ETV Bharat / sports

ಬೆಳ್ಳಿ ಗೆದ್ದ ದೀಪಕ್; ಏಷ್ಯನ್ ಕುಸ್ತಿ ಚಾಂಪಿಯನ್​​ಶಿಪ್​ನಲ್ಲಿ 1 ಚಿನ್ನ ಸೇರಿ ಭಾರತಕ್ಕೆ 17 ಪದಕ - ರವಿಕುಮಾರ್ ದಹಿಯಾಗೆ ಚಿನ್ನ

ಭಾರತ ಒಟ್ಟಾರೆ ಒಂದು ಚಿನ್ನ 5 ಬೆಳ್ಳಿ ಮತ್ತು 11 ಕಂಚಿನ ಪದಕ ಗೆಲ್ಲುವ ಮೂಲಕ ಏಷ್ಯನ್ ಚಾಂಪಿಯನ್​​ಶಿಪ್​ನಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿದೆ. ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ರವಿ ದಹಿಯಾ ಚಿನ್ನದ ಪದಕ ಗೆದ್ದಿದ್ದರು.

Asian Wrestling Championships
ದೀಪಕ್ ಪೂನಿಯಾ
author img

By

Published : Apr 24, 2022, 9:40 PM IST

ಉಲಾನ್‌ಬಾತರ್‌(ಮಂಗೋಲಿಯಾ): ಭಾರತದ ದೀಪಕ್ ಪೂನಿಯಾ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನ 86 ಕೆಜಿ ಪುರುಷ ಫ್ರೀಸ್ಟೈಲ್​ ಫೈನಲ್​ನಲ್ಲಿ ಕಜಕಸ್ತಾನದ ಅಜ್ಮತ್‌ ದೌಲತ್‌ಬೆಕೊವ್ ವಿರುದ್ಧ ಸೋಲು ಕಾಣುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಡೆದುಕೊಂಡಿದ್ದಾರೆ.

ಭಾನುವಾರ ನಡೆದ ಫೈನಲ್​​ ಬೌಟ್​ನಲ್ಲಿ ಅಜ್ಮತ್​ ವಿರುದ್ಧ ದೀಪಕ್​​ 1-6ರಲ್ಲಿ ಸೋಲು ಕಂಡರು. ಫೈನಲ್​ವರೆಗೆ ಎದುರಾಳಿಗೆ ಒಂದೂ ಪಾಯಿಂಟ್ಸ್ ಬಿಟ್ಟುಕೊಡದೇ ದೀಪಕ್‌ ಚಿನ್ನದ ಪದಕದ ಸುತ್ತಿನಲ್ಲಿ ಮಂಕಾದರು.

ಇದಕ್ಕೂ ಮೊದಲು ದೀಪಕ್‌ ಕ್ವಾರ್ಟರ್​ ಫೈನಲ್​ನಲ್ಲಿ 6-0ಯಿಂದ ಇರಾನ್‌ನ ಮೊಹಸೆನ್‌ ಮೀರ್‌ಯೂಸುಫ್‌ ಮತ್ತು ಸೆಮಿಫೈನಲ್​​ನಲ್ಲಿ 5-0ಯಿಂದ ಕೊರಿಯಾದ ಗ್ವಾನುಕ್ ಕಿಮ್ ಅವರನ್ನು ಮಣಿಸಿ ಮಾಡಿ ಅಂತಿಮ ಸುತ್ತಿಗೆ ಪ್ರವೇಶಿಸಿದ್ದರು.

ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ದೀಪಕ್​ಗೆ ಇದು​ ಸತತ ಎರಡನೆ ಬೆಳ್ಳಿ ಪದಕ ಮತ್ತು ಒಟ್ಟಾರೆ 4 ಪದಕವಾಗಿದೆ. ಕಳೆದ ಆವೃತ್ತಿಯಲ್ಲಿ ಬೆಳ್ಳಿ ಗೆದ್ದರೆ, 2019 ಮತ್ತು 2020ರಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು.

92 ಕೆಜಿ ವಿಭಾಗದ ಕಂಚಿನ ಪದಕದ ಪ್ಲೇ ಆಫ್​ನಲ್ಲಿ ವಿಕಿ ಚಾಹರ್ ಉಜ್ಬೆಕಿಸ್ತಾನದ ಅಜಿನಿಯಾಜ್ ಸಪರ್ನಿಯಜೊವ್ ವಿರುದ್ಧ 5-3ರಿಂದ ಗೆಲುವು ಪಡೆದು ಭಾರತಕ್ಕೆ ದಿನದ 2ನೇ ಪದಕ ತಂದುಕೊಟ್ಟರು.

61 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಮಂಗಲ್ ಕಡಿಯಾನ್‌ ಕಂಚಿನ ಪದಕದ ಬೌಟ್‌ನಲ್ಲಿ 4-6ರಿಂದ ಕಿರ್ಗಿಸ್ತಾನದ ಉಲುಕ್‌ಬೆಕ್‌ ಜೊಲ್ಡೊಶ್‌ಬೆಕೊವ್ ವಿರುದ್ಧ ಸೋಲು ಕಂಡು ನಿರಾಶೆಯನುಭವಿಸಿದರೆ, 74 ಕೆಜಿ ವಿಭಾಗದಲ್ಲಿ ಯಶ್‌ ಮತ್ತು ಅನಿರುದ್ಧ ಕುಮಾರ್‌ (125 ಕೆಜಿ) ಆರಂಭಿಕ ಸುತ್ತುಗಳಲ್ಲೇ ಸೋಲು ಕಂಡು ಹೊರಬಿದ್ದರು.

ಭಾರತ ಒಟ್ಟಾರೆ ಒಂದು ಚಿನ್ನ 5 ಬೆಳ್ಳಿ ಮತ್ತು 11 ಕಂಚಿನ ಪದಕ ಗೆಲ್ಲುವ ಮೂಲಕ ಏಷ್ಯನ್ ಚಾಂಪಿಯನ್​​ಶಿಪ್​ನಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿದೆ. ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ರವಿ ದಹಿಯಾ ಚಿನ್ನದ ಪದಕ ಗೆದ್ದಿದ್ದರು.

ಇದನ್ನೂ ಓದಿ:ಆರ್ಚರಿ ವಿಶ್ವಕಪ್: ರಿಕರ್ವ್​ ಮಿಶ್ರ ಡಬಲ್ಸ್​ನಲ್ಲಿ ಚಿನ್ನ ಗೆದ್ದ ತರುಣ್​ದೀಪ್ ರಾಯ್-ರಿಧಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.