ನವದೆಹಲಿ: ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭಾರತದ ದಿವ್ಯಾ ಕರನ್, ಪಿಂಕಿ ಹಾಗೂ ಸರಿತಾ ಮೊರೆ ಬಂಗಾರದ ಪದಕಕ್ಕೆ ಮುತ್ತಿಕ್ಕಿದ್ದಾರೆ.
68 ಕೆ.ಜಿ ವಿಭಾಗದಲ್ಲಿ ಬಂಗಾರದ ಪದಕಕ್ಕೆ ಮುತ್ತಿಕ್ಕಿದ ಎರಡನೇ ಭಾರತೀಯ ಮಹಿಳೆ ಎಂಬ ಪಾತ್ರಕ್ಕೂ ದಿವ್ಯಾ ಕರನ್ ಭಾಜನರಾಗಿದ್ದಾರೆ. ಈ ಹಿಂದೆ ಇದೇ ವಿಭಾಗದಲ್ಲಿ ನವಜೋತ್ ಕೌರ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು.
ಇಂದಿನ ಫೈನಲ್ ಪಂದ್ಯದಲ್ಲಿ ಉಜ್ಬೇಕಿಸ್ತಾನದ ಆಟಗಾರ್ತಿ ಎದುರು 4-0 ಅಂತರದಲ್ಲಿ ಗೆಲುವು ದಾಖಲು ಮಾಡಿದರು. ಇನ್ನು 55 ಕೆಜಿ ವಿಭಾಗದಲ್ಲಿ ಪಿಂಕಿ ಮಂಗೋಲಿಯಾ ಆಟಗಾರ್ತಿ ವಿರುದ್ಧ 2-1 ಗೆಲುವು ದಾಖಲು ಮಾಡಿದ್ರೆ, 59 ಕೆಜಿ ವಿಭಾಗದಲ್ಲಿ ಸರಿತಾ ಮಂಗೋಲಿಯಾ ಆಟಗಾರ್ತಿ ಮೇಲೆ ಸವಾರಿ ಮಾಡಿ 3-2 ಅಂತರದಿಂದ ಗೆಲುವು ಸಾಧಿಸಿದರು. ಈ ನಡುವೆ ಮಧ್ಯೆ 50 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಭಾರತೀಯ ಕುಸ್ತಿಪಟು ನಿರ್ಮಾಣ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು.