ETV Bharat / sports

ಪ್ಯಾರಾ ಏಷ್ಯನ್ ಗೇಮ್ಸ್, 2ನೇ ದಿನ: ಭಾರತಕ್ಕೆ 3 ಚಿನ್ನ, ಪದಕ ಪಟ್ಟಿಯಲ್ಲಿ 5ನೇ ಸ್ಥಾನ - ಒಟ್ಟಾರೆ 34 ಪದಕದಿಂದ 5ನೇ ಸ್ಥಾನ

Asian Para Games 2023: 4ನೇ ಪ್ಯಾರಾ ಏಷ್ಯನ್ ಗೇಮ್ಸ್​ನಲ್ಲಿ ಭಾರತೀಯ ಅಥ್ಲೀಟ್​ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು, ಎರಡನೇ ದಿನ 17 ಪದಕ ಬಾಚಿದ್ದಾರೆ.

Asian Para Games 2023
Asian Para Games 2023
author img

By ETV Bharat Karnataka Team

Published : Oct 24, 2023, 10:56 PM IST

ಹ್ಯಾಂಗ್‌ಝೌ (ಚೀನಾ): ಇಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತ ಪದಕ ಗಳಿಕೆಯ ಓಟ ಮುಂದುವರಿಸಿದೆ. ಎರಡನೇ ದಿನವಾದ ಮಂಗಳವಾರ 17 ಪದಕಗಳನ್ನು ಗೆದ್ದುಕೊಂಡಿತು. 3 ಚಿನ್ನ, 6 ಬೆಳ್ಳಿ ಮತ್ತು 8 ಕಂಚಿನ ಪದಕ ಒಳಗೊಂಡಿದೆ. ಒಟ್ಟಾರೆ 34 ಪದಕಗಳನ್ನು ಜಯಿಸಿರುವ ಭಾರತ ಪದಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಚೀನಾ 165, ಇರಾನ್​ 47, ಜಪಾನ್​ 45 ಮತ್ತು ಉಜ್ಬೇಕಿಸ್ತಾನ್​ 38 ಪದಕದಿಂದ ಕ್ರಮವಾದ ಸ್ಥಾನಗಳಲ್ಲಿವೆ.

ದೀಪ್ತಿ ಜೀವನ್‌ಜಿಗೆ ಚಿನ್ನ: ಮಹಿಳೆಯರ 400 ಮೀ-ಟಿ20 ನಲ್ಲಿ ದೀಪ್ತಿ ಜೀವನ್‌ಜಿ ಚಿನ್ನದ ಪದಕ ಗೆದ್ದು ಹೊಸ ಏಷ್ಯನ್ ಪ್ಯಾರಾ ದಾಖಲೆ ಮತ್ತು ಗೇಮ್ಸ್ ದಾಖಲೆ ನಿರ್ಮಿಸಿದರು. ದೀಪ್ತಿ 56.69 ಸೆಕೆಂಡ್‌ಗಳ ದಾಖಲೆ ಸಮಯದಿಂದ ಗುರಿ ತಲುಪಿದರು. ಇದು ಅವರ ವೈಯುಕ್ತಿಕ ಮತ್ತು ಗೇಮ್ಸ್​ನ ಅತ್ಯುತ್ತಮ ಸಮಯವಾಗಿದೆ. ಪುರುಷರ 400ಮೀ. ಟಿ 64 ಫೈನಲ್‌ನಲ್ಲಿ ಅಜಯ್ ಕುಮಾರ್ (54.85) ತಮ್ಮ ವೈಯಕ್ತಿಕ ಅತ್ಯುತ್ತಮ ಸಮಯ ದಾಖಲಿಸಿ ಬೆಳ್ಳಿ ಪದಕ ಪಡೆದರು.

