ಹ್ಯಾಂಗ್ಝೌ: ಪ್ಯಾರಾ ಏಷ್ಯನ್ ಗೇಮ್ಸ್ನ 5ನೇ ದಿನ ಚಿನ್ನ ಗೆಲ್ಲುವ ಮೂಲಕ ಭಾರತೀಯ ಪ್ಯಾರಾ ಅಥ್ಲೀಟ್ಸ್ಗಳು ಶುಭಾರಂಭ ಮಾಡಿದ್ದಾರೆ. ಇಂದು ಒಟ್ಟು 5 ಚಿನ್ನದ ಪದಕಗಳನ್ನು ಗೆದ್ದಿರುವ ಭಾರತ ಪದಗಳ ಬೇಟೆಯನ್ನು ಮುಂದುವರೆಸಿದೆ. ಪುರುಷರ 1500 ಮೀ - ಟಿ38 ಓಟದ ಸ್ಪರ್ಧೆಯಲ್ಲಿ ಪ್ಯಾರಾ ಅಥ್ಲೀಟಿ ರಮಣಾ ಶರ್ಮಾ ಚಿನ್ನವನ್ನು ಗೆದ್ದಿದ್ದಾರೆ. 4.20.80 ಮಿ. ಸೆಕೆಂಡ್ನಲ್ಲಿ ಗುರಿ ತಲುಪಿ ಈ ಸಾಧನೆ ಮಾಡಿದ್ದಾರೆ.
-
🥇🥈 🇮🇳 Dominates with Two Podium Wins in Badminton at #AsianParaGames! 🏸
— SAI Media (@Media_SAI) October 27, 2023 " class="align-text-top noRightClick twitterSection" data="
🌟 @PramodBhagat83 secures the coveted Gold, while @niteshnk11 proudly brings home the Silver in Men's Singles SL3, showcasing incredible skill and unwavering determination.
🏸 This historic moment,… pic.twitter.com/So3mgW9j7d
">🥇🥈 🇮🇳 Dominates with Two Podium Wins in Badminton at #AsianParaGames! 🏸
— SAI Media (@Media_SAI) October 27, 2023
🌟 @PramodBhagat83 secures the coveted Gold, while @niteshnk11 proudly brings home the Silver in Men's Singles SL3, showcasing incredible skill and unwavering determination.
🏸 This historic moment,… pic.twitter.com/So3mgW9j7d🥇🥈 🇮🇳 Dominates with Two Podium Wins in Badminton at #AsianParaGames! 🏸
— SAI Media (@Media_SAI) October 27, 2023
🌟 @PramodBhagat83 secures the coveted Gold, while @niteshnk11 proudly brings home the Silver in Men's Singles SL3, showcasing incredible skill and unwavering determination.
🏸 This historic moment,… pic.twitter.com/So3mgW9j7d
ಬ್ಯಾಡ್ಮಿಂಟನ್ನಲ್ಲಿ ಸ್ವರ್ಣ ಪದಕ: ಪುರುಷರ ಡಬಲ್ಸ್-ಎಸ್ಎಲ್3 ಮತ್ತು ಎಸ್ಎಲ್4 ವಿಭಾಗದಲ್ಲಿ ಪ್ಯಾರಾ ಷಟ್ಲರ್ಗಳಾದ ನಿತೇಶ್ ಮತ್ತು ತರುಣ್ ಜೋಡಿ ಇಂಡೋನೇಷ್ಯಾದ ಫೆಡ್ರಿ ಸೆಟಿಯಾವಾನ್ ಮತ್ತು ದ್ವಿಯೊಕೊ ಜೋಡಿಯನ್ನು 2-1 ಅಂತರದಿಂದ ಮಣಿಸಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಂದೆಡೆ ಪುರುಷರ ಸಿಂಗಲ್ಸ್ ಎಸ್ಎಲ್4 ಬ್ಯಾಡ್ಮಿಂಟನ್ ಪಂದ್ಯದಲ್ಲಿ ಸುಹಾಸ್ ಯತೀರಾಜ್ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಮಹಿಳೆಯರ ಸಿಂಗಲ್ಸ್ ಎಸ್ಯು5 ಬ್ಯಾಡ್ಮಿಂಟನ್ನಲ್ಲಿ ತುಳಸಿಮತಿ ಅವರು ಚೀನಾದ ಕ್ವಿಕ್ಸಿಯಾ ಯಾಂಗ್ ವಿರುದ್ಧ 2-0 ಅಂತರದಿಂದ ಗೆದ್ದು ಚಿನ್ನವನ್ನು ಗೆದ್ದಿದ್ದಾರೆ.
