ETV Bharat / sports

ಪ್ಯಾರಾ ಏಷ್ಯನ್​ ಗೇಮ್ಸ್​ : ಶಾಟ್​​​​ಪುಟ್​ನಲ್ಲಿ ಚಿನ್ನ, ಬೆಳ್ಳಿಯ ಡಬಲ್​ ಧಮಾಕ: 74 ಪದಕ ಗೆದ್ದು ಹಳೆ ದಾಖಲೆ ಮುರಿದ ಭಾರತ ​

author img

By ETV Bharat Karnataka Team

Published : Oct 26, 2023, 10:40 AM IST

Updated : Oct 26, 2023, 11:36 AM IST

ಪ್ಯಾರಾ ಏಷ್ಯನ್​ ಗೇಮ್ಸ್​ನಲ್ಲಿ ಶೂಟಿಂಗ್​ ಮತ್ತು ಶಾಟ್​ ಪುಟ್​ನಲ್ಲಿ ಭಾರತ ಚಿನ್ನವನ್ನು ಗೆದ್ದಿದೆ.

ಶೂಟಿಂಗ್​ನಲ್ಲೂ ಭಾರತಕ್ಕೆ ಒಲಿದ ಚಿನ್ನ
ಶೂಟಿಂಗ್​ನಲ್ಲೂ ಭಾರತಕ್ಕೆ ಒಲಿದ ಚಿನ್ನ

ಹ್ಯಾಂಗ್​ಝೌ: ಪ್ಯಾರಾ ಏಷ್ಯನ್​ ಗೇಮ್ಸ್​ ನಾಲ್ಕನೇ ದಿನವೂ ಭಾರತ ಪದಕ ಬೇಟೆಯನ್ನು ಮುಂದುವರೆಸಿದೆ. ಮಿಶ್ರಿತ 50m ರೈಫಲ್ಸ್ ಪ್ರೋನ್ SH-1 ಶೂಟಿಂಗ್​ನಲ್ಲಿ ಭಾರತದ ಪ್ಯಾರಾ ಅಥ್ಲೀಟಿ ಶೂಟರ್ ಸಿದ್ಧಾರ್ಥ ಬಾಬು 247.7 ಗಮನಾರ್ಹ ಸ್ಕೋರ್‌ನೊಂದಿಗೆ ಚಿನ್ನ ಗೆದ್ದು ಏಷ್ಯನ್ ಪ್ಯಾರಾ ಗೇಮ್ಸ್ ದಾಖಲೆ ಬರೆದಿದ್ದಾರೆ.

  • Silver dazzles for 🇮🇳 🥈at #AsianParaGames2022 🥳

    In Women's Shot Put-F34, the silver medal is won by Bhagyashri Madhavrao Jhadav with an impressive throw of 7.54m, showcasing incredible sports prowess.🙌💪

    Congratulations to Bhagyashri on this well-deserved silver! 🥈👏🌟… pic.twitter.com/0RfbfXfNEw

    — SAI Media (@Media_SAI) October 26, 2023 " class="align-text-top noRightClick twitterSection" data=" ">

ಡಬಲ್​ ಧಮಾಕ: ಶಾಟ್ ​ಪುಟ್​ನಲ್ಲಿ ಭಾರತದ ಪ್ಯಾರಾ ಅಥ್ಲೀಟಿಗಳು ಚಿನ್ನ ಮತ್ತು ಕಂಚಿನ ಪದಕವನ್ನು ಜಯಿಸಿದ್ದಾರೆ. ಪುರುಷರ ಶಾಟ್​ ಪುಟ್​-ಎಫ್​46ನಲ್ಲಿ ಸಚಿನ್​ ಖಿಲಾರಿ 16.03 ಮೀ ಬೃಹತ್​ ಎಸೆತದೊಂದಿಗೆ ಚಿನ್ನ ಗೆಲ್ಲುವ ಮೂಲಕ ದಾಖಲೆ ಬರೆದಿದ್ದಾರೆ. ಮತ್ತೊಂದೆಡೆ ಇದೇ ವಿಭಾಗದಲ್ಲಿ ರೋಹಿತ್​ ಕುಮಾರ್ 14.56 ಮೀ ಎಸೆತದೊಂದಿಗೆ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

  • 🥇🥈🥉 History Created at the Asian Para Games! 🥉🥈🥇

    Witnessing India's most remarkable performance ever at the #AsianParaGames, with an astonishing 7⃣3⃣medals and still counting!
    🏆💪✌️ Our incredible athletes are making our nation proud, and the Indian flag is soaring high!… pic.twitter.com/E3Hkh1d2pZ

ಮಹಿಳಾ ಶಾಟ್​ಪುಟ್​ನಲ್ಲಿ ಬೆಳ್ಳಿ: ಮಹಿಳಾ ಶಾಟ್​ ಪುಟ್ ಎಫ್​34 ವಿಭಾಗದಲ್ಲಿ ಭಾಗ್ಯಶ್ರೀ ಮಾಧವ್​ರಾವ್​ ಜಾಧವ್​ 7.54 ಮೀ ಎಸೆತದೊಂದಿಗೆ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.​

ಆರ್ಚರಿಯಲ್ಲಿ ಕಂಚು: ಆರ್ಚರಿ ಪುರುಷರ ಡಬಲ್ಸ್​ - ಡಬ್ಲೂ1 ಈವೆಂಟ್​ನಲ್ಲಿ ಭಾರತದ ಆರ್ಚರಿಗಳಾದ ಆದಿಲ್​ ಮೊಹ್ಮದ್​ ಮತ್ತು ನವೀನ್​ ದಲಾಲ್​ ಜೋಡಿ ಕಂಚಿನ ಪದಕವನ್ನು ಗೆದ್ದುಕೊಂಡಿದೆ.