ಪದಕ ಗೆದ್ದ ಸ್ಪರ್ಧೆಗಳು:

  • ಮಾಕನಹಳ್ಳಿ ಶಂಕರಪ್ಪ ಶರತ್ ಪುರುಷರ 5000 ಮೀ. ಟಿ 13 ಸ್ಪರ್ಧೆಯಲ್ಲಿ 20:18.90 ಸಮಯದಿಂದ ಗುರಿ ತಲುಪಿ ಚಿನ್ನದ ಪದಕ ಗೆದ್ದರು.
  • ತಟ್ಟೆ ಎಸೆತದಲ್ಲಿ ಭಾರತೀಯ ಕ್ರೀಡಾಪಟುಗಳು ಕ್ಲೀನ್​ ಸ್ವೀಪ್​ ಸಾಧನೆ ಮಾಡಿದರು. ಪುರುಷರ ಡಿಸ್ಕಸ್ ಥ್ರೋ ಎಫ್ 54/55/56 ಈವೆಂಟ್‌ನಲ್ಲಿ 1014 ಅಂಕದಿಂದ ನೀರಜ್​ ಯಾದವ್​ ಚಿನ್ನಕ್ಕೆ ಮುತ್ತಿಕ್ಕಿದರೆ, ಯೋಗೇಶ್ ಕಥುನಿಯಾ 946 ರಿಂದ ಬೆಳ್ಳಿ ಗೆದ್ದರು. ಮುತ್ತುರಾಜು ಕಂಚಿಗೆ ತೃಪ್ತಿ ಪಡಬೇಕಾಯಿತು.
  • ಪ್ಯಾರಾ ಪವರ್‌ಲಿಫ್ಟಿಂಗ್ ಪುರುಷರ 65 ಕೆಜಿ ತೂಕ ವಿಭಾಗದಲ್ಲಿ ಅಶೋಕ್ ಕಂಚಿನ ಪದಕ ಗೆದ್ದುಕೊಂಡರು.
  • ಪುರುಷರ 1500ಮೀ ಟಿ46 ಫೈನಲ್‌ನಲ್ಲಿ ಭಾರತದ ಇಬ್ಬರು ಅಥ್ಲೀಟ್​ಗಳು ಪದಕ ಗೆದ್ದಿದ್ದಾರೆ. ಅಥ್ಲೀಟ್ ಪರ್ಮೋದ್ 4:09.25 ಸಮಯದೊಂದಿಗೆ ಬೆಳ್ಳಿ ಗೆದ್ದರೆ, ರಾಕೇಶ್ ಭೈರಾ 4:11: 09 ರ ಸಮಯದಿಂದ ಕಂಚಿನ ಪದಕ ಗೆದ್ದಿದ್ದಾರೆ.
  • ಪ್ಯಾರಾ ಶೂಟಿಂಗ್​ನಲ್ಲಿ ರುಬಿನಾ ಫ್ರಾನ್ಸಿಸ್ ಮಹಿಳೆಯರ 10ಮೀ ಏರ್ ಪಿಸ್ತೂಲ್ ಎಸ್​ಎಚ್​1 ಫೈನಲ್​ನಲ್ಲಿ ಕಂಚಿನ ಪದಕ ಗೆದ್ದರು.
  • ರವಿ ರೊಂಗಾಲಿ ಅವರು 9.92 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಪುರುಷರ ಶಾಟ್‌ಪುಟ್ ಎಫ್40 ಈವೆಂಟ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
  • ಪುರುಷರ 10ಮೀ ಏರ್ ಪಿಸ್ತೂಲ್ ಎಸ್​ಎಚ್​​1 ಸ್ಪರ್ಧೆಯಲ್ಲಿ ಭಾರತ ಎರಡು ಪದಕಗಳನ್ನು ಗೆದ್ದಿದೆ. ರುದ್ರಾಂಶ್ ಖಂಡೇಲ್ವಾಲ್ ಬೆಳ್ಳಿ ಮತ್ತು ಮನೀಶ್ ನರ್ವಾಲ್ ಕಂಚಿನ ಪದಕ ಜಯಿಸಿದ್ದಾರೆ.

ಇದನ್ನೂ ಓದಿ: ಡಿಕಾಟ್, ಕ್ಲಾಸೆನ್‌ ಅಬ್ಬರಕ್ಕೆ ಮಣಿದ ಬಾಂಗ್ಲಾ; ಮಹಮದುಲ್ಲಾ ಏಕಾಂಗಿ ಹೋರಾಟ ವ್ಯರ್ಥ; ಪಾಯಿಂಟ್‌ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ದ.ಆಫ್ರಿಕಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.