-
🥇 Raman Sharma Shines with Dazzling Gold and creates Games and Asian Records at #AsianParaGames! 🥇
— SAI Media (@Media_SAI) October 27, 2023 " class="align-text-top noRightClick twitterSection" data="
🏃♂️ Raman clocks an impressive 4:20.80 in the Men's 1500m T-38 event to make it to the top podium finish 🇮🇳
👏 A thunderous round of applause and heartfelt congratulations to… pic.twitter.com/yZbi5cynvZ
">🥇 Raman Sharma Shines with Dazzling Gold and creates Games and Asian Records at #AsianParaGames! 🥇
— SAI Media (@Media_SAI) October 27, 2023
🏃♂️ Raman clocks an impressive 4:20.80 in the Men's 1500m T-38 event to make it to the top podium finish 🇮🇳
👏 A thunderous round of applause and heartfelt congratulations to… pic.twitter.com/yZbi5cynvZ🥇 Raman Sharma Shines with Dazzling Gold and creates Games and Asian Records at #AsianParaGames! 🥇
— SAI Media (@Media_SAI) October 27, 2023
🏃♂️ Raman clocks an impressive 4:20.80 in the Men's 1500m T-38 event to make it to the top podium finish 🇮🇳
👏 A thunderous round of applause and heartfelt congratulations to… pic.twitter.com/yZbi5cynvZ
ಇದಕ್ಕೂ ಮೊದಲು ಪುರುಷರ ಸಿಂಗಲ್ಸ್ -ಎಸ್ಎಲ್3 ಬ್ಯಾಡ್ಮಿಂಟನ್ನಲ್ಲಿ ಪ್ರಮೋದ್ ಭಗತ್ ಚಿನ್ನದ ಪದಕವನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಂದೆಡೆ ಪುರುಷರ ಸಿಂಗಲ್ಸ್ - ಎಸ್ಎಲ್6 ಬ್ಯಾಡ್ಮಿಂಟನ್ನಲ್ಲಿ ನಿತೇಶ್ ಬೆಳ್ಳಿ, ಪುರುಷರ ಸಿಂಗಲ್ಸ್-ಎಸ್ಹೆಚ್6 ಬ್ಯಾಡ್ಮಿಂಟನ್ ಪಂದ್ಯದಲ್ಲಿ ಪ್ಯಾರಾ ಅಥ್ಲೀಟ್ ಕೃಷ್ಣ ನಗರ್ ಬೆಳ್ಳಿಪದಕವನ್ನು ಜಯಿಸಿದ್ದಾರೆ. ಪಂದ್ಯದಲ್ಲಿ ಚೀನಾದ ಕೈ ಮನ್ ಚೂ ವಿರುದ್ಧ ಕಠಿಣ ಸ್ಪರ್ಧೆಯೊಡ್ಡಿ ಗೆಲವು ದಾಖಲಿಸಿದ್ದಾರೆ.
ಆರ್ಚರಿಯಲ್ಲಿ ಚಿನ್ನ: ಮಹಿಳೆಯರ ಕಾಂಪೌಂಡ್ ಓಪನ್ ಆರ್ಚರಿ ಈವೆಂಟ್ನಲ್ಲಿ ಶೀತಲ್ ದೇವಿ ಚಿನ್ನವನ್ನು ಗೆದ್ದಿದ್ದಾರೆ. ಫೈನಲ್ನಲ್ಲಿ ಶೀತಲ್ ದೇವಿ ಸಿಂಗಾಪುರದ ಅಲಿಮ್ ನೂರ್ ಸೈಹಿದಾ ಅವರನ್ನು ಮಣಿಸಿದ್ದಾರೆ. ಪುರುಷರ ಆರ್ಚರಿಯಲ್ಲಿ ರಾಕೇಶ್ ಕುಮಾರ್ ಬೆಳ್ಳಿ ಜಯಿಸಿದ್ದಾರೆ.
