ಹ್ಯಾಂಗ್ಝೌ (ಚೀನಾ): ಇಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಭಾರತ ತನ್ನ ಪದಕ ಬೇಟೆಯನ್ನು ಮುಂದುವರೆಸಿದೆ. ಏಷ್ಯನ್ ಪ್ಯಾರಾ ಗೇಮ್ಸ್ನ ಎರಡನೇ ದಿನವಾದ ಮಂಗಳವಾರ ಭಾರತದ ಪ್ರಾಚಿ ಯಾದವ್ ಚಿನ್ನದ ಪದಕ ಪಡೆದಿದ್ದಾರೆ. ಮಹಿಳೆಯರ ಕೆಎಲ್2 ಕ್ಯಾನೋಯಿಂಗ್ ಸ್ಪರ್ಧೆಯಲ್ಲಿ ಪ್ರಾಚಿ ಚಿನ್ನದ ಪದಕ ಗೆದ್ದಿದ್ದು, ಪ್ಯಾರಾ ಏಷ್ಯನ್ ಗೇಮ್ಸ್ನ ನಾಲ್ಕನೇ ಆವೃತ್ತಿಯಲ್ಲಿ ಎರಡನೇ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಮೊದಲ ದಿನ ಬೆಳ್ಳಿ ಪದಕ ಪಡೆದಿದ್ದ ಪ್ರಾಚಿ : ಇದಕ್ಕೂ ಮುನ್ನ ಮೊದಲ ದಿನವಾದ ಸೋಮವಾರ ನಡೆದ ಮಹಿಳೆಯರ ಕ್ಯಾನೋಯಿಂಗ್ ವಿಎಲ್ 2 ವಿಭಾಗದಲ್ಲಿ ಪ್ರಾಚಿ ಯಾದವ್ ಬೆಳ್ಳಿ ಪದಕ ಗೆದ್ದಿದ್ದರು. ಮೊದಲ ದಿನ ಉಜ್ಬೇಕಿಸ್ಥಾನದ ಇರೋದಖೋನ್ ರುಸ್ತಮೋವ ಜೊತೆ ಪ್ರಬಲ ಹೋರಾಟ ನಡೆಸಿದ ಅವರು ಅಂತಿಮ ಕ್ಷಣದಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಪ್ರಾಚಿ ಕೇವಲ 1.022 ಸೆಕೆಂಡ್ಗಳಲ್ಲಿ ಚಿನ್ನದ ಪದಕದಿಂದ ವಂಚಿತರಾಗಿದ್ದರು.
-
First GOLD of Day 2 at #AsianParaGames! 🥇🇮🇳
— SAI Media (@Media_SAI) October 24, 2023 " class="align-text-top noRightClick twitterSection" data="
Our #TOPScheme athlete @ItzPrachi_ strikes Gold for India in Para Canoe, Women's KL2, with an impressive clocking of 54.962.
This marks her second medal at the #AsianParaGames2022 🏆🚣🏻♀️
Congratulations Prachi on this remarkable… pic.twitter.com/i2ZIKRq2Pn
">First GOLD of Day 2 at #AsianParaGames! 🥇🇮🇳
— SAI Media (@Media_SAI) October 24, 2023
Our #TOPScheme athlete @ItzPrachi_ strikes Gold for India in Para Canoe, Women's KL2, with an impressive clocking of 54.962.
This marks her second medal at the #AsianParaGames2022 🏆🚣🏻♀️
Congratulations Prachi on this remarkable… pic.twitter.com/i2ZIKRq2PnFirst GOLD of Day 2 at #AsianParaGames! 🥇🇮🇳
— SAI Media (@Media_SAI) October 24, 2023
Our #TOPScheme athlete @ItzPrachi_ strikes Gold for India in Para Canoe, Women's KL2, with an impressive clocking of 54.962.
