಯಾಮರೂನ್ ಗ್ರೀನ್ ಅವರ ಬೌಲಿಂಗ್ ದಾಳಿ ಬೌಲ್ಡ್ ಆದರು. ಆರಂಭಿಕ ಆಟಗಾರ ಬೆನ್ ಡಕೆಟ್ 1 ರನ್ ಗಳಿಸಿ ಮಿಚೆಲ್ ಸ್ಟಾರ್ಕ್ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಮೊಯಿನ್ ಅಲಿ 7 ಬೌಂಡರಿಗಳೊಂದಿಗೆ 54 ರನ್, ಜೋ ರೂಟ್ (84), ಹ್ಯಾರಿ ಬ್ರೂಕ್ (61), ಬೆನ್ ಸ್ಟೋಕ್ಸ್(51), ಜಾನಿ ಬೇಸ್ಟೋ (99) ಅವರ ಅದ್ಭುತ ಶತಕ ವಂಚಿತ ಆಟದಿಂದ ಇಂಗ್ಲೆಂಡ್ 592 ರನ್ ಗಳಿಸಿತು. ಆಸ್ಟ್ರೇಲಿಯಾ ಪರ ಜೋಸ್ ಹೆಜಲ್ವುಡ್ 5 ವಿಕೆಟ್ ಪಡೆದರೆ, ಸ್ಟಾರ್ಕ್ ಮತ್ತು ಗ್ರೀನ್ ತಲಾ 2 ವಿಕೆಟ್ ಪಡೆದರು. ಪ್ಯಾಟ್ ಕಮಿನ್ಸ್ 1 ವಿಕೆಟ್ ಕಿತ್ತರು.
ಎರಡನೇ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ಬ್ಯಾಟಿಂಗ್ ಮುಂದುವರೆಸಿ ಮತ್ತೆ ಆರಂಭಿಕ ವೈಫಲ್ಯವನ್ನು ಅನುಭವಿಸಿತು. ಉಸ್ಮಾನ್ ಖವಾಜ 18 ರನ್ ಗಳಿಸಿ ಮಾರ್ಕ್ ವುಡ್ಗೆ ವಿಕೆಟ್ ಒಪ್ಪಿಸಿದರೆ, ಡೇವಿಡ್ ವಾರ್ನರ್ 28 ರನ್ ಗಳಿಸಿ ಕ್ರಿಸ್ ವೋಕ್ಸ್ ಎಸೆತದಲ್ಲಿ ಬೌಲ್ಡಾದರು. ನಂತರ ಬಂದ ಮಾರ್ನಸ್ ಭರ್ಜರಿ ಶತಕದಾಟ ಆಡಿದರು. 10 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 111 ರನ್ ಗಳಿಸಿದ ಮಾರ್ನಸ್ ಜೋ ರೂಟ್ ಎಸೆತದಲ್ಲಿ ಬೇಸ್ಟೋಗೆ ಕ್ಯಾಚಿತ್ತರು. ನಂತರದಲ್ಲಿ ಸ್ಟೀವ್ ಸ್ಮಿತ್(17), ಟ್ರಾವಿಸ್ ಹೆಡ್ (1) ಗಳಿಸಿ ಪೆವಿಲಿಯನ್ ಪರೇಡ್ ನಡೆಸಿದರು. ಮಿಶೆಲ್ ಮಾರ್ಶ್ (31) ಮತ್ತು ಕ್ಯಾಮರೂನ್ ಗ್ರೀನ್ ಆಟ ಮುಂದುವರೆಸಿದಾಗ ಮಳೆ ಸುರಿಯಿತು. ಈ ವೇಳೆ ಆಸ್ಟ್ರೇಲಿಯಾ 214ಕ್ಕೆ 5 ವಿಕೆಟ್ಗಳನ್ನು ಕಳೆದುಕೊಂಡಿತ್ತು. ಇಂಗ್ಲೆಂಡ್ ಪರ ಮಾರ್ಕ್ ವುಡ್ 3 ವಿಕೆಟ್ ಪಡೆದರೆ, ಕ್ರಿಸ್ ವೋಕ್ಸ್, ಜೋ ರೂಟ್ ತಲಾ 1 ವಿಕೆಟ್ ಗಿಟ್ಟಿಸಿಕೊಂಡರು. ಇಂಗ್ಲೆಂಡ್ 65 ರನ್ ಮುನ್ನಡೆ ಸಾಧಿಸಿತ್ತು. ಆದರೆ ಮಳೆಯಿಂದಾಗಿ ಇಂಗ್ಲೆಂಡ್ ಲೆಕ್ಕಾಚಾರ ತಲೆಕೆಳಗಾಗಿ, ಪಂದ್ಯ ಡ್ರಾದಲ್ಲಿ ಮುಕ್ತಾಯ ಕಂಡಿತು.
ಇದನ್ನೂ ಓದಿ : ಉದಯೋನ್ಮುಖ ಏಷ್ಯಾಕಪ್ ಫೈನಲ್: ಮುಗ್ಗರಿಸಿದ ಭಾರತ.. ಚಾಂಪಿಯನ್ಯಾದ ಪಾಕ್