-
Shining Silver for Krishna at #AsianParaGames2022! 🥈
— SAI Media (@Media_SAI) October 27, 2023 " class="align-text-top noRightClick twitterSection" data="
🏸 Krishna Nagar excels in Para Badminton Men's Singles - SH6 category, earning a hard-fought silver following his match against Kai Man Chu from Hong Kong, China🏆🇮🇳✨
👏 A resounding round of applause and congratulations… pic.twitter.com/PBLKThsmjn
">Shining Silver for Krishna at #AsianParaGames2022! 🥈
— SAI Media (@Media_SAI) October 27, 2023
🏸 Krishna Nagar excels in Para Badminton Men's Singles - SH6 category, earning a hard-fought silver following his match against Kai Man Chu from Hong Kong, China🏆🇮🇳✨
👏 A resounding round of applause and congratulations… pic.twitter.com/PBLKThsmjnShining Silver for Krishna at #AsianParaGames2022! 🥈
— SAI Media (@Media_SAI) October 27, 2023
🏸 Krishna Nagar excels in Para Badminton Men's Singles - SH6 category, earning a hard-fought silver following his match against Kai Man Chu from Hong Kong, China🏆🇮🇳✨
👏 A resounding round of applause and congratulations… pic.twitter.com/PBLKThsmjn
ಜಾವೆಲಿನ್ ಎಸೆತದಲ್ಲಿ ಡಬಲ್ ಪದಕ: ಪುರುಷರ ಜಾವೆಲಿನ್ ಎಸೆತ ಎಫ್-54 ಸ್ಪರ್ಧೆಯಲ್ಲಿ ಭಾರತದ ಇಬ್ಬರು ಪ್ಯಾರಾ ಅಥ್ಲೀಟ್ಸ್ಗಳು ಎರಡು ಪದಕವನ್ನು ಪಡೆದುಕೊಂಡಿದ್ದಾರೆ. ಪ್ರದೀಪ್ ಕುಮಾರ್ 25.34 ಮೀ ದೂರ ಭರ್ಜಿ ಎಸೆಯುವ ಮೂಲಕ ಬೆಳ್ಳಿ ಗೆದ್ದರೆ, ಇದೇ ಈವೆಂಟ್ನಲ್ಲಿ ಅಭಿಷೇಕ್ ಚಮೋಲಿ 25.04 ಮೀ ಭರ್ಜಿ ಎಸೆತದೊಂದಿಗೆ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಪುರುಷರ ಜಾವೆಲಿನ್ ಎಸೆತ ಎಫ್-54 ಸ್ಪರ್ಧೆಯಲ್ಲಿ ಲಕ್ಷಿತ್ ಕಂಚಿನ ಪದಕ ಗೆದ್ದಿದ್ದಾರೆ.
ಡಿಸ್ಕಸ್ ಥ್ರೋನಲ್ಲಿ ಕಂಚು: ಮಹಿಳೆಯರ ಡಿಸ್ಕಸ್ ಥ್ರೋ -ಎಫ್37/38 ಸ್ಪರ್ಧೆಯಲ್ಲಿ ಲಕ್ಷ್ಮಿ ಕಂಚಿನ ಪದಕ ಜಯಿಸಿದ್ದಾರೆ. 22.55 ಮೀ ದೂರ ಎಸೆತದ ಮೂಲಕ ಈ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: "ಒಲಿಂಪಿಕ್ಸ್ ಕ್ರೀಡಾಕೂಟ ಆತಿಥ್ಯ ವಹಿಸಲು ಭಾರತ ಸಿದ್ಧ": ಗೋವಾದಲ್ಲಿ ರಾಷ್ಟ್ರೀಯ ಕ್ರೀಡಾಕೂಟ ಉದ್ಘಾಟಿಸಿದ ಪ್ರಧಾನಿ ಮೋದಿ