This marks her second medal at the #AsianParaGames2022 🏆🚣🏻♀️
Congratulations Prachi on this remarkable… pic.twitter.com/i2ZIKRq2Pn
ಇದೀಗ ಮಂಗಳವಾರ ನಡೆದ ಮಹಿಳೆಯರ ಕೆಎಲ್2 ಕ್ಯಾನೋಯಿಂಗ್ ಸ್ಪರ್ಧೆಯಲ್ಲಿ ಪ್ರಾಚಿ ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ. ಪ್ರಾಚಿ 54.962 ಸೆಕೆಂಡ್ಗಳಲ್ಲಿ ಗುರಿ ಮುಟ್ಟುವ ಮೂಲಕ ಚಿನ್ನದ ಪದಕ ಪಡೆದರು. ಚೀನಾದ ಶಂಶಾನ್ ವಾಂಗ್ 55.674 ಸೆಕೆಂಡ್ಗಳಲ್ಲಿ ಗುರಿ ಮುಟ್ಟುವ ಮೂಲಕ ಬೆಳ್ಳಿ ಪದಕ ಪಡೆದರು. ಇರಾನ್ನ ರೊಯಾ ಸೋಲ್ಟಾನಿ 56.714 ಸೆಕೆಂಡ್ಗಳಲ್ಲಿ ಗುರಿ ತಲುಪುವ ಮೂಲಕ ಕಂಚಿನ ಪದಕ ಪಡೆದರು. ಜೊತೆಗೆ ರಜನಿ ಝಾ12.190 ಸೆಕೆಂಡ್ಗಳಲ್ಲಿ ಗುರಿ ತಲುಪುವ ಮೂಲಕ ಐದನೇ ಸ್ಥಾನ ಪಡೆದರು. ಒಟ್ಟು ಆರು ಮಂದಿ ಅಥ್ಲೀಟ್ಗಳು ಸ್ಫರ್ಧೆಯಲ್ಲಿ ಭಾಗವಹಿಸಿದ್ದರು.
ಇವರ ಜೊತೆಗೆ, ಪುರುಷರ ವಿಭಾಗದ ಕೆಎಲ್3 ಕ್ಯಾನೋಯಿಂಗ್ ಸ್ಪರ್ಧೆಯಲ್ಲಿ 27 ವರ್ಷದ ಮನೀಷ್ ಕೌರವ್ ಕಂಚಿನ ಪದಕ ಪಡೆದಿದ್ದಾರೆ. ಪುರುಷರ ವಿಭಾಗದ ಕ್ಯಾನೋಯಿಂಗ್ ಕೆಎಲ್3 ಸ್ಪರ್ಧೆಯಲ್ಲಿ 44.065 ಸೆಕೆಂಡ್ಗಳಲ್ಲಿ ಗುರಿ ಮುಟ್ಟುವ ಮೂಲಕ ಕಂಚಿನ ಪದಕ ಪಡೆದರು. ಮನೀಷ್ ಕೌರವ್ ಎರಡು ಬಾರಿ ಏಷ್ಯನ್ ಚಾಂಪಿಯನ್ ಶಿಪ್ನಲ್ಲಿ ಎರಡು ಚಿನ್ನದ ಪದಕವನ್ನು ಪಡೆದಿದ್ದಾರೆ. ಜೊತೆಗೆ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಹಲವು ಪದಕಗಳನ್ನು ಪಡೆದಿದ್ದಾರೆ.
ಆರು ಚಿನ್ನ ಸೇರಿ ಒಟ್ಟು 17 ಪದಕ : ಪ್ರಾಚಿ ಯಾದವ್ ಕಳೆದ ಕೆಲವು ವರ್ಷಗಳಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಪ್ಯಾರಾಲಿಂಪಿಕ್ ವರ್ಲ್ಡ್ ಕಪ್ನಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಪ್ರಾಚಿ ಯಾದವ್ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದಾರೆ. ಪ್ರಾಚಿ ತನ್ನ ಕ್ರೀಡಾ ಜೀವನವನ್ನು ಪ್ಯಾರಾ ಸ್ವಿಮ್ಮರ್ ಆಗಿ ಪ್ರಾರಂಭಿಸಿದರು. ಬಳಿಕ ತನ್ನ ಈಜುತರಬೇತುದಾರರ ಸಲಹೆಯಂತೆ 2018ರಿಂದ ಕ್ಯಾನೋಯಿಂಗ್ ತರಬೇತಿಯಲ್ಲಿ ಪಡೆಯಲು ಪ್ರಾರಂಭಿಸಿದರು. ಪ್ರಾಚಿ ಜಪಾನ್ನ ಟೋಕಿಯೋದಲ್ಲಿ ನಡೆದ ಪ್ಯಾರಾಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಮೊದಲ ಭಾರತೀಯ ಪ್ಯಾರಾ ಕ್ಯಾನೋ ಅಥ್ಲೀಟ್ ಆಗಿದ್ದಾರೆ. ಏಷ್ಯನ್ ಪ್ಯಾರಾ ಗೇಮ್ಸ್ನ ಮೊದಲ ದಿನ ಭಾರತವು ಆರು ಚಿನ್ನ ಸೇರಿ ಒಟ್ಟು 17 ಪದಕಗಳನ್ನು ಗೆದ್ದಿದೆ.
ಇದನ್ನೂ ಓದಿ : ಪ್ಯಾರಾ ಏಷ್ಯನ್ ಗೇಮ್ಸ್: ಮೊದಲ ದಿನ 6 ಚಿನ್ನ ಸೇರಿ 17 ಪದಕ ಗೆದ್ದ ಭಾರತದ ಅಥ್ಲೀಟ್ಗಳು