Indian Shooter Sidhartha Babu strikes GOLD with a scintillating performance at #AsianParaGames! 🥇🇮🇳

@sid6666 secures a dazzling Gold in R6 Mixed 50m Rifles Prone SH-1, setting new Asian Para Games Record with a remarkable score of 247.7.✌️👏🔫

With this, the ace Shooter also… pic.twitter.com/QAMDfmvvmm

— SAI Media (@Media_SAI) October 26, 2023 " class="align-text-top noRightClick twitterSection" data=" ">

ಬ್ಯಾಟ್ಮಿಂಟನ್​ನಲ್ಲಿ ಕಂಚು: ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ SL - 4ನಲ್ಲಿ ಸುಕಾಂತ್ ಕದಮ್ ಅತ್ಯುತ್ತಮ ಪ್ರದರ್ಶನದೊಂದಿಗೆ ಕಂಚಿನ ಪದಕವನ್ನು ಪಡೆದರು. ಮತ್ತೊಂದೆಡೆ ಮಹಿಳೆಯರ ಸಿಂಗಲ್ಸ್​ ಪ್ಯಾರಾ ಬ್ಯಾಡ್ಮಿಂಟನ್​ - ಎಸ್​ಹೆಚ್​ - 6 ಈವೆಂಟ್​ನಲ್ಲಿ ನಿತ್ಯಶ್ರೀ ಕಂಚಿನ ಪದಕ ಗೆದ್ದಿದ್ದಾರೆ.

100ಮೀ ಓಟದಲ್ಲಿ ಕಂಚು: ಪುರುಷರ 100ಮೀ ಟಿ-37 ಓಟದ ಸ್ಫರ್ಧೆಯಲ್ಲಿ ಶ್ರೇಯಾಂಶ್​ ತ್ರಿವೇದಿ ಕಂಚು ಗೆದ್ದಿದ್ದು, 12.24 ಸೆಕೆಂಡ್​ಗಳಲ್ಲಿ ಗುರಿ ತಲುಪಿದ್ದಾರೆ. ಮತ್ತೊಂದೆಡೆ ಪುರುಷರ ಟಿ-35 100 ಮೀ ಓಟದ ಸ್ಪರ್ಧೆಯಲ್ಲಿ ನಾರಾಯಣ ಠಾಕೂರ್​ ಕಂಚಿನ ಪದಕ ಜಯಿಸಿದರು. 14.37 ಸೆಕೆಂಡ್​ನಲ್ಲಿ 100 ಮೀ ತಲುಪುವ ಮೂಲಕ ಈ ಸಾಧನೆ ಮಾಡಿದರು

ಹಳೆ ದಾಖಲೆ ಉಡೀಸ್​: ಪ್ಯಾರಾ ಏಷ್ಯನ್ ಗೇಮ್ಸ್ 2023ರ ನಾಲ್ಕನೇ ದಿನಕ್ಕೆ ಭಾರತ ಒಟ್ಟು 74 ಪದಕಗಳನ್ನು ಗೆಲ್ಲುವ ಮೂಲಕ ಹಳೆ ದಾಖಲೆಯನ್ನು ಪುಡಿಗಟ್ಟಿದೆ. ಇದರಲ್ಲಿ 17 ಚಿನ್ನ, 22 ಬೆಳ್ಳಿ ಮತ್ತು 33 ಕಂಚಿನ ಪದಕಗಳು ಸೇರಿವೆ. ಏಷ್ಯನ್ ಪ್ಯಾರಾ ಗೇಮ್ಸ್ 2023 ರ ಪಾಯಿಂಟ್ ಪಟ್ಟಿಯಲ್ಲಿ ಭಾರತ 5ನೇ ಸ್ಥಾನಕ್ಕೇರಿದೆ.

2018ರಲ್ಲಿ ನಡೆದ ಪ್ಯಾರಾ ಏಷ್ಯನ್​ ಗೇಮ್ಸ್​ನಲ್ಲಿ ಭಾರತ ಒಟ್ಟು 72 ಪದಕಗಳನ್ನು ಜಯಿಸಿತ್ತು. ಇದರಲ್ಲಿ 15 ಚಿನ್ನ, 24 ಬೆಳ್ಳಿ, 33 ಕಂಚು ಒಳಗೊಂಡಿದ್ದವು. ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿತ್ತು.

ಇದನ್ನೂ ಓದಿ: ಪ್ಯಾರಾ ಏಷ್ಯನ್ ಗೇಮ್ಸ್, 3ನೇ ದಿನ: 30 ಪದಕ ಬೇಟೆಯಾಡಿದ ಭಾರತೀಯ ಅಥ್ಲೀಟ್​ಗಳು

  • Indian Shooter Sidhartha Babu strikes GOLD with a scintillating performance at #AsianParaGames! 🥇🇮🇳

Last Updated : Oct 26, 2023, 11:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.