ಆಲ್ಮಾಟಿ: ಕಜಕಸ್ತಾನದಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭಾರತದ ಮಹಿಳಾ ಕುಸ್ತಿಪಟು ಸರಿತಾ ಮೋರ್ 59 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ಮೊದಲ ಪಂದ್ಯದಲ್ಲಿ ಸೋಲುಕಂಡಿದ್ದ ಮಂಗೋಲಿಯಾದ ಶೂಡೋರ್ ಬಾತರ್ಜಾವಿನ್ ವಿರುದ್ಧವೇ ಫೈನಲ್ನಲ್ಲಿ ಗೆದ್ದು ಸ್ವರ್ಣದ ಪದಕ್ಕೆ ಮುತ್ತಿಕ್ಕಿದ್ದಾರೆ. ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ 1-7ರಲ್ಲಿ ಹಿನ್ನಡೆ ಅನುಭವಿಸಿದ್ದ ಸರಿತಾ ಅದ್ಭುತ ರೀತಿಯಲ್ಲಿ ಕಮ್ಬ್ಯಾಕ್ 10 - 7 ಅಂಕಗಳ ಅಂತರದಿಂದ ಗೆದ್ದು ಮೊದಲ ಸುತ್ತಿನ ಸೋಲಿಗೆ ಸೇಡು ತೀರಿಸಿಕೊಂಡರು.
-
A superb performance from @saritamor3 who wins 🥇 in Women’s 59 Kg at the Asian Championships for her 2nd straight gold at this championship. #SeemaBisla won the 🥉 in women’s 50 Kg.#Wrestling #IndianSports pic.twitter.com/cu4r0Xir6l
— SAIMedia (@Media_SAI) April 15, 2021 " class="align-text-top noRightClick twitterSection" data="
">A superb performance from @saritamor3 who wins 🥇 in Women’s 59 Kg at the Asian Championships for her 2nd straight gold at this championship. #SeemaBisla won the 🥉 in women’s 50 Kg.#Wrestling #IndianSports pic.twitter.com/cu4r0Xir6l
— SAIMedia (@Media_SAI) April 15, 2021A superb performance from @saritamor3 who wins 🥇 in Women’s 59 Kg at the Asian Championships for her 2nd straight gold at this championship. #SeemaBisla won the 🥉 in women’s 50 Kg.#Wrestling #IndianSports pic.twitter.com/cu4r0Xir6l
— SAIMedia (@Media_SAI) April 15, 2021
2020ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದಿದ್ದ ಸರಿತಾ ಇದೀಗ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಸೆಮಿಫೈನಲ್ನಲ್ಲಿ ಕಿರ್ಗಿಸ್ತಾನದ ನುರೈದಾ ಅನರ್ಕುಲೊವಾ ವಿರುದ್ಧ ಕೇವಲ 90 ಸೆಕೆಂಡ್ಗಳಲ್ಲೇ ಪಂದ್ಯವನ್ನು ಗೆದ್ದು ಫೈನಲ್ ಪ್ರವೇಶಿಸಿದ್ದರು.
ಇನ್ನು 50 ಕೆಜಿ ವಿಭಾಗ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಸೀಮ ಬಿಸ್ಲಾ ತೈಪೆಯ ಯುಂಗ್ ಹ್ಸುನ್ ಲಿನ್ 10-0ಯಲ್ಲಿ ಮಣಿಸಿದರು. ಆದರೆ, ಫೈನಲ್ ತಲುಪುವಲ್ಲಿ ವಿಫಲವಾದ ಕಾರಣ ಈ ವಿಭಾಗದ ಒಲಿಂಪಿಕ್ ಕೋಟಾಗೆ ಭಾರತದಿಂದ ಯಾವುದೇ ಸ್ಪರ್ಧಿ ಆಯ್ಕೆಯಾಗಿಲ್ಲ ಮುಂದಿನ ತಿಂಗಳ ವಿಶ್ವ ಚಾಂಪಿಯನ್ಶಿಪ್ ಒಲಿಂಪಿಕ್ಸ್ ಅರ್ಹತೆಗೆ ನಡೆಯುವ ಕೊನೆಯ ಈವೆಂಟ್ ಆಗಿದೆ.
76 ಕೆಜಿ ವಿಭಾಗದಲ್ಲಿ ಪೂಜಾ ಸಿಂಗ್ ಕೊರಿಯಾದ ಕುಸ್ತಿಪಟುವನ್ನು ಮಣಿಸಿ ಕಂಚು ಗೆದ್ದರು.