ನವದೆಹಲಿ: ಭಾರತದ ರೋಹಿತ್ ಚಮೋಲಿ ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಭಾನುವಾರ ನಡೆದ 48 ಕೆಜಿ ವಿಭಾಗದ ಫೈನಲ್ ಹಣಾಹಣಿಯಲ್ಲಿ ಮಂಗೋಲಿಯಾದ ಒಟ್ಗಾನ್‌ಬಯರ್ ತುವ್ಸಿಂಜಯ ವಿರುದ್ಧ ಗೆಲ್ಲುವ ಮೂಲಕ ಸ್ವರ್ಣ ಪದಕಕ್ಕೆ ಮುತ್ತಿಕ್ಕಿತ್ತಿದ್ದಾರೆ.
ಚಂಡೀಗಡ್ ಮೂಲದ ಬಾಕ್ಸರ್ ರೋಮಾಂಚನಕಾರಿಯಾಗಿ ನಡೆದ ಅಂತಿಮ ಹಣಾಹಣಿಯಲ್ಲಿ ಮೊದಲ ಸುತ್ತಿನಲ್ಲಿ ಸೋತರು ಅದ್ಭುತವಾಗಿ ತಿರುಗಿಬಿದ್ದು 3-2 ಬೌಟ್ಗಳ ಅಂತರದಿಂದ ಮಂಗೋಲಿಯನ್ ಬಾಕ್ಸರ್ ವಿರುದ್ಧ ಗೆಲುವು ಸಾಧಿಸಿದರು.
ಇನ್ನು 70 ಕೆಜಿ ವಿಭಾಗದಲ್ಲಿ ಗೌರವ್ ಸೈನಿ ಮತ್ತು 81+ಕೆಜಿ ವಿಭಾಗದಲ್ಲಿ ಭರತ್ ಜೂನ್ ಫೈನಲ್‌ನಲ್ಲಿ ಚಿನ್ನದ ಪದಕಕ್ಕಾಗಿ ಸೆಣಸಾಡಲಿದ್ದಾರೆ. ಸೆಣಸಲಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಮುಸ್ಕಾನ್ (46 ಕೆಜಿ), ವಿಶು ರಥಿ (48 ಕೆಜಿ), ತನು (52 ಕೆಜಿ), ಆಂಚಲ್ ಸೈನಿ (57 ಕೆಜಿ), ನಿಖಿತಾ (60 ಕೆಜಿ), ಮಹಿ ರಾಘವ್ (63 ಕೆಜಿ), ರುದ್ರಿಕಾ (70 ಕೆಜಿ), ಪ್ರಾಂಜಲ್ ಯಾದವ್ (75 ಕೆಜಿ), ಸಂಜನಾ (81 ಕೆಜಿ) ಮತ್ತು ಕೀರ್ತಿ ( 81+ ಕೆಜಿ) ಚಿನ್ನಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.
ಭಾರತ ಜೂನಿಯರ್ ವಿಭಾಗದಲ್ಲಿ ಈಗಾಗಲೇ ಆರು ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ. ದೇವಿಕಾ ಘೋರ್ಪಡೆ(50ಕೆಜಿ), ಅರ್ಜು (54 ಕೆಜಿ) ಮತ್ತು ಸುಪ್ರಿಯಾ ರಾವತ್ (66 ಕೆಜಿ) ಬಾಲಕಿಯರ ವಿಭಾಗದಲ್ಲಿ ಮತ್ತು ಬಾಲಕರ ವಿಭಾಗದಲ್ಲಿ ಆಶಿಶ್ (54 ಕೆಜಿ), ಅಂಶುಲ್ (57 ಕೆಜಿ) ಮತ್ತು ಅಂಕುಶ್ (66 ಕೆಜಿ) ಸೆಮಿಫೈನಲ್ನಲ್ಲಿ ಸೋಲು ಕಂಡು ಕಂಚಿನ ಪದಕ ಪಡೆದಿದ್ದಾರೆ.
ಜೂನಿಯರ್ ವಿಭಾಗದಲ್ಲಿ ಚಿನ್ನದ ಪದಕ ವಿಜೇತರಿಗೆ 4,000 ಯುಎಸ್ ಡಾಲರ್ ಮತ್ತು ಬೆಳ್ಳಿ ಮತ್ತು ಕಂಚು ಗೆದ್ದವರಿಗೆ ಕ್ರಮವಾಗಿ 2,000 ಮತ್ತು 1,000 ಯುಎಸ್ ಡಾಲರ್ ಬಹುಮಾನ ಪಡೆಯಲಿದ್ದಾರೆ.
ಇದನ್ನು ಓದಿ: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ; ಟೇಬಲ್ ಟೆನ್ನಿಸ್‌ನಲ್ಲಿ ಬೆಳ್ಳಿ ಗೆದ್ದು ಭಾವಿನಾ ಪಟೇಲ್ ದಾಖಲೆ